Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹಿಂಡೆನ್‌ಬರ್ಗ್ ವರದಿಯ ಹೊರತಾಗಿಯೂ...

ಹಿಂಡೆನ್‌ಬರ್ಗ್ ವರದಿಯ ಹೊರತಾಗಿಯೂ ಎಫ್‌ಪಿಓ ಶೇರುಗಳ ಬಿಡುಗಡೆಗೆ ಅದಾನಿ ನಿರ್ಧಾರ

ಶೇರು ಮಾರಾಟ ದರ, ದಿನಾಂಕಗಳಲ್ಲಿ ಬದಲಾವಣೆ ಇಲ್ಲ

29 Jan 2023 10:30 PM IST
share
ಹಿಂಡೆನ್‌ಬರ್ಗ್ ವರದಿಯ ಹೊರತಾಗಿಯೂ ಎಫ್‌ಪಿಓ ಶೇರುಗಳ ಬಿಡುಗಡೆಗೆ ಅದಾನಿ ನಿರ್ಧಾರ
ಶೇರು ಮಾರಾಟ ದರ, ದಿನಾಂಕಗಳಲ್ಲಿ ಬದಲಾವಣೆ ಇಲ್ಲ

ಹೊಸದಿಲ್ಲಿ,ಜ.29: ಲೆಕ್ಕಪತ್ರ ವಂಚನೆ ಹಾಗೂ ಶೇರು ಬೆಲೆಗ ಹೆಚ್ಚಳದಲ್ಲಿ ಅಕ್ರಮವೆಸಗಿರುವುದಾಗಿ ತನ್ನ ವಿರುದ್ಧ ಅಮೆರಿಕದ ವಿತ್ತೀಯ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್(Hindenburg) ಮಾಡಿರುವ ಆರೋಪಗಳ ಹೊರತಾಗಿಯೂ, ಆದಾನಿ ಉದ್ಯಮ ಸಮೂಹ ಎಫ್‌ಪಿಓ (Follow on Public Offer) ಶೇರುಗಳ ಮಾರಾಟದ ಮೂಲಕ 20 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸುವ ತನ್ನ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ. ಅಲ್ಲದೆ ಕಂಪೆನಿಯ ಎಫ್‌ಪಿಓ(FPO) ಶೇರುಗಳ ನಿಗದಿತ ದರ ಹಾಗೂ ಬಿಡುಗಡೆಯ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲವೆಂಬುದಾಗಿಯೂ ಅದು ತಿಳಿಸಿದೆ.

‘‘ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಎಫ್‌ಪಿಓ ಶೇರುಗಳ ಬಿಡುಗಡೆ ನಿಗದಿಯಂತೆ ನಡೆಯಲಿದೆ ಹಾಗೂ ಅವುಗಳ ವೌಲ್ಯ ಕೂಡಾ ಈ ಹಿಂದೆ ಘೋಷಿಸಿದಷ್ಟೇ ಇರಲಿದೆ. ಶೇರುಗಳ ನಿಗದಿತ ದರ ಹಾಗೂ ಬಿಡುಗಡೆಯ ದಿನಾಂಕಲ್ಲಿ ಯಾವುದೇ ಬದಲಾವಣೆ ಇಲ್ಲ’’ ಎಂದು ಉದ್ಯಮ ಸಮೂಹದ ವಕ್ತಾರರು ತಿಳಿಸಿದ್ದಾರೆ.ಅದಾನಿ ಸಮೂಹದ ಎಫ್‌ಪಿಓ ಶೇರುಗಳ ಮಾರಾಟ ಶುಕ್ರವಾರ ಆರಂಭಗೊಂಡಿದ್ದು, ಈವರೆಗೆ ಬಿಡುಗಡೆಗೊಳಿಸಲಾದ 4.55 ಕೋಟಿ ಶೇರುಗಳ ಪೈಕಿ 4.7 ಲಕ್ಷ ಶೇರುಗಳ ಮಾತ್ರವೇ ಖರೀದಿಯಾಗಿದೆ ಎಂದು ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಲಭ್ಯವಾದ ಮಾಹಿತಿಗಳಿಂದ ತಿಳಿದುಬಂದಿದೆ.

ಹಿಂಡೆನ್‌ಬರ್ಗ್ ವರದಿ ಪ್ರಕಟವಾದ ಬಳಿಕ, ಅದಾನಿ ಎಂಟರ್‌ಪ್ರೈಸಸ್‌ನ ಶೇರುಗಳ ವೌಲ್ಯವು ಕೊಡುಗೆ ದರ (Offer price)ಕ್ಕಿಂತ ಶೇ.20ರಷ್ಟು ಕುಸಿತವನ್ನು ಕಂಡಿವೆ. ಅದಾನಿ ಸಮೂಹವು ದಶಕಗಳಿಂದ ಶೇರು ವ್ಯವಹಾರಗಳಲ್ಲಿ ಅಕ್ರಮವನ್ನು ನಡೆಸಿದೆ ಹಾಗೂ ಲೆಕ್ಕಪತ್ರದಲ್ಲಿ ವಂಚನೆ ಎಸಗಿದೆಯೆಂದು ಹಿಂಡೆನ್‌ಬರ್ಗ್ ವಿತ್ತೀಯ ಸಂಶೋಧನಾ ಸಂಸ್ಥೆ ಆರೋಪಿಸಿದ ಬಳಿಕ ಆದಾನಿ ಉದ್ಯಮಸಮೂಹಕ್ಕೆ ಸೇರಿದ ಏಳು ಕಂಪೆನಿಗಳ ಶೇರುಗಳು ವೌಲ್ಯವು ಒಂದೇ ಸಮನೆ ಕುಸಿಯತೊಡಗಿವೆ.

ಈ ಮಧ್ಯೆ ಅದಾನಿ ಸಮೂಹವು ತನ್ನ ವಿರುದ್ಧ ಹಿಂಡೆನ್‌ಬರ್ಗ್ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದೆ. ಹಿಂಡೆನ್‌ಬರ್ಗ್ ಕಂಪೆನಿಯ ಆರೋಪಗಳು ದುಷ್ಟತನ ಹಾಗೂ ಕುಚೇಷ್ಠೆಯಿಂದ ಕೂಡಿದೆಯೆಂದು ಅದು ಆರೋಪಿಸಿದೆ. ಎಫ್‌ಪಿಓ ಮೂಲಕ 20 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ತಾನು ಮುಂದಾಗಿರುವ ಸಂದರ್ಭದಲ್ಲಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪಗಳು ದುರುದ್ದೇಶಪೂರಿತವಾಗಿವೆೆ ಎಂದು ಅದಾನಿ ಎಂಟರ್‌ಪ್ರೈಸಸ್ ಹೇಳಿದೆ.ಅದಾನಿ ಎಂಟರ್‌ಪ್ರೈಸಸ್ ತನ್ನ ಶೇರುಗಳನ್ನು 3112ರಿಂದ 3276 ರೂ. ಬೆಲೆಗೆ ಮಾರಾಟ ಮಾಡುತ್ತಿದೆ. ಶುಕ್ರವಾರದಂದು ಮುಂಬೈ ಶೇರು ಮಾರುಕಟ್ಟೆಯಲ್ಲಿ ದಿನದ ವಹಿವಾಟಿನ ಅಂತ್ಯದ ವೇಳೆಗೆ ಸಂಸ್ತೆಯ ಶೇರು ದರಗಳು 2,762.15 ರೂ. ಆಗಿತ್ತು.

‘‘ನಮ್ಮ ಎಫ್‌ಪಿಓದಲ್ಲಿ ಬ್ಯಾಂಕರ್‌ಗಳು ಹಾಗೂ ಹೂಡಿಕೆದಾರರು ಸೇರಿದಂತೆ ನಮ್ಮ ಎಲ್ಲಾ ಭಾಗಿದಾರರಿಗೆ ಸಂಪೂರ್ಣ ನಂಬಿಕೆಯಿದೆ. ಎಫ್‌ಪಿಓನ ಯಶಸ್ಸಿನ ಬಗ್ಗೆ ನಮಗೆ ಅಪಾರ ನಂಬಿಕೆಯಿದೆಯೆಂದು’’ ಸಂಸ್ಥೆಯ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಓ ಶೇರುಗಳ ಕೊಡುಗೆ ಜನವರಿ 31ಕ್ಕೆ ಕೊನೆಗೊಳ್ಳಲಿದೆ.

share
Next Story
X