ಪುತ್ತೂರು | ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ: ಮೂವರಿಗೆ ಗಾಯ

ಪುತ್ತೂರು: ತಾಲೂಕಿನ ನರಿಮೊಗರು ಶಾಲಾ ಬಳಿ ಮೂರು ಸ್ಕೂಟರ್‌ಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಘಟನೆಯಿಂದ ಮೂರು ಸ್ಕೂಟರ್ ಸವಾರರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಘಟನೆಯಿಂದ ಸ್ಕೂಟರ್‌ನ ಸವಾರರಾದ ಶಾಂತಿಗೋಡು ಉಮರ್, ಶಾಂತಿಗೋಡು ದೇವಸ್ಥಾನದ ಗುಮಸ್ತ ವಿಜಿತ್ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. ಪುತ್ತೂರು ಕಡೆಗೆ ಬರುತ್ತಿದ್ದ ಉಮರ್ ಎಂಬವರ ಸ್ಕೂಟರ್ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ಸ್ಕೂಟರ್‌ಗಳಿಗೆ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
Next Story