ಮಂಗಳೂರು: ‘ಮೀನು ಉತ್ಸವ’ದಲ್ಲಿ ಗಮನ ಸೆಳೆದ ಮೀನಿನಿಂದ ತಯಾರಿಸಿದ ಹಪ್ಪಳ, ಚಕ್ಕುಲಿ

ಮಂಗಳೂರು: ನಗರದ ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜು, ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಮೀನುಗಾರಿಕಾ ಕಾಲೇಜಿನ ಆವರಣದಲ್ಲಿ ಎರಡು ದಿನಗಳ ಕಾಲ ನಡೆಯುವ ‘ಮೀನು ಉತ್ಸವ’ಕ್ಕೆ (ಫಿಶ್ ಫೆಸ್ಟಿವಲ್-2023) ಶುಕ್ರವಾರ ಚಾಲನೆ ನೀಡಲಾಯಿತು.
ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಶಿವಕುಮಾರ್ ಮಗದ ಅಧ್ಯಕ್ಷತೆ ವಹಿಸಿದ್ದರು. ಶನಿವಾರವೂ ಮೀನು ಉತ್ಸವ ನಡೆಯಲಿದೆ.
ಟ್ಯಾಂಕ್‌ಗಳಲ್ಲಿ ಮೀನು ಸಾಕಾಣೆಯೊಂದಿಗೆ ಮೀನು ಕೃಷಿಯ ಅಕ್ವಾಪೋನಿಕ್ಸ್, ಮೀನಿನಿಂದ ತಯಾರಿಸಿದ ಹಪ್ಪಳ, ಚಕ್ಕುಲಿ, ಸಮುದ್ರದಲ್ಲಿ ಕಾಣಸಿಗುವ ಬಗೆಬಗೆಯ ಪಾಚಿ, ಶಿಲೀಂಧ್ರಗಳಿಂದ ತಯಾರಾಗುವ ಔಷಧ, ಸೌಂದರ್ಯವರ್ದಕ ಸಾಮಗ್ರಿ, ಮೀನಿನ ಜಿಲೆಟಿನ್ ಹೀಗೆ ಹಲವು ಮೀನಿನ ಉಪ ಉತ್ಪನ್ನಗಳನ್ನು ‘ಮೀನು ಉತ್ಸವ’ದಲ್ಲಿ ಕಾಣಬಹುದಾಗಿದೆ.
ಪ್ರದರ್ಶನದಲ್ಲಿ ಆಲಂಕಾರಿಕ ಮೀನುಗಳು, ಮೀನಿನ ಮರಿ ಉತ್ಪಾದನಾ ಕೇಂದ್ರದ ಮಾಹಿತಿ, ಮೀನು ಕೃಷಿ ಮಾಡುವ ವಿಧಾನದ ಬಗ್ಗೆ ಮಾಹಿತಿ, ಮೀನಿನ ವಿವಿಧ ಬಗೆಯ ಉತ್ಪನ್ನಗಳ ಕುರಿತಾದ 10ಕ್ಕೂ ಅಧಿಕ ಮಳಿಗೆಗಳಿವೆ.
ಇದನ್ನೂ ಓದಿ: ಮಂಗಳೂರು: ಡ್ರಗ್ಸ್ ಪ್ರಕರಣದ 13 ಮಂದಿ ಆರೋಪಿಗಳಿಗೆ ಜಾಮೀನು
















