ಮಲ್ಪೆಯಲ್ಲಿ ಕಡಲಾಮೆಯ ಕಳೇಬರ ಪತ್ತೆ

ಮಲ್ಪೆ, ಜ.22: ಮಲ್ಪೆ ಸಮುದ್ರ ತೀರದಲ್ಲಿ ರವಿವಾರ ಹೆಣ್ಣು ಕಡಲಾಮೆಯ ಕಳೇಬರ ಪತ್ತೆಯಾಗಿದೆ.
ಈ ಬಗ್ಗೆ ಪ್ರವಾಸಿಗರು ಹಾಗೂ ಸ್ಥಳೀಯರು ನೀಡಿದ ಮಾಹಿತಿಯಂತೆ ಉಡುಪಿ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಅವರ ಮಾರ್ಗ ದರ್ಶನದಲ್ಲಿ ರಿಫೇ ವಾಚ್ ಎನ್‌ಜಿೊದೊಂದಿಗೆ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿ ಸಮುದ್ರ ತೀರದಲ್ಲಿ ಹೂಳಲಾಯಿತು.
ಈ ಕಾರ್ಯಾಚರಣೆಯಲ್ಲಿ ಬೀಟ್ ಫಾರೆಸ್ಟರ್ ಕೇಶವ ಪೂಜಾರಿ, ಅರಣ್ಯ ವೀಕ್ಷಕ ಅಶ್ವಿನ್, ರಿಫೇ ವಾಚ್ ಸಂಸ್ಥೆಯ ಡಾ.ತೇಜಸ್ವಿನಿ ವಿರಿಲ್ ಹಾಗೂ ಕಾರ್ತಿಕ್ ಪಾಲ್ಗೊಂಡಿದ್ದರು.
Next Story