ಸುರತ್ಕಲ್: ಎನ್‌ಐಟಿಕೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಮಂಗಳೂರು, ಜ.26: ಸುರತ್ಕಲ್ ಸಮೀಪದ ಎನ್‌ಐಟಿಕೆಯಲ್ಲಿ 74ನೆ ಗಣರಾಜ್ಯೋತ್ಸವವು ಗುರುವಾರ ನಡೆಯಿತು. ಎನ್‌ಐಟಿಕೆಯ ಎನ್‌ಸಿಸಿ ಕೆಡೆಟ್‌ಗಳು ಭಾರತೀಯ ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.
ಸಂಸ್ಥೆಯ ಪ್ರಭಾರ ನಿರ್ದೇಶಕ ಪ್ರೊ.ಜಿ.ಸಿ.ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎನ್‌ಐಟಿಕೆ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಲಾಯಿತು. ಈ ಸಂದರ್ಭ ಎನ್‌ಐಟಿಕೆಯ ರಿಜಿಸ್ಟ್ರಾರ್, ಡೀನ್‌ಗಳು, ಎಚ್‌ಒಡಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಎನ್‌ಐಟಿಕೆ ವಿದ್ಯಾರ್ಥಿಗಳ ಸಹಿತ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
Next Story