ನಿಯಾಶ ಆರ್ಯುವೇದ ಆಸ್ಪತ್ರೆ ಉದ್ಘಾಟನೆ

ಉಳ್ಳಾಲ: ಆರ್ಯುವೇದ ಆಸ್ಪತ್ರೆಗೆ ಸಮಾನ್ಯ ಜನರು ಬರುವುದು ಜಾಸ್ತಿ, ಆರ್ಯುವೇದ ವಿಶ್ವ ಮಾನ್ಯತೆ ಪಡೆಯುವ ಕಾಲವಿದು. ಈ ಕಾಲದಲ್ಲಿ ಪಂಚಕರ್ಮಕ್ಕೆ ಹೆಚ್ಚು ಒತ್ತು ಸಿಗುತ್ತದೆ. ಉಪಯೋಗ ಚಿಕಿತ್ಸಾ ಪದ್ಧತಿ ಕೂಡ ಇದಾಗಿದೆ ಎಂದು ರಘುರಾಮ ಭಟ್ ಹೇಳಿದರು.
ಅವರು ಯೆನೆಪೋಯ ಆರ್ಯುವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ವತಿಯಿಂದ ಪಂಡಿತ್ ಹೌಸ್ ನಲ್ಲಿ ನಿಯಾಶ ಕಟ್ಟಡದಲ್ಲಿ ಆರಂಭಗೊಂಡ ನಿಯಾಶ ಆರ್ಯುವೇದವನ್ನು ಉದ್ಘಾಟಿಸಿ ಮಾತನಾಡಿದರು.
ನಟ ಗುರುಕಿರಣ್ ಮಾತನಾಡಿ, ಆರ್ಯುವೇದ ಚಿಕಿತ್ಸೆ, ಆಸ್ಪತ್ರೆ ವೇಗದಲ್ಲಿ ಬೆಳೆಯುತ್ತಿದೆ. ಬಹಳಷ್ಟು ಸಮಸ್ಯೆಗಳಿಗೆ ಆರ್ಯುವೇದದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ ಆಗುತ್ತದೆ ಎಂದರು.
ಯೆನೆಪೋಯ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಹ ಕುಲಪತಿ ಡಾ.ಶ್ರೀಪತಿ ರಾವ್ ನಿಯಾಶ ಯೂತ್ ಹೊಟೇಲ್ ಡೈರೆಕ್ಟರ್ ರಮೇಶ್ ಬೋಳಾರ್, ಡಾ.ಮುರಳೀಧರ ಶರ್ಮಾ ಉಪಸ್ಥಿತರಿದ್ದರು.
ಡೀನ್ ಗುರು ರಾಜಾ ಸ್ವಾಗತಿಸಿದರು ವಿದ್ಯಪ್ರಭಾ ವಂದಿಸಿದರು.ಜೆನಿಟಾ ಕಾರ್ಯಕ್ರಮ ನಿರೂಪಿಸಿದರು
