ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ಮುಹಮ್ಮದ್ ಆಸೀಫ್ ಆಯ್ಕೆ

ಬ್ರಹ್ಮಾವರ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಬ್ರಹ್ಮಾವರ ತಾಲೂಕಿನ 2023-2024 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಸಭೆಯಲ್ಲಿ ಮುಹಮ್ಮದ್ ಆಸೀಫ್ ರವರು ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹೆಚ್. ಎ. ರಹ್ಮಾನ್, ಕಾರ್ಯದರ್ಶಿಯಾಗಿ ಅಮೀರ್ ಭಾಷ ಬಾರ್ಕುರ್, ಜತೆ ಕಾರ್ಯದರ್ಶಿಯಾಗಿ ಜಮಾಲ್ ಹೈದರ್, ಕೋಶಾಧಿಕಾರಿಯಾಗಿ ಅಸ್ಲಮ್ ಹೈಕಾಡಿ ಯವರನ್ನು ನೇಮಿಸಲಾಯಿತು.
ತಾಜುದ್ದೀನ್ ಇಬ್ರಾಹೀಂ, ಅಬ್ದುಲ್ ಮುಬಾರಕ್, ಜಮಾಲುದ್ದೀನ್, ಅಫ್ತಾಬ್ ಕೊಳಂಬೆ ,ಮುಹಮ್ಮದ್ ಹನೀಫ್ ಹೊನ್ನಾಳ, ನಯಾಜ್ ಗಾಂಧಿನಗರ , ಹಾರೂನ್ ರಶೀದ್ ಸಾಸ್ತಾನ,ಮಹಮ್ಮದ್ ಜಹಾರಾನ್ ಕೋಟ ,ಜಹೀರ್ ಮುಹಮ್ಮದ್ ಅಲಿ ಮತ್ತು ಕೆ.ಎಮ್. ಆಬಿದ್ ಹುಸೈನ್ ತಾಲೂಕು ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
ಮುಹಮ್ಮದ್ ರಫೀಕ್ ಪಣಿಯೂರು, ಕೆ. ಹಾತಿಮ್ ಕುಂಜಾಲ್, ಚಾಂದ್ ಇಬ್ರಾಹೀಮ್ ಮಟಪಾಡಿ ,ಆರಿಫ್ ಗಾಂಧಿನಗರ ಇವರನ್ನು ತಾಲೂಕು ಸಮಿತಿಗೆ ನಾಮ ನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ನಿರ್ಗಮನ ಅಧ್ಯಕ್ಷರಾದ ಜಮಾಲುದ್ದೀನ್ ರವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
ತಾಜುದ್ದೀನ್ ಇಬ್ರಾಹೀಂ ಸ್ವಾಗತಿಸಿದರು.
ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಇದ್ರಿಸ್ ಹೂಡೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಸಲಾಹುದ್ದಿನ್ ಅಬ್ದುಲ್ಲಾ ಚುನಾವಣಾ ಪ್ರಕ್ರಿಯೆ ನ ಡೆಸಿದರು.
ಜಿಲ್ಲಾ ಜತೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಸಹಕರಿಸಿದರು.