ಮೇಳಗಳ ಆಟದ ವೇಳೆ ಯಕ್ಷಗಾನ ಸಮ್ಮೇಳನದ ಪ್ರಚಾರ

ಉಡುಪಿ: ಫೆಬ್ರವರಿ 11 ಮತ್ತು 12ರಂದು ಉಡುಪಿ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನದ ಪ್ರಚಾರಾರ್ಥವಾಗಿ ಸುಮಾರು 40 ವೃತ್ತಿ ಮೇಳಗಳಲ್ಲಿ ಬ್ಯಾನರನ್ನು ಅಳವಡಿಸಲಾಗುತ್ತಿದೆ.
ಗಣರಾಜ್ಯೋತ್ಸವ ದಿನದಂದು ಶಿರಿಯಾರದಲ್ಲಿ ನಡೆದ ಮಂದಾರ್ತಿ ಮೇಳದ ಆಟದ ಸಂದರ್ಭದಲ್ಲಿ ಚೌಕಿಯಲ್ಲಿ ಗಣಪತಿ ದೇವರ ಮುಂಭಾಗದಲ್ಲಿ ಹಾಗೂ ಕಲಾವಿದರ ಸಮ್ಮುಖದಲ್ಲಿ ಬ್ಯಾನರನ್ನು ಅನಾವರಣ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ. ಎಲ್. ಹೆಗಡೆ, ಪ್ರಧಾನ ಸಂಚಾಲಕ ಪಿ. ಕಿಶನ್ ಹೆಗ್ಡೆ, ಮುರಲಿ ಕಡೆಕಾರ್ ಮತ್ತು ಮೇಳದ ಮೆನೇಜರ್ ನರಾಡಿ ಭೋಜರಾಜ್ ಶೆಟ್ಟಿ ಅವರೊಂದಿಗೆ ಮೇಳದ ಕಲಾವಿದರು ಉಪಸ್ಥಿತರಿದ್ದರು.
ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಡಾ. ಹೆಗಡೆ, ಫೆಬ್ರವರಿ 11 ಮತ್ತು 12ರಂದು ಯಕ್ಷಗಾನದ ಎಲ್ಲಾ ಕಲಾವಿದರು ಈ ಸಮ್ಮೇಳನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
Next Story