ಕೇಂದ್ರದ ನಿಷೇಧದ ಹೊರತಾಗಿಯೂ BBC ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಕೇರಳ ಕಾಂಗ್ರೆಸ್
ನಮ್ಮ ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಸಾಕ್ಷ್ಯಚಿತ್ರದಿಂದ ಧಕ್ಕೆಯಾಗುವಷ್ಟು ದುರ್ಬಲವಾಗಿದೆಯೇ?: ತರೂರ್ ಪ್ರಶ್ನೆ

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಕುರಿತು ಬಿಬಿಸಿ (BBC) ನಿರ್ಮಿಸಿದ್ದ ಸಾಕ್ಷ್ಯಚಿತ್ರವನ್ನು ಕೇರಳದ ಕಾಂಗ್ರೆಸ್ ಘಟಕವು ತಿರುವನಂತಪುರದಲ್ಲಿ ಪ್ರದರ್ಶಿಸಿದೆ.
ಕೇಂದ್ರ ಸರ್ಕಾರವು ಬಿಬಿಸಿ ಸಾಕ್ಷ್ಯಚಿತ್ರವನ್ನು ಸುಳ್ಳು ಮತ್ತು ಅಜೆಂಡಾ ಎಂದು ಹೇಳಿ ನಿಷೇಧಿಸಿದೆಯಾದರೂ, ಕೇರಳದಲ್ಲಿ ಕಾಂಗ್ರೆಸ್ ಅದನ್ನು ಪ್ರದರ್ಶಿಸಿದೆ.
ಇದೇ ಹಿನ್ನೆಲೆಯಲ್ಲಿ ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ ಆ್ಯಂಟನಿ ಅವರ ಪುತ್ರ ಅನಿಲ್ ಕೆ ಆಂಟನಿ ಅವರು ಪಕ್ಷದ ನಿಲುವನ್ನು ಧಿಕ್ಕರಿಸಿ ರಾಜಿನಾಮೆ ಕೊಟ್ಟಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರವನ್ನು ಅಪಾಯಕಾರಿ, ಇದು ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂಬ ಅನಿಲ್ ಆ್ಯಂಟನಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ತಿರುವನಂತಪುರಂನ ಲೋಕಸಭಾ ಸದಸ್ಯ, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ಅನಿಲ್ ಅವರ ವಾದವು "ಅಪ್ರಬುದ್ಧ" ಎಂದು ಹೇಳಿದ್ದಾರೆ.
“ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವು ಸಾಕ್ಷ್ಯಚಿತ್ರದಿಂದ ಧಕ್ಕೆಯಾಗುವಷ್ಟು ದುರ್ಬಲವಾಗಿದೆಯೇ?" ಎಂದು ತರೂರ್ ಪ್ರಶ್ನಿಸಿದ್ದಾರೆ.







