ನಿಷೇಧಿತ ಅಲೆಗ್ಸಾಂಡ್ರಿಯಾ ಗಿಳಿ ಜಾಲ ಭೇದಿಸಿದ ಸಿಐಡಿ; ನಾಲ್ವರ ಬಂಧನ
ಬೆಂಗಳೂರು, ಜ. 23: ನಿಷೇಧಿತ ವನ್ಯಜೀವಿ ಅಲೆಗ್ಸಾಂಡ್ರಿಯಾ ಪ್ಯಾರಕೀಟ್ ಗಿಳಿಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ಅಬ್ರಾರ್, ಗುರುವಾಯೂರಪ್ಪನ್, ಮುಹಮ್ಮದ್ ರಜಾ, ಕೃಷ್ಣ ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ. ಬಂಧಿತ ಆರೋಪಿಗಳಿಂದ 12 ಜೀವಂತ ಅಲೆಗ್ಸಾಂಡ್ರಿಯಾ ಗಿಳಿಗಳನ್ನು ಜಪ್ತಿ ಮಾಡಿ, ತನಿಖೆ ಮುಂದುವರೆಸಲಾಗಿದೆ ಎಂದು ಸಿಐಡಿ ಹೇಳಿದೆ.
Next Story