ಮುಸ್ಲಿಮ್ ಒಕ್ಕೂಟ ಬ್ರಹ್ಮಾವರ ಘಟಕ ಅಧ್ಯಕ್ಷರಾಗಿ ಮುಹಮ್ಮದ್ ಆಸೀಫ್ ಆಯ್ಕೆ

ಉಡುಪಿ, ಜ.24: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬ್ರಹ್ಮಾವರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಆಸೀಫ್ ಆಯ್ಕೆಯಾಗಿದ್ದಾರೆ.
ಉಪ್ಪಿನಕೋಟೆ ಜಾಮಿಯಾ ಮಸೀದಿಯಲ್ಲಿ ಇಂದು ನಡೆದ ತಾಲೂಕು ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಅಮೀರ್ ಬಾಷಾ, ಉಪಾಧ್ಯಕ್ಷರಾಗಿ ಎಚ್.ಎ.ರಹಮಾನ್, ಜೊತೆ ಕಾರ್ಯ ದರ್ಶಿಯಾಗಿ ಜಮಾಲ್ ಹೈದರ್, ಖಜಾಂಚಿಯಾಗಿ ಅಸ್ಲಮ್ ಹೈಕಾಡಿ ಆಯ್ಕೆಯಾದರು.
ಸಹಕರಣದ ಮೂಲಕ 5 ಮಂದಿ ಹೊಸ ಸದಸ್ಯರು ನಾಮನಿರ್ದೇಶನಗೊಂಡರು. ನಿರ್ಗಮನ ಅಧ್ಯಕ್ಷ ಜಮಾಲುದ್ದೀನ್ ಅಧಿಕಾರ ಹಸ್ತಾಂತರಿಸಿದರು. ಒಕ್ಕೂಟದ ಮಾಜಿ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಹಿತವಚನ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ ಚುನಾವಣೆ ನಡೆಸಿಕೊಟ್ಟರು. ಉಪಾಧ್ಯಕ್ಷ ಸಲಾಹುದ್ದೀನ್ ಅಬ್ದುಲ್ಲಾಹ್, ಜೊತೆ ಕಾರ್ಯ ದರ್ಶಿ ಅಬ್ದುಲ್ ರಝಾಕ್, ಕೇಂದ್ರ ಸಮಿತಿ ಸದಸ್ಯ ಯಾಸೀನ್ ಕೋಡಿಬೇಂಗ್ರೆ ಉಪಸ್ಥಿತರಿದ್ದರು.
Next Story





