ಬಿಡುಗಡೆಯಾದ ಮೊದಲ ದಿನವೇ ರೂ. 100 ಕೋಟಿ ಗಳಿಕೆ ಮಾಡಿ ದಾಖಲೆ ಬರೆದ 'ಪಠಾಣ್'
ಮುಂಬೈ: ಬಾಲಿವುಡ್ ಬಾದ್ಶಾ ಶಾರೂಖ್ ಖಾನ್ (Shah Rukh Khan) ಅವರ ಬಹುನಿರೀಕ್ಷಿತ ಚಿತ್ರ 'ಪಠಾಣ್' (Pathaan) ಸಿನಿಮಾದ ಯಶಸ್ಸಿನೊಂದಿಗೆ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ದಾಖಲೆ ನಿರ್ಮಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಬಿಡುಗಡೆಯಾದ ಮೊದಲ ದಿನವೇ ಭಾರತದಲ್ಲಿ ರೂ. 53 ಕೋಟಿ (ತೆಲುಗು ಮತ್ತು ತಮಿಳು ಅವತರಣಿಕೆ ಸೇರಿ ರೂ. 55 ಕೋಟಿ) ಗಳಿಕೆ ಮಾಡುವ ಮೂಲಕ, ಅಂತಹ ದಾಖಲೆ ಮಾಡಿದ ಪ್ರಥಮ ಹಿಂದಿ ಚಿತ್ರ ಎಂಬ ಶ್ರೇಯಕ್ಕೆ 'ಪಠಾಣ್' ಪಾತ್ರವಾಗಿದೆ.
Pinkvilla ಅಂತರ್ಜಾಲ ತಾಣದ ಪ್ರಕಾರ, 'ಪಠಾಣ್' ಚಿತ್ರದ ಭಾರತದಲ್ಲಿನ ಮೊದಲ ದಿನದ ಒಟ್ಟಾರೆ ಗಳಿಕೆ ರೂ. 67 ಕೋಟಿ ಆಗಿದೆ. ಈ ಗಳಿಕೆಯ ಪೈಕಿ ರಾಷ್ಟ್ರೀಯ ಜಾಲ ಹೊಂದಿರುವ ಪಿವಿಆರ್, ಐನಾಕ್ಸ್ ಮತ್ತು ಸಿನೆಪೊಲೀಸ್ ಚಿತ್ರಮಂದಿರಗಳೇ ಶೇ. 50ರಷ್ಟು ಕೊಡುಗೆ ನೀಡಿವೆ. ಅವುಗಳ ಒಟ್ಟಾರೆ ಗಳಿಕೆ ಪ್ರಮಾಣ ರೂ. 27 ಕೋಟಿಯಷ್ಟಿದೆ.
'ಪಠಾಣ್' ಚಿತ್ರ ಬಿಡುಗಡೆಯಾದ ಎರಡನೆಯ ದಿನವು ಗಣರಾಜ್ಯೋತ್ಸವ ದಿನಾಚರಣೆ ಆಗಿರುವುದರಿಂದ ಅದರ ಗಳಿಕೆಯು ದಾಖಲೆ ಪ್ರಮಾಣಕ್ಕೇರಿ, ರೂ. 100 ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: 'ಪಠಾಣ್' ಚಿತ್ರದ ಕುರಿತು ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದು ಹೀಗೆ...