Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಏಶ್ಯಾದ ಶೇ.45ರಷ್ಟು ಜನರು ಆರೋಗ್ಯಕರ...

ಏಶ್ಯಾದ ಶೇ.45ರಷ್ಟು ಜನರು ಆರೋಗ್ಯಕರ ಆಹಾರದಿಂದ ವಂಚಿತರು: ಎಫ್ಎಒ ವರದಿ

24 Jan 2023 8:38 PM IST
share
ಏಶ್ಯಾದ ಶೇ.45ರಷ್ಟು ಜನರು ಆರೋಗ್ಯಕರ ಆಹಾರದಿಂದ ವಂಚಿತರು: ಎಫ್ಎಒ ವರದಿ

ಬ್ಯಾಂಕಾಕ್,ಜ.24: ಏಶ್ಯಾದಲ್ಲಿ ದುಬಾರಿ ಬೆಲೆಗಳು ಮತ್ತು ಹದಗೆಡುತ್ತಿರುವ ಬಡತನದೊಂದಿಗೆ ಆಹಾರ ಅಭದ್ರತೆಯು ಹೆಚ್ಚುತ್ತಿದ್ದು ಆಹಾರ ಕೊರತೆಯಿಂದ ಬಳಲುತ್ತಿರುವ ಜನರ ಸಂಖ್ಯೆಯು ಹೆಚ್ಚುತ್ತಿದೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಹಾಗೂ ಯುನಿಸೆಫ್,ಡಬ್ಲುಎಚ್ಒದಂತಹ ವಿಶ್ವಸಂಸ್ಥೆಯ ಇತರ ಏಜೆನ್ಸಿಗಳು ಮಂಗಳವಾರ ಬಿಡುಗಡೆಗೊಳಿಸಿರುವ ವರದಿಯು ಬೆಟ್ಟುಮಾಡಿದೆ.

2021ರಲ್ಲಿ ಸುಮಾರು 50 ಕೋ.ಜನರು (ಈ ಪೈಕಿ ದ.ಏಶ್ಯಾದವರ ಸಂಖ್ಯೆ ಶೇ.80ಕ್ಕೂ ಅಧಿಕ) ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಮತ್ತು 100 ಕೋ.ಗೂ.ಅಧಿಕ ಜನರು ಮಧ್ಯಮದಿಂದ ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದರು ಎಂದು ವರದಿಯು ಹೇಳಿದೆ. ಇದೇ ರೀತಿ ವಿಶ್ವದಲ್ಲಿ ಆಹಾರ ಅಭದ್ರತೆಯು 2014ರಲ್ಲಿದ್ದ ಶೇ.21ರಿಂದ 2021ರಲ್ಲಿ ಶೇ.29ಕ್ಕೆ ಏರಿಕೆಯಾಗಿದೆ.

ಕೋವಿಡ್ ಸಾಂಕ್ರಾಮಿಕವು ಸಾಮೂಹಿಕ ಉದ್ಯೋಗ ನಷ್ಟ ಮತ್ತು ಅಡೆತಡೆಗಳಿಗೆ ಕಾರಣವಾಗುವ ಮೂಲಕ ಭಾರೀ ಹಿನ್ನಡೆಯನ್ನುಂಟು ಮಾಡಿತ್ತು ಮತ್ತು ಉಕ್ರೇನ್ ಯುದ್ದವು ಆಹಾರ,ಇಂಧನ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಗೆ ಕಾರಣವಾಗಿತ್ತು. ಇದರಿಂದಾಗಿ ಕೋಟ್ಯಂತರ ಜನರು ಸಾಕಷ್ಟು ಆಹಾರದಿಂದ ವಂಚಿತರಾಗಿದ್ದರು ಎಂದು ವರದಿಯು ತಿಳಿಸಿದೆ.

ಆ ಎಲ್ಲ ವರ್ಷಗಳಲ್ಲಿ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಗತಿಯು ಸ್ಥಗಿತಗೊಂಡಿತ್ತು ಮತ್ತು ನಂತರ ಹೆಚ್ಚೆಚ್ಚು ಜನರಿಗೆ ಸಾಕಷ್ಟು ಆಹಾರದ ಅಭಾವವುಂಟಾಗಿದ್ದರಿಂದ ಹಿನ್ನಡೆಯನ್ನು ಕಂಡಿತ್ತು. ವಿಶ್ವಸಂಸ್ಥೆಯ ಏಜೆನ್ಸಿಗಳ ಲೆಕ್ಕಾಚಾರದಂತೆ 2021ರಲ್ಲಿ ಅಪೌಷ್ಟಿಕತೆಯ ಪ್ರಮಾಣವು ಶೇ.9.1ರಷ್ಟಿತ್ತು. ಇದು 2000ರಲ್ಲಿದ್ದ ಶೇ.14.3ಕ್ಕಿಂತ ಉತ್ತಮವಾಗಿತ್ತಾದರೂ 2020ಕ್ಕಿಂತ ಕೊಂಚವೇ ಮೇಲಿತ್ತು.

ಇಂತಹ ಅಂಕಿಅಂಶಗಳು ಹಸಿವಿನ ವಿರುದ್ಧದ ಹೋರಾಟದಲ್ಲಿ ಮಂದಗತಿ ಮುಂದುವರಿದಿದೆ ಎನ್ನುವುದನ್ನು ತೋರಿಸುತ್ತಿದೆ ಎಂದಿರುವ ವರದಿಯು,ನಗರಗಳಿಗೆ ವಲಸೆ ಹೋಗಿರುವ ಜನರು ಎದುರಿಸುತ್ತಿರುವ ಹೆಚ್ಚುತ್ತಿರುವ ಆಹಾರ ಅಭದ್ರತೆಯನ್ನೂ ಎತ್ತಿ ತೋರಿಸಿದೆ.

ಪೌಷ್ಟಿಕ ಆಹಾರಗಳನ್ನು ಉತ್ಪಾದಿಸಲು ಮತ್ತು ಆರೋಗ್ಯಕರ ಆಹಾರದ ಸಮಾನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಕೃಷಿ ಆಹಾರ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವುದು ನಿರ್ಣಾಯಕವಾಗಿದೆ ಎಂದು ವರದಿಯು ಹೇಳಿದೆ.

ಕಳೆದ ಹಲವಾರು ವರ್ಷಗಳಲ್ಲಿ ಎಫ್ಎಒದ ಆಹಾರ ಬೆಲೆ ಸೂಚ್ಯಂಕವು ಏರಿಕೆಯಾಗಿದ್ದು,2022 ಮಾರ್ಚ್ನಲ್ಲಿ ದಾಖಲೆ ಮಟ್ಟಕ್ಕೆ ಜಿಗಿದಿತ್ತು. ನಂತರ ಸರಕುಗಳ ಬೆಲೆಗಳಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದ್ದರಿಂದ ಸೂಚ್ಯಂಕವು ಕುಸಿದಿತ್ತಾದರೂ ಈಗಲೂ 2020ರ ಮಟ್ಟಕ್ಕಿಂತ ಶೇ.28ರಷ್ಟು ಅಧಿಕವಾಗಿಯೇ ಇದೆ.

ಏಶ್ಯಾ-ಪೆಸಿಫಿಕ್ ಪ್ರದೇಶವು ಪ್ರತಿ ವರ್ಷ ಎರಡು ಲ.ಕೋ.ಡಾ.ವೌಲ್ಯದ ಆಹಾರವನ್ನು ಆಮದು ಮಾಡಿಕೊಳ್ಳುತ್ತದೆ.ಅಕ್ಕಿ,ಗೋದಿ ಮತ್ತು ತೈಲಗಳಂತಹ ಪ್ರಾಥಮಿಕ ಅಗತ್ಯಗಳ ಹೆಚ್ಚುತ್ತಿರುವ ಬೆಲೆಗಳು ಬಡವರಿಗೆ ಬಲವಾದ ಹೊಡೆತವನ್ನು ನೀಡಿವೆ.

 ಏಶ್ಯಾದಲ್ಲಿ ವಾಸವಾಗಿರುವ ಸುಮಾರು ಶೇ.45ರಷ್ಟು ಅಥವಾ ಸುಮಾರು 200 ಕೋ.ಜನರು ಆರೋಗ್ಯಕರ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದು ರಕ್ತಹೀನತೆ,ಬೊಜ್ಜು ಮತ್ತು ಹಸಿವಿನ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ.

ವಿಶ್ವಬ್ಯಾಂಕ್ನ ದತ್ತಾಂಶಗಳಂತೆ 2015-18ರ ನಡುವೆ ಬಡತನವು ಶೇ.2.6ರಷ್ಟು ಏರಿಕೆಯಾಗಿದೆ.

ಪ್ರಚಲಿತ ಸ್ಥಿತಿಯನ್ನು ವಿವರಿಸಿದ ಎಫ್ಎಒ ವರದಿಯ ಲೇಖಕ ಶ್ರೀಧರ ಧರ್ಮಪುರಿ ಅವರು ಬಡತನ ಮತ್ತು ಅಪೌಷ್ಟಿಕತೆಯಲ್ಲಿ ಹೆಚ್ಚಳ ಒಟ್ಟೊಟ್ಟಿಗೆ ಸಾಗುತ್ತವೆ ಎಂದು ಹೇಳಿದರು.

ಅನಾರೋಗ್ಯಕರ ಆಹಾರ ಕ್ರಮ ಮತ್ತು ಅಸಮರ್ಪಕ ಆಹಾರ ಮಕ್ಕಳು ಕುಬ್ಜತೆ ಅಥವಾ ಕೃಶಕಾಯದಿಂದ ಬಳಲುವಂತೆ ಮತ್ತು ಅವರು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುವುದರಿಂದ ಭವಿಷ್ಯದ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೂ ದುಷ್ಪರಿಣಾಮವನ್ನು ಬೀರುತ್ತವೆ. ಏಶ್ಯಾ-ಪೆಸಿಫಿಕ್ ಪ್ರದೇಶದಲ್ಲಿಯ ಸುಮಾರು ಶೇ.25ರಷ್ಟು ಮಕ್ಕಳು ಕುಬ್ಜತೆಯಿಂದ ಪೀಡಿತರಾಗಿದ್ದಾರೆ ಎಂದು ವರದಿಯು ತಿಳಿಸಿದೆ.

ಏಶ್ಯಾದಲ್ಲಿ 15ರಿಂದ 49 ವರ್ಷ ವಯೋಮಾನದ ಮೂರನೇ ಒಂದರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಮತ್ತು ರಕ್ತಹೀನತೆಯು ತನ್ನ ತೀವ್ರವಾದ ರೂಪಗಳಲ್ಲಿ ಶ್ವಾಸಕೋಶಗಳು ಮತ್ತು ಹೃದಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದೂ ವರದಿಯು ಹೇಳಿದೆ.

 ಕೃಪೆ: newsclick.in

share
Next Story
X