ಜ.29: ಕೆಜಿಎನ್ ಮಿತ್ತೂರಿನಲ್ಲಿ ಅಜ್ಮೀರ್ ಮೌಲಿದ್, 4ನೇ ಘಟಿಕೋತ್ಸವ

ಬಂಟ್ವಾಳ, ಜ.27: ಮಾಣಿಯ ದಾರುಲ್ ಇರ್ಶಾದ್ ಸಂಸ್ಥೆಯಲ್ಲಿ ಜ.29ರಂದು 33ನೇ ವಾರ್ಷಿಕೋತ್ಸವ, 4 ನೇ ಘಟಿಕೋತ್ಸವ, ಅಜ್ಮೀರ್ ಮೌಲಿದ್, ಏರ್ವಾಡಿ ಶುಹದಾ ನೇರ್ಚೆ ಮಿತ್ತೂರಿನ ಕೆಜಿಎನ್ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 7ಕ್ಕೆ ಏರ್ವಾಡಿ ಮೌಲಿದ್, 9:30ಕ್ಕೆ ಖತಮುಲ್ ಖುರ್‌ಆನ್, 10:30ಕ್ಕೆ ಅಜ್ಮೀರ್ ಮೌಲಿದ್, 11:30ಕ್ಕೆ ಘಟಿಕೋತ್ಸವ, 12 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಕೇರಳ ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಅಸ್ಸೈಯದ್ ಖಲೀಲ್ ಅಲ್ ಬುಖಾರಿ ಕಡಲುಂಡಿ ನೇತೃತ್ವ ವಹಿಸಲಿರುವರು. ಉಡುಪಿ,ದ.ಕ., ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸಲಿರುವರು. ಸಮಸ್ತ ಕೇಂದ್ರ ಮುಶಾಅರ ಕಾರ್ಯದರ್ಶಿ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣಗೈಯಲಿರುವರು. ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಕೆಜಿಎನ್ ದಅವಾ ಕಾಲೇಜಿನ ಪ್ರಾಂಶುಪಾಲರಾದ ಸೈಯದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್- ಅದನಿ ಭಾಗವಹಿಸಲಿರುವರು. ಎಂದು ಪ್ರಕಟನೆ ತಿಳಿಸಿದೆ.