ನಾವು ಕರಾವಳಿಯನ್ನು ಹಿಂದುತ್ವ ಪ್ರಯೋಗ ಶಾಲೆ ಮಾಡಲು ಹೊರಟಿಲ್ಲ: ಸಿಎಂ ಬೊಮ್ಮಾಯಿ

ಕಾರ್ಕಳ: ನಾವು ಕರಾವಳಿಯನ್ನು ಹಿಂದುತ್ವ ಪ್ರಯೋಗ ಶಾಲೆ ಮಾಡಲು ಹೊರಟಿಲ್ಲ. ಕಾಂಗ್ರೆಸ್ ತುಚ್ಚೀಕರಣ ರಾಜಕೀಯ ಮಾಡುತ್ತಿದೆ. ಒಂದು ವರ್ಗವನ್ನು ತಲೆಯ ಮೇಲೆ ಕೂರಿಸಿಕೊಂಡು ಕುಣಿಸುತ್ತಿದ್ದಾರೆ. ಬಡವರು, ದೀನ ದಲಿತರು, ಹಿಂದುಳಿದ ವರ್ಗ ಸೇರಿದಂತೆ ಹಲವು ವರ್ಷ ಬೆಂಬಲಿಸಿದವರನ್ನು ಇವರು ಕೈಬಿಟ್ಟಿದ್ದಾರೆ. ತುಚ್ಚೀಕರಣ ರಾಜಕೀಯ ಮಾಡಲು ನಾವು ಬಿಡಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಾರ್ಕಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಬಂದಾಗ ರಾಜ್ಯದಲ್ಲಿ ಸೇರುತ್ತಿದ್ದ ಜನಸಾಗರ ನೋಡಿ ಸಿದ್ದರಾಮಯ್ಯ ಭಯಪಟ್ಟಿದ್ದಾರೆ. ಗುಲ್ಬರ್ಗ, ಬೆಂಗಳೂರು, ಮೈಸೂರು, ಮಂಗಳೂರುಗಳಲ್ಲಿನ ಮೋದಿ ಸಭೆ ನೋಡಿ ಗಾಬರಿಪಟ್ಟಿದ್ದಾರೆ. ಸಿದ್ದರಾಮಯ್ಯ ತಮ್ಮ ಭಯ ಅಡಗಿಸಲು ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ಅವರು ಟೀಕಿಸಿದರು.
ಆರ್ಥಿಕ ವಲಯದಲ್ಲಿ ಕರಾವಳಿಗೆ ಪ್ರಮುಖ ಸ್ಥಾನವಿದ್ದು, ಕರಾವಳಿಯ ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ಮೂಲ ಉದ್ಯೋಗಕ್ಕೆ ಬೆಂಬಲ ಕೊಡುವ ಕೆಲಸ ಮಾಡಲಾಗುವುದು. ಕರಾವಳಿಯಲ್ಲಿ ಪ್ರವಾ ಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಕಾರ್ಯಕ್ರಮ ರೂಪಿಸಲಾಗು ವುದು. ಈ ಹಿನ್ನೆಲೆಯಲ್ಲಿ ಕರಾವಳಿಗೆ ಬಜೆಟ್‌ನಲ್ಲಿ ಸೂಕ್ತ ಅನುದಾನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಚಿವ ಸುನೀಲ್ ಕುಮಾರ್, ಎಸ್.ಅಂಗಾರ ಮೊದ ಲಾದವರು ಹಾಜರಿದ್ದರು.