ICC ರ್‍ಯಾಂಕಿಂಗ್ ನಲ್ಲಿ ನಂ.1 ಪಟ್ಟಕ್ಕೇರಿದ ಸಿರಾಜ್: ಟ್ರೋಲ್ ಮಾಡಿದವರು ಕ್ಷಮೆಯಾಚಿಸಬೇಕೆಂದ ಅಭಿಮಾನಿಗಳು

ಹೊಸದಿಲ್ಲಿ: ಟೀಂ ಇಂಡಿಯಾ ವೇಗಿ ಮುಹಮ್ಮದ್ ಸಿರಾಜ್ (Mohammed Siraj) ಅವರು ಏಕದಿನ ಅಂತಾರಾಷ್ಟ್ರೀಯ (ODI) ಬೌಲರ್‌ಗಳ ICC ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರುತ್ತಿದ್ದಂತೆ ಅಭಿಮಾನಿಗಳು ಇದನ್ನು ಸಂಭ್ರಮಿಸಿದ್ದು, ಈ ಹಿಂದೆ ಸಿರಾಜ್‌ರನ್ನು ವ್ಯಂಗ್ಯವಾಡಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಸಿರಾಜ್ ಫಾರ್ಮ್‌ನಲ್ಲಿಲ್ಲದ ಸಮಯದಲ್ಲಿ ಹಲವು ಟೀಕೆಗಳನ್ನು ಎದುರಿಸಿರುವುದನ್ನು ಉಲ್ಲೇಖಿಸಿರುವ ಅಭಿಮಾನಿಗಳು, ಟ್ರೋಲ್ ಮಾಡಿದವರು ಈಗ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಎಬಿನ್ ಜೋಸ್ ಎಂಬವರು ಟ್ವೀಟ್ ಮಾಡಿ, “ಎಲ್ಲರೂ ಅವರನ್ನು ಅನುಮಾನಿಸಿದರು, ಟ್ರೋಲ್ ಮಾಡಿದರು. ಆದರೆ, ಅವರನ್ನು ನಿಸ್ಸಂದೇಹವಾಗಿ ಬೆಂಬಲಿಸಿದ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್‌ಗೆ ಧನ್ಯವಾದಗಳು, ಅವರು ಈ ಕ್ಷಣದ ಅತ್ಯುತ್ತಮ ಬೌಲರ್” ಎಂದು ಬರೆದಿದ್ದಾರೆ.
“ಮಹಮ್ಮದ್ ಸಿರಾಜ್ ಈಗ ವಿಶ್ವದ ಏಕದಿನ ಬೌಲರ್‌ಗಳಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಅವರ ಬಗ್ಗೆ ತುಂಬಾ ಸಂತೋಷವಾಗಿದೆ. 2-3 ವರ್ಷಗಳ ಹಿಂದೆ ಅವರು ಹೇಗೆ ಟ್ರೋಲ್ ಆಗಿದ್ದರು ಎಂಬುದನ್ನು ನೆನಪಿಸಿಕೊಳ್ಳಿ. ಆದರೆ ವಿರಾಟ್ ಕೊಹ್ಲಿ ಅವರಿಗೆ RCB ಮತ್ತು ICT (ಭಾರತೀಯ ಕ್ರಿಕೆಟ್ ತಂಡ) ಎರಡರಲ್ಲೂ ಅವಕಾಶಗಳನ್ನು ನೀಡುತ್ತಲೇ ಇದ್ದರು. ಬುಮ್ರಾ ಅನುಪಸ್ಥಿತಿಯಲ್ಲಿ ಅವರು (ಸಿರಾಜ್) ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ.” ಎಂದು ವಿನೇಶ್ ಪ್ರಭು ಎಂಬವರು ಟ್ವೀಟ್ ಮಾಡಿದ್ದಾರೆ.
“ವರ್ಲ್ಡ್ ಕಪ್ ನಲ್ಲಿ ಶಮಿ ಬದಲು ಸಿರಾಜ್ ಆಡಬೇಕಿತ್ತು ಎಂದಾಗ ನನ್ನ ಮೇಲೆಯೇ ಏರಿ ಬಂದ ಆ ಮೂರ್ಖರು ಎಲ್ಲಿದ್ದಾರೆ. ಪದಗಳಿಗಿಂತ ಕ್ರಿಯೆಗಳು ಜೋರಾಗಿ ಮಾತನಾಡುತ್ತವೆ. ಮಿಯಾನ್ ದೊಡ್ಡ ಕಾರ್ಯವನ್ನು ತೋರಿಸಿದ್ದಾರೆ” ಎಂದು ಯಥಾರ್ತ್ ಎಂಬವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಫುಟ್‌ಬಾಲ್ ಪಂದ್ಯದಲ್ಲಿ ಮೊತ್ತಮೊದಲ ವೈಟ್ ಕಾರ್ಡ್ ಬಳಕೆ: ಈ ಕುರಿತ ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ...
Siraj's story is just as beautiful as it gets, red ball breakthrough season in a place like Australia to then achieving white ball success in a role the team desperately needed and excelling in it so well to become World number 1, what a rise.
— Prashanth S (@ps_it_is) January 25, 2023
Where are those idiots who were on me when I said Siraj should have played instead of Shami in WC .
— (@ymp_1832) January 25, 2023
Actions speak louder than words
Miyan has just showed a big action
Miyan Magic
Mohammad Siraj is now the number 1 ranked ODI bowler in the world
— Vinesh Prabhu (@vlp1994) January 25, 2023
So happy for him... Remember how he used to get trolled 2-3 years back... But Virat Kohli kept giving him chances both in RCB and ICT and in the absence of Bumrah, he's taken over the responsibility well
Your apology needs to be as loud as your disrespect was!
— (@the_ansar_) January 25, 2023
#MohammedSiraj#ICCRankings#ICCAwards #ICCAwards2022 pic.twitter.com/3svr7Jm4IP