Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಕಡಿಮೆ ಆಹಾರ ಸೇವನೆ ಮತ್ತು ಹಸಿವಿನಿಂದ...

ಕಡಿಮೆ ಆಹಾರ ಸೇವನೆ ಮತ್ತು ಹಸಿವಿನಿಂದ ಇರುವುದು ತೂಕವನ್ನು ತಗ್ಗಿಸುವುದಿಲ್ಲ, ಬದಲಿಗೆ ದಪ್ಪವಾಗಿಸುತ್ತದೆ, ಏಕೆ?

ವಿಜಯ ಥಕ್ಕರ್ - indianexpress.comವಿಜಯ ಥಕ್ಕರ್ - indianexpress.com28 Jan 2023 6:24 PM IST
share
ಕಡಿಮೆ ಆಹಾರ ಸೇವನೆ ಮತ್ತು ಹಸಿವಿನಿಂದ ಇರುವುದು ತೂಕವನ್ನು ತಗ್ಗಿಸುವುದಿಲ್ಲ, ಬದಲಿಗೆ ದಪ್ಪವಾಗಿಸುತ್ತದೆ, ಏಕೆ?

ಕಡಿಮೆ ಆಹಾರವನ್ನು ಸೇವಿಸುವುದರಿಂದ ಕ್ಯಾಲರಿಗಳು ಕಡಿಮೆಯಾಗುತ್ತವೆ ಮತ್ತು ದೇಹತೂಕವೂ ಕಡಿಮೆಯಿರುತ್ತದೆ ಎಂದು ಹಲವರು ನಂಬುತ್ತಾರೆ, ಆದರೆ ಅದು ಒಂದು ಮಿಥ್ಯೆಯಾಗಿದೆ. ವಾಸ್ತವದಲ್ಲಿ ಕಡಿಮೆ ಆಹಾರ ಸೇವನೆ ಅಥವಾ ಹಸಿದುಕೊಂಡಿರುವುದು ನಿಮ್ಮನ್ನು ಇನ್ನಷ್ಟು ದಪ್ಪವಾಗಿಸಬಹುದು ಮತ್ತು ಚಯಾಪಚಯವನ್ನು ಮಂದಗೊಳಿಸುತ್ತದೆ. ತೂಕ ಹೆಚ್ಚಾಗುವ ಸಮಸ್ಯೆಯು ಕೂಳುಬಾಕುತನದ ಸಿದ್ಧಾಂತವನ್ನು ಮೀರಿದೆ ಎನ್ನುತ್ತಾರೆ ಹಲವು ತಜ್ಞರು.

ನಾವು ಸೇವಿಸಿದ ಆಹಾರವು ಶಕ್ತಿಯಾಗಿ ಪರಿವರ್ತನೆಗೊಂಡಾಗ ಶರೀರವೂ ತಾಪವನ್ನು ಉತ್ಪಾದಿಸುತ್ತದೆ ಮತ್ತು ಇದು ನಮ್ಮ ಶರೀರದ ಉಷ್ಣತೆಯನ್ನು ನಿಯಂತ್ರಣದಲ್ಲಿರಿಸುತ್ತದೆ.
ಪಚನದ ಸಂದರ್ಭದಲ್ಲಿ ಶರೀರವು ನಾವು ತಿಂದ ಆಹಾರವನ್ನು ವಿಭಜಿಸುವ ಪ್ರಕ್ರಿಯೆಯನ್ನು ಕ್ಯಾಟಾಬಾಲಿಸಂ ಮತ್ತು ಹೀಗೆ ವಿಭಜಿತ ಆಹಾರವು ಮೂಳೆಗಳು, ಸ್ನಾಯುಗಳು, ಅಂಗಗಳು, ಕಿಣ್ವಗಳಂತಹ ದೊಡ್ಡ ಭಾಗಗಳಿಗೆ ಪುನರ್ರಚನೆಗೊಳ್ಳುವ ಪ್ರಕ್ರಿಯೆಯನ್ನು ಅನಾಬಾಲಿಸಂ ಎಂದು ಕರೆಯಲಾಗುತ್ತದೆ.

ಕ್ಯಾಟಾಬಾಲಿಸಂ ಮತ್ತು ಅನಾಬಾಲಿಸಂ ಇವುಗಳನ್ನು ಮೆಟಾಬಾಲಿಸಂ ಅಂದರೆ ಚಯಾಪಚಯ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಹೈಪೊಥಾಲಮಸ್ ಅಥವಾ ಮಸ್ತಿಷ್ಕ ನಿಮ್ನಾಂಗವು ನಿಯಂತ್ರಿಸುತ್ತದೆ. ಶರೀರದ ಅಗತ್ಯಕ್ಕೆ ಸಂಬಂಧಿಸಿ ಶರೀರದಲ್ಲಿ ಲಭ್ಯವಿರುವ ಶಕ್ತಿ ಆಧಾರದಲ್ಲಿ ಈ ಚಯಾಪಚಯ ಪ್ರಕ್ರಿಯೆ ಹೆಚ್ಚು ಅಥವಾ ಕಡಿಮೆ ಆಗುತ್ತಿರುತ್ತದೆ. ಆಹಾರದ ಮೂಲಕ ನಾವು ಪಡೆಯುವ ಶಕ್ತಿಯನ್ನು ಕ್ಯಾಲರಿಗಳಲ್ಲಿ ಅಳೆಯಲಾಗುತ್ತದೆ. ನಾವು ಕುಳಿತಿದ್ದಾಗ ಅಥವಾ ಮಲಗಿದ್ದಾಗ ಕೀಲುಗಳು ಚಲನೆಯಲ್ಲಿ ಇಲ್ಲದಿದ್ದಾಗಲೂ ಮತ್ತು ಸ್ನಾಯುಗಳು ವಿಶ್ರಾಂತಿಯಲ್ಲಿ ಇದ್ದಾಗಲೂ ಶರೀರವು ಕ್ಯಾಲರಿಗಳ ದಹನವನ್ನು ಮುಂದುವರಿಸುತ್ತದೆ.

ನಾವು ಸೇವಿಸುವ ಆಹಾರವು ಶರೀರದ ಶಕ್ತಿ ಅಗತ್ಯಗಳನ್ನು ಪೂರೈಸದಿದ್ದಾಗ ಶರೀರವು ಬುದ್ಧಿವಂತಿಕೆಯಿಂದ ಅದಕ್ಕೆ ಹೊಂದಿಕೊಳ್ಳುತ್ತದೆ. ಚಯಾಪಚಯವನ್ನು ಮಂದಗೊಳಿಸುವ ಮೂಲಕ ಶರೀರವು ಅದನ್ನು ಕಡಿಮೆ ಆಹಾರ ಸೇವನೆಗೆ ಸರಿದೂಗಿಸುತ್ತದೆ. ಅಂದರೆ ಶಕ್ತಿಯ ವ್ಯಯವು ಕಡಿಮೆಯಾಗುತ್ತದೆ ಮತ್ತು ಇದರ ಭಾಗವು ಉಷ್ಣ ಉತ್ಪಾದನೆಯನ್ನು ತಗ್ಗಿಸುತ್ತದೆ, ಇದೇ ಕಾರಣದಿಂದ ಕಡಿಮೆ ಕ್ಯಾಲರಿಗಳ ಡಯಟ್ ನಮ್ಮ ಶರೀರಕ್ಕೆ ಚಳಿ ಮತ್ತು ತಂಪಿನ ಭಾವನೆಯನ್ನುಂಟು ಮಾಡುತ್ತದೆ.

ನಮ್ಮಲ್ಲಿ ಹೆಚ್ಚುವರಿ ಸಂಪತ್ತು ಇದ್ದಾಗ ನಾವು ದುಂದುವೆಚ್ಚ ಮಾಡುತ್ತೇವೆ ಮತ್ತು ಸಂಪತ್ತು ಕುಸಿದಾಗ ಮಿತವ್ಯಯದ ಮಾರ್ಗವನ್ನು ಹುಡುಕುತ್ತೇವೆ. ಆಹಾರವು ಕಡಿಮೆಯಿದ್ದಾಗ ಮುಂದಿನ ಉಳಿವಿಗಾಗಿ ಇಂಧನವನ್ನು ಸಂರಕ್ಷಿಸಲು ಶಕ್ತಿಯ ವ್ಯಯವನ್ನು ತಗ್ಗಿಸಲು ನಮ್ಮ ಮಿದುಳು ಇದೇ ತರ್ಕವನ್ನು ಬಳಸುತ್ತದೆ. ಇದು ಕ್ಷಾಮದ ಸಂದರ್ಭಗಳಲ್ಲಿ ಬದುಕುಳಿಯಲು ಶರೀರವು ಅಳವಡಿಸಿಕೊಂಡಿರುವ ಕಾರ್ಯತಂತ್ರವಾಗಿದೆ. ಇಂದಿನ ಜಗತ್ತಿನಲ್ಲಿ ಅದೃಷ್ಟವಶಾತ್ ಬರಗಾಲಗಳು ಕಡಿಮೆ,ಆದರೆ ತಮ್ಮ ಆಹಾರ ಸೇವನೆ ಕ್ಯಾಲರಿಗಳ ವ್ಯಯಕ್ಕಿಂತ ಹೆಚ್ಚಾಗಿರುವುದರಿಂದ ಶರೀರವು ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ,ಹೀಗಾಗಿ ಹೆಚ್ಚುವರಿ ಕ್ಯಾಲರಿಗಳು ಶರೀರದಲ್ಲಿ ದಾಸ್ತಾನಾಗಿರುತ್ತವೆ ಎಂದು ದೇಹತೂಕವನ್ನು ಗಳಿಸುವ ಹಲವರು ಭಾವಿಸುತ್ತಾರೆ.

ಆಹಾರ ಮತ್ತು ಕ್ಯಾಲರಿ ಸೇವನೆಯನ್ನು ಕಡಿಮೆ ಮಾಡುವುದು ಈ ಸಮಸ್ಯೆಗೆ ಪರಿಹಾರ ಎನ್ನುವುದು ಹಲವರ ನಂಬಿಕೆಯಾಗಿದೆ. ತೂಕವನ್ನು ಕಳೆದುಕೊಳ್ಳಲು ಈ ಕಾರ್ಯತಂತ್ರವು ಆರಂಭದಲ್ಲಿ ಉತ್ತಮ ಹೌದು,ಏಕೆಂದರೆ ಅಧಿಕ ಕ್ಯಾಲರಿಗಳ ಆಹಾರ ಸೇವನೆಯಿಂದಾಗಿ ಶರೀರದಲ್ಲಿ ಹೆಚ್ಚು ನೀರಿನ ನಷ್ಟವುಂಟಾಗುತ್ತದೆ. ಡಯಟ್ ನ ಮೊದಲ ಕೆಲವು ವಾರಗಳಲ್ಲಿ ಕ್ಯಾಲರಿಗಳು ಕಡಿಮೆಯಾದಾಗ ಶರೀರವು ನೀರಿನ ತೂಕವನ್ನು ಕಳೆದುಕೊಳ್ಳುತ್ತದೆ. ಭೇದಾತ್ಮಕ ತೂಕ ದೃಷ್ಟಿಕೋನದಲ್ಲಿ ನೀರಿನ ನಷ್ಟಕ್ಕೆ ಸಂಬಂಧಿಸಿದಂತೆ ಕೊಬ್ಬು ಕರಗುವಿಕೆಯು ನಿಧಾನವಾಗುತ್ತದೆ. ಶರೀರವು ಒಮ್ಮೆ ನೀರಿನ ತೂಕವನ್ನು ಕಳೆದುಕೊಂಡರೆ ಕೊಬ್ಬಿನ ತೂಕವು ಅತ್ಯಂತ ನಿಧಾನವಾಗಿ ನಷ್ಟಗೊಳ್ಳುತ್ತದೆ. ಈ ಕ್ರಮೇಣ ಪ್ರಕ್ರಿಯೆಯು ಕಡಿಮೆ ಕ್ಯಾಲರಿಗಳ ಡಯಟ್ ಯಾವುದೇ ಫಲಿತಾಂಶವನ್ನು ನೀಡಿಲ್ಲ ಎಂಬ ಭಾವನೆಯನ್ನು ವ್ಯಕ್ತಿಯಲ್ಲಿ ಉಂಟು ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಮಸ್ತಿಷ್ಕ ನಿಮ್ನಾಂಗವು ಶರೀರದ ಕಾರ್ಯಗಳನ್ನು ನಿಧಾನಿಸುವ ಮೂಲಕ ಶಕ್ತಿಯ ವ್ಯಯವನ್ನು ತಗ್ಗಿಸಿರುತ್ತದೆ ಮತ್ತು ಕೃಶ ಸ್ನಾಯು ಕೋಶಗಳನ್ನು ಕಳಚಿಕೊಳ್ಳುತ್ತದೆ. ಎರಡನೆಯ ಹಂತದಲ್ಲಿ ಶರೀರವು ಆಹಾರ ಬಯಸುವ ವರ್ತನೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಇದು ತನ್ನೊಂದಿಗೆ ದಣಿವು, ಖಿನ್ನತೆಯನ್ನು ತರುತ್ತದೆ. ಕ್ರಮೇಣ ಹೆಚ್ಚಿನ ಹಸಿವು ಮತ್ತು ನಿಧಾನ ಚಯಾಪಚಯದಿಂದಾಗಿ ತೂಕವನ್ನು ಮರುಗಳಿಸಿಕೊಳ್ಳಲು ವ್ಯಕ್ತಿಯು ಅಗತ್ಯ ಕ್ಯಾಲರಿಗಳನ್ನು ಸೇವಿಸುವುದು ಅನಿವಾರ್ಯವಾಗುತ್ತದೆ. ಹೀಗೆ ಡಯಟಿಂಗ್ ನ ಇಂತಹ ಪ್ರತಿ ಹಾನಿಕಾರಕ ಚಕ್ರವು ವ್ಯಕ್ತಿಯು ಕ್ಷಣಿಕವಾಗಿ ನೀರಿನ ತೂಕವನ್ನು ಕಳೆದುಕೊಳ್ಳುತ್ತ ಕೊಬ್ಬನ್ನು ಗಳಿಸಿಕೊಳ್ಳುವಂತೆ ಮಾಡುತ್ತದೆ ಮತ್ತು ಇದೇ ವೇಳೆ ಕೊಬ್ಬಿನ ತೂಕವು ತಾತ್ಕಾಲಿಕವಾಗಿ ಇಳಿಕೆಯಾಗಿದೆ ಎಂಬ ಭಾವನೆಯನ್ನುಂಟು ಮಾಡುತ್ತದೆ.

ಹೀಗಾಗಿ ಸಮೃದ್ಧ ಪ್ರೋಟಿನ್, ಆರೋಗ್ಯಕರ ಕೊಬ್ಬುಗಳು ಮಂದ ಕಾರ್ಬೊಹೈಡ್ರೇಟ್ಗಳನ್ನು ಒಳಗೊಂಡಿರುವ ಡಯಟ್ ನಮಗೆ ಅತ್ಯಂತ ಸೂಕ್ತವಾಗುತ್ತದೆ, ಇವೆಲ್ಲ ರಕ್ತದಲ್ಲಿಯ ಸಕ್ಕರೆ ಮಟ್ಟ ಗಣನೀಯವಾಗಿ ಹೆಚ್ಚದಂತೆ ನೋಡಿಕೊಳ್ಳುತ್ತವೆ.

ಕೃಪೆ: indianexpress.com

share
ವಿಜಯ ಥಕ್ಕರ್ - indianexpress.com
ವಿಜಯ ಥಕ್ಕರ್ - indianexpress.com
Next Story
X