ಉಳ್ಳಾಲ ದರ್ಗಾಕ್ಕೆ ಶೈಖುನಾ ಸ್ವಬಾಹುದ್ದೀನ್ ಅಲ್ ರಿಫಾಯಿ ಭೇಟಿ
ಉಳ್ಳಾಲ, ಜ.22: ಸಂತ ಶ್ರೇಷ್ಠ ರಿಫಾಯಿ ಶೈಖ್‌ರ 16ನೇ ಮರಿಮೊಮ್ಮಗ ಶೈಖುನಾ ಸ್ವಬಾಹುದ್ದೀನ್ ಅಲ್ ರಿಫಾಯಿ ಹುಸೈನಿ ಬಗ್ದಾದ್ ಅವರು ಇತ್ತೀಚೆಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್ ನಡೆಸಿದರು.
ಶೈಖುನಾರೊಂದಿಗೆ ಶೇಖ್ ಮುಹಮ್ಮದ್ ರಬಿಯಾ ತುರ್ಕಿ, ಹಮೀದ್ ಬಾಬ ಶಿರಿಯಾ, ಶಾಸಕ ಯು.ಟಿ.ಖಾದರ್‌ರ ಸಹೋದರ ಯು.ಟಿ.ಝುಲ್ಫಿಕರ್ ಅಲಿ ಇದ್ದರು. ಶೈಖುನಾರನ್ನು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಸೈಯದ್ ಮದನಿ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಹಾಜಿ ಉಸ್ಮಾನ್ ಫೈಝಿ ತೋಡಾರ್, ಉಳ್ಳಾಲ ಕೇಂದ್ರ ಜುಮಾ ಮಸೀದಿ ಇಮಾಮ್ ಅನ್ವರ್ ಅಲಿ ದಾರಿಮಿ, ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ದರ್ಗಾ ಸಮಿತಿ ಸದಸ್ಯರಾದ ಅಲಿಮೋನು ಹಾಗೂ ಅಶ್ರಫ್ ಮುಕ್ಕಚೇರಿ, ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಪರವಾಗಿ ಬರಮಾಡಿಕೊಂಡರು.
Next Story