Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೈದರಾಬಾದ್ ವಿವಿಯಲ್ಲಿ ಬಿಬಿಸಿಯ ಮೋದಿ...

ಹೈದರಾಬಾದ್ ವಿವಿಯಲ್ಲಿ ಬಿಬಿಸಿಯ ಮೋದಿ ಸಾಕ್ಷಚಿತ್ರ ಪ್ರದರ್ಶನ ಎಬಿವಿಪಿ ದೂರು: ವರದಿ ಕೇಳಿದ ಅಧಿಕಾರಿಗಳು

24 Jan 2023 9:56 PM IST
share
ಹೈದರಾಬಾದ್ ವಿವಿಯಲ್ಲಿ ಬಿಬಿಸಿಯ ಮೋದಿ ಸಾಕ್ಷಚಿತ್ರ ಪ್ರದರ್ಶನ ಎಬಿವಿಪಿ ದೂರು: ವರದಿ ಕೇಳಿದ ಅಧಿಕಾರಿಗಳು

ಹೈದರಾಬಾದ್, ಜ. 24: 2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪಾತ್ರವನ್ನು ಮರುಪರಿಶೀಲಿಸುವ ಬಿಬಿಸಿ ಸಾಕ್ಷಚಿತ್ರವನ್ನು ಶನಿವಾರ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸಲಾಗಿದೆ. ಇದರ ಬೆನ್ನಿಗೇ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಸಂಬಂಧಪಟ್ಟವರಿಂದ ವರದಿ ಕೇಳಿದ್ದಾರೆ.

‘ಇಂಡಿಯಾ: ದ ಮೋದಿ ಕ್ವೆಶ್ಚನ್’ ಎಂಬ ಹೆಸರಿನ ಸಾಕ್ಷಚಿತ್ರವನ್ನು ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸಿರುವ ಬಗ್ಗೆ ಸಂಸ್ಥೆಯ ಆಡಳಿತಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ದೂರು ಸಲ್ಲಿಸಿದೆ.

ಎರಡು ಭಾಗಗಳ ಸಾಕ್ಷಚಿತ್ರದ ಮೊದಲ ಭಾಗವನ್ನು ಬಿಬಿಸಿಯು ಜನವರಿ 17ರಂದು ಪ್ರಸಾರಿಸಿದೆ.

‘‘ಗಲಭೆಗಳು ನಡೆದಾಗ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮೋದಿ ರಾಜ್ಯದಲ್ಲಿ ಶಿಕ್ಷೆಯ ಭಯವಿರದ ವಾತಾವರಣವೊಂದನ್ನು ಸೃಷ್ಟಿಸಿದ್ದರು. ಅದರಿಂದಾಗಿಯೇ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಯಿತು’’ ಎಂಬುದಾಗಿ ಬ್ರಿಟಿಶ್ ಸರಕಾರ ಕಳಹಿಸಿದ್ದ ತಂಡವೊಂದು ಆರೋಪಿಸಿದೆ ಎಂಬುದಾಗಿ ಸಾಕ್ಷಚಿತ್ರದ ಮೊದಲ ಭಾಗ ಆರೋಪಿಸಿದೆ.

ಹಿಂಸಾಚಾರದ ಬಗ್ಗೆ ಬ್ರಿಟನ್ ಸರಕಾರ ಸಿದ್ಧಪಡಿಸಿದ್ದ ವರದಿಯೊಂದನ್ನೂ ಈ ಸಾಕ್ಷಚಿತ್ರವು ಬಹಿರಂಗಪಡಿಸಿದೆ. ‘‘ಗುಜರಾತ್ ಗಲಭೆಯು ಜನಾಂಗೀಯ ಹತ್ಯೆಯ ಸಕಲ ಗುಣಲಕ್ಷಣಗಳನ್ನೂ ಹೊಂದಿತ್ತು’’ ಎಂಬುದಾಗಿ ಆ ವರದಿ ಹೇಳುತ್ತದೆ.

ಸಾಕ್ಷಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಆದರೆ ಅದನ್ನು ವಿವಿಧ ಯೂಟ್ಯೂಬ್ ಚಾನೆಲ್ಗಳಲ್ಲಿ ಹಾಕಲಾಗಿತ್ತು ಹಾಗೂ ಟ್ವಿಟರ್ ಮೂಲಕ ವ್ಯಾಪಕವಾಗಿ ಪ್ರಸಾರಿಸಲಾಗಿತ್ತು.

ಶುಕ್ರವಾರ, ಭಾರತ ಸರಕಾರವು ಮಾಹಿತಿ ತಂತ್ರಜ್ಞಾನ ನಿಯಮಗಳು, 2021ರ ಅಡಿಯಲ್ಲಿ ಲಭ್ಯವಾಗುವ ತುರ್ತು ಅಧಿಕಾರಗಳನ್ನು ಬಳಸಿಕೊಂಡು, ಸಾಕ್ಷಚಿತ್ರವನ್ನು ತೆಗೆದುಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟರ್ಗೆ ನಿರ್ದೇಶನಗಳನ್ನು ನೀಡಿತ್ತು.

ಸಾಕ್ಷಚಿತ್ರವನ್ನು ತಡೆಹಿಡಿಯುವ ಕೇಂದ್ರ ಸರಕಾರದ ನಿರ್ಧಾರವನ್ನು ಉಲ್ಲೇಖಿಸಿರುವ ಎಬಿವಿಪಿ, ಸಾಕ್ಷಚಿತ್ರವನ್ನು ಪ್ರದರ್ಶಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿಶ್ವವಿದ್ಯಾನಿಲಯ ಅಧಿಕಾರಿಗಳನ್ನು ಕೋರಿದೆ.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಸುಮಾರು 70-80 ವಿದ್ಯಾರ್ಥಿಗಳು ಸಾಕ್ಷಚಿತ್ರವನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ.

ಅನುಮತಿಯಿಲ್ಲದೆ ವಿಶ್ವವಿದ್ಯಾನಿಲಯ ಆವರಣದೊಳಗೆ ಸಾಕ್ಷಚಿತ್ರವನ್ನು ವೀಕ್ಷಿಸಲಾಗಿದೆ ಎಂದು ಎಬಿವಿಪಿ ವಿದ್ಯಾರ್ಥಿ ನಾಯಕರೊಬ್ಬರು ಪಿಟಿಐಗೆ ಹೇಳಿದ್ದಾರೆ.

ವಿಶ್ವವಿದ್ಯಾನಿಲಯ ಆಡಳಿತವು ಕ್ಯಾಂಪಸ್ ಭದ್ರತಾ ಇಲಾಖೆಯಿಂದ ವಿವರವಾದ ವರದಿಯನ್ನು ಕೇಳಿದೆ ಎಂದು ವಕ್ತಾರರೊಬ್ಬರು ಹೇಳಿದರು.

ಚಿತ್ರ ವೀಕ್ಷಣೆ ಶಾಂತಿಯುತ: ಅನಗತ್ಯ ಗೊಂದಲ; ಹೈದರಾಬಾದ್ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘ

ಸಾಕ್ಷಚಿತ್ರ ವೀಕ್ಷಣೆ ವಿಚಾರದಲ್ಲಿ ಕ್ಯಾಂಪಸ್ನ ಹೊರಗಿನವರನ್ನು ತಪ್ಪುದಾರಿಗೆಳೆಯಲಾಗುತ್ತಿದೆ ಎಂದು ಹೈದರಾಬಾದ್ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಿ ಸ್ವಾಮಿ ಹೇಳಿದ್ದಾರೆ. ಸಾಕ್ಷಚಿತ್ರ ವೀಕ್ಷಣೆಯು ಶಾಂತಿಯುತವಾಗಿ ನಡೆದಿದ್ದು, ಈ ವಿಷಯಕ್ಕೆ ಅನಗತ್ಯವಾಗಿ ಅಧಿಕ ಮಹತ್ವ ಕೊಡಲಾಗುತ್ತಿದೆ ಎಂದು ಅವರು ಹೇಳಿದರು.

ಅದೇ ವೇಳೆ, ಎಬಿವಿಪಿಯು ಭಾರತೀಯ ಜನತಾ ಪಕ್ಷದ ಏಜಂಟ್ನಂತೆ ವರ್ತಿಸುತ್ತಿದೆ ಎಂಬುದಾಗಿ ಸಂಘದ ಅಧ್ಯಕ್ಷ ಅಭಿಶೇಕ್ ನಂದನ್ ಆರೋಪಿಸಿದರು.

‘‘ಅದು ಯಾವುದೇ ನಿಷೇಧಿತ ಸಂಘಟನೆಯೊಂದು ನಿರ್ಮಿಸಿದ ಚಿತ್ರವಲ್ಲ. ಜಾಗತಿಕ ಜಾಲ ಹೊಂದಿರುವ ಮಾಧ್ಯಮ ಸಂಸ್ಥೆಯೊಂದು ಆ ಚಿತ್ರವನ್ನು ನಿರ್ಮಿಸಿದೆ’’ ಎಂದು ಅವರು ಹೇಳಿದರು. ‘‘ಅದನ್ನು ಸರಕಾರವಾಗಲಿ, ಯಾವುದೇ ನ್ಯಾಯಾಲಯವಾಗಲಿ ನಿಷೇಧಿಸಿಲ್ಲ. ವಿಶ್ವವಿದ್ಯಾನಿಲಯ ಕ್ಯಾಂಪಸ್ಗಳಲ್ಲಿ ಚರ್ಚಾ ಸಂಸ್ಕೃತಿಗೆ ಪ್ರೋತ್ಸಾಹ ಸಿಗಬೇಕು ಎಂಬುದಾಗಿ ನಾವು ನಂಬಿದ್ದೇವೆ’’ ಎಂದು ಅವರು ಹೇಳಿದರು.

ಕೇರಳದಲ್ಲೂ ಪ್ರದರ್ಶನ: 3 ರಾಜಕೀಯ ಗುಂಪುಗಳಿಂದ ಘೋಷಣೆ

ಈ ನಡುವೆ, ಗುಜರಾತ್ ಗಲಭೆಗೆ ಸಂಬಂಧಿಸಿದ ಬಿಬಿಸಿ ಸಾಕ್ಷಚಿತ್ರವನ್ನು ಕೇರಳದಲ್ಲೂ ಪ್ರದರ್ಶಿಸುವುದಾಗಿ ಕೇರಳದ ಮೂರು ರಾಜಕೀಯ ಗುಂಪುಗಳು ಮಂಗಳವಾರ ಘೋಷಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ರಾಜ್ಯಾದ್ಯಂತ 200 ಸ್ಥಳಗಳಲ್ಲಿ ಸಾಕ್ಷಚಿತ್ರವನ್ನು ಪ್ರದರ್ಶಿಸುವುದಾಗಿ ಸಿಪಿಎಮ್ ಪಕ್ಷದ ಯುವ ಘಟಕವಾಗಿರುವ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯ (ಡಿವೈಎಫ್ಐ) ಫೇಸ್ಬುಕ್ನಲ್ಲಿ ಘೋಷಿಸಿದೆ.

ಇದೇ ರೀತಿಯ ಘೋಷಣೆಗಳನ್ನು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಮತ್ತು ಯುವ ಕಾಂಗ್ರೆಸ್ ಕೂಡ ಹೊರಡಿಸಿವೆ.

‘‘ಜನಾಂಗೀಯ ಹತ್ಯಾಕಾಂಡದ ಪಳೆಯುಳಿಕೆಗಳನ್ನು ಅಧಿಕಾರದಲ್ಲಿರುವವರು ಅಡಗಿಸಿಡಲು ಸಾಧ್ಯವಿಲ್ಲ. ಬಿಬಿಸಿ ಸಾಕ್ಷಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸಲಾಗುವುದು’’ ಎಂದು ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಶಫಿ ಪರಂಬಿಲ್ ಫೇಸ್ಬುಕ್ನಲ್ಲಿ ಬರೆದಿದ್ದಾರೆ.

ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಿ ಸಾಕ್ಷಚಿತ್ರ ಪ್ರದರ್ಶನವನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಬಿಜೆಪಿ ಮನವಿ ಮಾಡಿದೆ.

share
Next Story
X