ಉಡುಪಿ ನಗರಸಭಾ ಬಿಜೆಪಿ ಸದಸ್ಯೆ ಎಡ್ವಿನ್ ಕರ್ಕಡ ಅಂಬೇಡ್ಕರ್ ಯುವಸೇನೆಗೆ ಸೇರ್ಪಡೆ

ಉಡುಪಿ, ಜ.26: ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಗುರುವಾರ ಉಡುಪಿ ಮದರ್ ಸಾರೋಸ್ ಚರ್ಚಿನ ಡಾನ್ ಬೋಸ್ಕೊ ಹಾಲ್‌ನಲ್ಲಿ ಆಯೋಜಿಸಲಾದ ಭಾರತದ ಸಂವಿಧಾನ ಮತ್ತು ಧರ್ಮರಾಜಕಾರಣ ವಿಚಾರ ಸಂಕಿರಣದಲ್ಲಿ ಉಡುಪಿ ನಗರಸಭಾ ಬಿಜೆಪಿ ಸದಸ್ಯೆ ಎಡ್ವಿನ್ ಕರ್ಕಡ ಅಂಬೇಡ್ಕರ್ ಯುವಸೇನೆಗೆ ಸೇರ್ಪಡೆಗೊಂಡರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಎಡ್ವಿನ್ ಕರ್ಕಡ ಅವರಿಗೆ ಧ್ವಜ ನೀಡುವ ಮೂಲಕ ಸಂಘಟನೆಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಐಕ್ಯತಾ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಸುಂದರ್ ಮಾಸ್ತರ್, ಜಯನ್ ಮಲ್ಪೆ, ಶ್ಯಾಮ್‌ರಾಜ್ ಬಿರ್ತಿ, ಪ್ರಗತಿಪರ ಚಿಂತಕ ಪ್ರೊ.ಫಣಿರಾಜ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲ್‌ದಾಸ್ ಬನ್ನಂಜೆ, ನೇತ್ರ ತಜ್ಞ ಡಾ.ಪ್ರೇಮ್‌ದಾಸ್, ಆನಂದ ಬ್ರಹ್ಮಾವರ, ಶೇಖರ್ ಹೆಜಮಾಡಿ, ಹರೀಶ್ ಸಾಲ್ಯಾನ್ ಮಲ್ಪೆ, ವಾಸುದೇವ ಮುದೂರು, ರಮೇಶ್ ಕೇಳಾರ್ಕಳ ಬೆಟ್ಟು, ವಿಶ್ವನಾಥ ಬೆಳ್ಳಂಪಳ್ಳಿ, ಸುಂದರ್ ಗುಜ್ಜರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.