Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ ಜಿಲ್ಲೆಯ ಬುಡಕಟ್ಟು ಜನಾಂಗದವರಿಗೆ...

ಉಡುಪಿ ಜಿಲ್ಲೆಯ ಬುಡಕಟ್ಟು ಜನಾಂಗದವರಿಗೆ ಉಚಿತ ಆರೋಗ್ಯ ತಪಾಸಣೆ

27 Jan 2023 9:38 PM IST
share
ಉಡುಪಿ ಜಿಲ್ಲೆಯ ಬುಡಕಟ್ಟು ಜನಾಂಗದವರಿಗೆ ಉಚಿತ ಆರೋಗ್ಯ ತಪಾಸಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಐ.ಟಿ.ಡಿ.ಪಿ ಇಲಾಖೆ, ಆರೋಗ್ಯ ಇಲಾಖೆ, ಬುಡಕಟ್ಟು ಸಮುದಾಯದ ಸಂಘಟನೆಗಳು ಉಡುಪಿ ಹಾಗೂ ಮಂಗಳೂರಿನ ಯೆನಪೋಯ ಸಂಸ್ಥೆಯ  ಸಹಯೋಗ ದೊಂದಿಗೆ ಜಿಲ್ಲೆಯ ಬುಡಕಟ್ಟು ಜನಾಂಗದವರ ಆರೋಗ್ಯ ತಪಾಸಣೆ ನಡೆಸುವ ಸಲುವಾಗಿ ಮಾರ್ಚ್ 4ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಬೆಳಗ್ಗೆ 9ರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 1ರಂದು ಮಣಿಪುರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಣಿಪುರ, ಮೂಡುಬೆಳ್ಳೆ, ಕುರ್ಕಾಲು ಮತ್ತು ಕಟಪಾಡಿ ವ್ಯಾಪ್ತಿಯವರಿಗೆ, ಫೆ.2ರಂದು ಶಿರ್ವಾ ಗ್ರಾಪಂ ಸಭಾಂಗಣದಲ್ಲಿ ಶಿರ್ವಾ ಮತ್ತು ಕುತ್ಯಾರು ವ್ಯಾಪ್ತಿಯವರಿಗೆ, ಫೆ.3ರಂದು ಪಡುಬಿದ್ರಿ ಗ್ರಾಪಂ ಸಭಾಂಗಣದಲ್ಲಿ ಪಡುಬಿದ್ರಿ, ಎರ್ಮಾಳು, ಹೆಜಮಾಡಿ ಮತ್ತು ಪಲಿಮಾರು ವ್ಯಾಪ್ತಿಯವರಿಗೆ, ಫೆ.7ರಂದು ಕಾಪು ಪುರಸಭೆ ಸಭಾಂಗಣದಲ್ಲಿ ಕಾಪು, ಇನ್ನಂಜೆ, ಮಜೂರು ಮತ್ತು ಮುಳೂರು ವ್ಯಾಪ್ತಿಯವರಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ.

ಫೆ.8ರಂದು ಕೊಲ್ಲೂರು ಗ್ರಾಪಂಸಭಾಂಗಣದಲ್ಲಿ ಕೊಲ್ಲೂರು, ಯಳ್‌ಜಿತ್, ಮೂರೂರು ಮತ್ತು ಅರೆಶಿರೂರು ವ್ಯಾಪ್ತಿಯವರಿಗೆ, ಫೆ.9ರಂದು ಮುದೂರು ಕೊರಗ ಸಮುದಾಯ ಭವನದಲ್ಲಿ ಮುದೂರು ಹಾಗೂ ಜಡ್ಕಲ್ ವ್ಯಾಪ್ತಿ ಯವರಿಗೆ, ಫೆ.10 ರಂದು ಹೆಮ್ಮಾಡಿ ಗ್ರಾಪಂ ಸಭಾಂಗಣದಲ್ಲಿ ತ್ರಾಸಿ, ತಲ್ಲೂರು, ಗಂಗೊಳ್ಳಿ, ಹೆಮ್ಮಾಡಿ ಮತ್ತು ಕಟ್‌ಬೆಲ್ತೂರು ವ್ಯಾಪ್ತಿಯವರಿಗೆ, ಫೆ.15ರಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕೋಟ, ಕೋಟತಟ್ಟು, ಸಾಲಿಗ್ರಾಮ, ಸಾಸ್ತಾನ ಮತ್ತು ವಡ್ಡರ್ಸೆ ವ್ಯಾಪ್ತಿಯವರಿಗೆ, ಫೆ.16ರಂದು ಬಾರ್ಕೂರು ಗ್ರಾಪಂ ಸಭಾಂಗಣದಲ್ಲಿ ಹನೆಹಳ್ಳಿ, ಯಡ್ತಾಡಿ ಮತ್ತು ಬಾರ್ಕೂರು ವ್ಯಾಪ್ತಿಯವರಿಗೆ ಶಿಬಿರ ನಡೆಯಲಿದೆ.

ಫೆ.17ರಂದು ಕಾರ್ಕಳ ಬಂಡೀಮಠ ವಿದ್ಯಾರ್ಥಿನಿಲಯದಲ್ಲಿ ನಕ್ರೆ, ಕಾರ್ಕಳ ಕುಕ್ಕುಂದೂರು ಮತ್ತು ಹಿರ್ಗಾಣ ವ್ಯಾಪ್ತಿಯವರಿಗೆ, ಫೆ.20ರಂದು ಎಲ್ಲೂರು ಗ್ರಾಪಂ ಸಭಾಂಗಣದಲ್ಲಿ ಮುದರಂಗಡಿ, ಎಲ್ಲೂರು, ಬೆಳಪು ಮತ್ತು ಉಚ್ಚಿಲ ವ್ಯಾಪ್ತಿಯವರಿಗೆ, ಫೆ.21ರಂದು ಬೊಮ್ಮರಬೆಟ್ಟು ಗ್ರಾಪಂ ಸಭಾಂಗಣದಲ್ಲಿ ಬೊಮ್ಮರಬೆಟ್ಟು, ಅಂಜಾರು, ಹಿರಿಯಡ್ಕ, ಆತ್ರಾಡಿ, ಹಿರೆಬೆಟ್ಟು, ಗುಡ್ಡೆಂಗಡಿ, ಓಂತಿಬೆಟ್ಟು, ಕುಕ್ಕೆಹಳ್ಳಿ, ಬೆಳ್ಳರ್ಪಾಡಿ, ದೂಪದಕಟ್ಟೆ ಮತ್ತು ಕೋಡಿಬೆಟ್ಟು ವ್ಯಾಪ್ತಿಯವರಿಗೆ, ಫೆ.22ರಂದು ಕೆಂಜೂರು ಕೊರಗ ಸಮುದಾಯ ಭವನದಲ್ಲಿ ಕಳತ್ತೂರು, ನಾಲ್ಕೂರು, ಬೈರಂಪಳ್ಳಿ, ಕೆಮ್ಮಣ್ಣು ಮತ್ತು ಆರೂರು ವ್ಯಾಪಿ ಯವರಿಗೆ ಶಿಬಿರ ನಡೆಯಲಿದೆ.

ಫೆ.23ರಂದು ಆವರ್ಸೆ ಗ್ರಾಪಂ ಸಭಾಂಗಣದಲ್ಲಿ ಆವರ್ಸೆ, ಹೇರಾಡಿ, ಪಾಂಡೇಶ್ವರ ಮತ್ತು ಹೆಗ್ಗುಂಜೆ ವ್ಯಾಪ್ತಿಯವರಿಗೆ, ಫೆ.24ರಂದು ಹಿರೇಬೆಟ್ಟು ಗ್ರಾಪಂ ಸಭಾಂಗಣದಲ್ಲಿ ಮಲ್ಪೆ, ಬಡಗಬೆಟ್ಟು, ಮೂಡುಬೆಟ್ಟು, ಹೆರ್ಗ, ಅಂಬಲಪಾಡಿ, ಶಿವಳ್ಳಿ, ಕಡೆಕಾರು, ಹಿರೇಬೆಟ್ಟು, ಆತ್ರಾಡಿ ಮತ್ತು ಕೆಮ್ಮಣ್ಣು ವ್ಯಾಪ್ತಿಯವರಿಗೆ, ಫೆ.27ರಂದು ಬಸ್ರೂರು ಗ್ರಾಪಂ ಸಭಾಂಗಣದಲ್ಲಿ ಕುಂದಾಪುರ ಪುರಸಭೆ, ಬಸ್ರೂರು, ತೆಕ್ಕಟ್ಟೆ, ಗುಳ್ಳಾಡಿ ಮತ್ತು ಜನ್ನಾಡಿ ವ್ಯಾಪ್ತಿಯವರಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.

ಫೆ.28ರಂದು ಅಂಪಾರು ಗ್ರಾಪಂ ಸಭಾಂಗಣದಲ್ಲಿ ಅಂಪಾರು, ಕಾವ್ರಾಡಿ, ಹೊಸಂಗಡಿ, ಹಳ್ಳಿಹೊಳೆ, ಸಿದ್ಧಾಪುರ ಮತ್ತು ಕರ್ಕುಂಜೆ ವ್ಯಾಪ್ತಿಯವರಿಗೆ, ಮಾರ್ಚ್ 1ರಂದು ಬೈಂದೂರು ಆಶ್ರಮಶಾಲೆಯಲ್ಲಿ ಶಿರೂರು, ಉಪ್ಪುಂದ ಮತ್ತು ತಗ್ಗರ್ಸೆ ವ್ಯಾಪ್ತಿಯವರಿಗೆ, ಮಾ.2ರಂದು ಕಾರ್ಕಳ ಬಂಡೀಮಠ ವಿದ್ಯಾರ್ಥಿ ನಿಲಯದಲ್ಲಿ ಕಾರ್ಕಳ ಪುರಸಭೆ, ಶಿರ್ಲಾಲು, ಪಳ್ಳಿ ಮತ್ತು ರಂಜಾಳ ವ್ಯಾಪ್ತಿಯವರಿಗೆ, ಮಾ.3ರಂದು ನಿಟ್ಟೆ ಗ್ರಾಪಂ ಸಭಾಂಗಣದಲ್ಲಿ ಮುಡಾರು, ನೀರೆ, ಮರ್ಣೆ, ಬೋಳಾ, ನಿಟ್ಟೆ, ಮುದ್ರಾಡಿ, ಶಿರ್ಲಾಲು, ಇನ್ನಾ ಮತ್ತು ಮುಂಡ್ಕೂರು ವ್ಯಾಪ್ತಿಯವರಿಗೆ ಮತ್ತು ಮಾ.4ರಂದು ನಾಡಾ ಕೊರಗ ಸಮುದಾಯ ಭವನದಲ್ಲಿ ಹಕ್ಲಾಡಿ, ಆಲೂರು, ನಾಡಾ ಮತ್ತು ಹೊಸಾಡು ವ್ಯಾಪ್ತಿಯವರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ರಕ್ತದೊತ್ತಡ, ರಕ್ತ ಹೀನತೆ, ಮಧುಮೇಹ, ಬಾಯಿ ಮತ್ತು ದಂತ ಪರೀಕ್ಷೆ, ಗರ್ಭಕಂಠದ ಪರೀಕ್ಷೆ, ಮಕ್ಕಳ ಆರೋಗ್ಯ ತಪಾಸಣೆ, ಸ್ತನದ ಪರೀಕ್ಷೆ (ಮೆಮೋಗ್ರಾಫಿ), ಸಾಮಾನ್ಯ ಸ್ತ್ರೀರೋಗ ಪರೀಕ್ಷೆ, ಕಣ್ಣಿನ ತಪಾಸಣೆ ಹಾಗೂ ಉಚಿತ ಚಿಕಿತ್ಸೆ ಮತ್ತು ಕಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ಆರೋಗ್ಯ ಶಿಬಿರ ಸಂಪೂರ್ಣ ಉಚಿತವಾಗಿದ್ದು, ತಜ್ಞ ವೈದ್ಯರು ತಪಾಸಣೆ ನಡೆಸಿ, ಆರೋಗ್ಯದ ಕುರಿತು ಸಲಹೆ, ಸೂಚನೆ ನೀಡಲಿದ್ದಾರೆ. ಮುಂದಿನ ಎರಡು ವರ್ಷಗಳವರೆಗೆ ಮಂಗಳೂರು ಯೆನಪೋಯ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆಯನ್ನು ಉಚಿತವಾಗಿ ನೀಡಲಿದ್ದು, ಇದಕ್ಕಾಗಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಔಷಧಿ ಮತ್ತು ಆರೋಗ್ಯ ಕಾರ್ಡ್ ವಿತರಿಸಲಾಗುವುದು.

ಮಹಿಳೆಯರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಕ್ಲಿನಿಕ್ ಬಸ್‌ನಲ್ಲಿ ತಪಾಸಣಾ ವ್ಯವಸ್ಥೆ ಇದ್ದು, ಪರಿಶಿಷ್ಟ ವರ್ಗದ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಅಶ್ವಿನಿ ಶೆಟ್ಟಿ ಮೊ.ನಂ: 9964372938 ಅನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share
Next Story
X