40 ದಿನಗಳ ಪರೋಲ್ ನಲ್ಲಿ ಕಾರಾಗೃಹದಿಂದ ಹೊರಬಂದ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ

ಚಂಡಿಗಡ (ಹರ್ಯಾಣ), ಜ. 21: ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ಸಿಂಗ್ 40 ದಿನಗಳ ಪರೋಲ್ ದೊರಕಿದ ಬಳಿಕ ರೋಹ್ಟಕ್ನ ಸುನರಿಯಾ ಕಾರಾಗೃಹದಿಂದ ಶನಿವಾರ ಬಿಡುಗಡೆಯಾಗಿದ್ದಾರೆ. ಗುರ್ಮಿತ್ ಸಿಂಗ್ ಇಂದು ಮಧ್ಯಾಹ್ನ ಕಾರಾಗೃಹದಿಂದ ಬಿಡುಗಡೆಯಾದರು ಎಂದು ರೋಹ್ಟಕ್ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘‘40 ದಿನಗಳ ಪರೋಲ್ ನೀಡಲಾಗಿದೆ. ನಿಯಮಗಳಿಗೆ ಅನುಗುಣವಾಗಿ ಪರೋಲ್ ನೀಡಲಾಗಿದೆ’’ ಎಂದು ರೋಹ್ಟಕ್ನ ವಿಭಾಗೀಯ ಆಯುಕ್ತ ಸಂಜೀವ್ ವರ್ಮಾ ಅವರು ಶುಕ್ರವಾರ ತಿಳಿಸಿದ್ದಾರೆ.
ಅದು ಅವನ ಹಕ್ಕು:
ಗುರ್ಮಿತ್ ಸಿಂಗ್ ಪರೋಲ್ನಲ್ಲಿ ಬಿಡುಗಡೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅದು ಆತನ ಹಕ್ಕು ಎಂದಿದ್ದಾರೆ. ಅಲ್ಲದೆ, ಎಲ್ಲ ಕಾರ್ಯವಿಧಾನಗಳನ್ನು ಅನುಸರಿಸಿದ ಬಳಿಕ ಅವರು ಪರೋಲ್ ಪಡೆದುಕೊಂಡಿದ್ದಾರೆ. ನಾನು ಅದರಲ್ಲಿ ಹಸ್ತಕ್ಷೇಪ ನಡೆಸಲಾರೆ ಎಂದಿದ್ದಾರೆ.
Next Story





