ಮೂಡುಬಿದಿರೆ: ಕಳವು ಪ್ರಕರಣದ ಆರೋಪಿಯ ಬಂಧನ

ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದ ಬಳಿ ಇರುವ ಮಾರಿಗುಡಿಗೆ ನುಗ್ಗಿ ಗದ್ದುಗೆ ಮಂಟಪದಲ್ಲಿದ್ದ ಮೂರು ಕಾಣಿಕೆ ಡಬ್ಬಗಳನ್ನು ಕಳವುಗೈದಿರುವ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಹೆಜಮಾಡಿಯ ಕೊಕ್ರಾಣಿ ಗ್ರಾಮದ ಕಕ್ವಾ ನಿವಾಸಿ ವಿಜಯ ಯಾನೆ ಕೊಕ್ರಾಣಿ ವಿಜಯ್ ಬಂಧಿತ ಆರೋಪಿ. ಈತ ಜ.15ರಂದು ರಾತ್ರಿ ಮೂಡುಬಿದಿರೆಯ ಮಾರಿಗುಡಿಗೆ ಪ್ರವೇಶಿಸಿ ಕಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದ ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story