ಪಡುಬಿದ್ರಿ: ಬೈಕ್ ಢಿಕ್ಕಿ; ವಿದ್ಯಾರ್ಥಿ ಗಂಭೀರ

ಪಡುಬಿದ್ರಿ: ಬೈಕ್‍ಗೆ ಪಿಕ್‍ಅಪ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ವಿದ್ಯಾರ್ಥಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ನಡೆದಿದೆ.
ಬುಧವಾರ ಬೆಳಿಗ್ಗೆ ಕೋಳಿ ಸಾಗಾಣಿಕೆಯ ಪಿಕ್‍ಅಪ್‍ಗೆ ಹಿಂದಿನಿಂದ ಬರುತ್ತಿದ್ದ ಮೋಟಾರು ಬೈಕ್ ಢಿಕ್ಕಿಯಾಗಿ ನಿಟ್ಟೆ ಡಿಪ್ಲೋಮಾ ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಇ ಆ್ಯಂಡ್ ಇ ವಿಭಾಗದ ವಿದ್ಯಾರ್ಥಿ, ಹೆಜಮಾಡಿ ನಿವಾಸಿ ಮೊಯ್ದಿನ್ ಶಿಯಾಬ್ ಹುಸೈನ್(20) ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
Next Story