Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅಫ್ಘಾನ್ ಮಾಜಿ ಅಧ್ಯಕ್ಷ ವಂಚಕ‌, ಶಾಂತಿ...

ಅಫ್ಘಾನ್ ಮಾಜಿ ಅಧ್ಯಕ್ಷ ವಂಚಕ‌, ಶಾಂತಿ ಮಾತುಕತೆಗೆ ಅಡ್ಡಿಯಾಗಿದ್ದರು: ಮೈಕ್ ಪಾಂಪಿಯೊ

29 Jan 2023 11:37 PM IST
share
ಅಫ್ಘಾನ್ ಮಾಜಿ ಅಧ್ಯಕ್ಷ ವಂಚಕ‌, ಶಾಂತಿ ಮಾತುಕತೆಗೆ ಅಡ್ಡಿಯಾಗಿದ್ದರು: ಮೈಕ್ ಪಾಂಪಿಯೊ

ವಾಷಿಂಗ್ಟನ್, ಜ.29: ತಾಲಿಬಾನ್ಗಳು ಕಾಬೂಲ್ ಗೆ ಲಗ್ಗೆ ಇಟ್ಟಾಗ ದೇಶದಿಂದ ಪಲಾಯನ ಮಾಡಿದ್ದ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಓರ್ವ ವಂಚಕನಾಗಿದ್ದು ಅಧಿಕಾರದಲ್ಲಿ ಮುಂದುವರಿಯುವುದಷ್ಟೇ ಅವರ ಗುರಿಯಾಗಿತ್ತು. ಶಾಂತಿ ಮಾತುಕತೆಗೆ ಅವರು ಬಹುದೊಡ್ಡ ತೊಡಕಾಗಿದ್ದರು ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

ಅಶ್ರಫ್ ಘನಿ ಮತ್ತು ಆಗ ಅಫ್ಘಾನಿಸ್ತಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಅಬ್ದುಲ್ಲಾ ಅಬ್ದುಲ್ಲಾ ಉನ್ನತ ಮಟ್ಟದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದರು ಮತ್ತು ಇದು 2021ರ ಆಗಸ್ಟ್ನಲ್ಲಿ ಯುದ್ಧಗ್ರಸ್ತ ದೇಶದಿಂದ ಯಶಸ್ವಿಯಾಗಿ ಹಿಂದೆ ಸರಿಯುವ ಅಮೆರಿಕದ ಸಾಮರ್ಥ್ಯವನ್ನು ಸೀಮಿತಗೊಳಿಸಿತ್ತು ಎಂದು ‘ನೆವರ್ ಗಿವ್ ಆ್ಯನ್ ಇಂಚ್: ಫೈಟಿಂಗ್ ಫಾರ್ ದಿ ಅಮೆರಿಕ ಐ ಲವ್’ ಎಂಬ ತನ್ನ ಕೃತಿಯಲ್ಲಿ ಪಾಂಪಿಯೊ ಉಲ್ಲೇಖಿಸಿದ್ದಾರೆ. 2021ರ ಆಗಸ್ಟ್ 31ರಂದು ಅಮೆರಿಕ ಸೇನೆಯ ಕಡೆಯ ತಂಡ ಅಫ್ಘಾನ್ನಿಂದ ನಿರ್ಗಮಿಸುವುದರೊಂದಿಗೆ ಆ ದೇಶದಲ್ಲಿ ಅಮೆರಿಕ ಸೇನೆಯ 20 ವರ್ಷಗಳ ಉಪಸ್ಥಿತಿ ಅಂತ್ಯಗೊಂಡಿತ್ತು.

ಮಾತುಕತೆ ವೇಗಪಡೆಯುತ್ತಿದ್ದಂತೆಯೇ ಘನಿ ಯಾವಾಗಲೂ ಸಮಸ್ಯೆಯಾಗುತ್ತಿದ್ದರು. ನಾನು, ಕಿಮ್ ಜಾಂಗ್(ಉತ್ತರ ಕೊರಿಯಾ ಅಧ್ಯಕ್ಷ) ಕ್ಸಿ ಜಿಂಪಿಂಗ್(ಚೀನಾ ಅಧ್ಯಕ್ಷ), ಪುಟಿನ್(ರಶ್ಯ ಅಧ್ಯಕ್ಷ) ಸೇರಿದಂತೆ ಹಲವಾರು ಜಾಗತಿಕ ಮುಖಂಡರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ನನಗೆ ಕನಿಷ್ಟ ಮೆಚ್ಚುಗೆಯಾದವರೆಂದರೆ ಅದು ಅಶ್ರಫ್ ಘನಿ. ಅವರೊಬ್ಬ ಸಂಪೂರ್ಣ ದಗಾಕೋರನಾಗಿದ್ದು ಅಧಿಕಾರದಲ್ಲಿ ಉಳಿಯುವ ಏಕೈಕ ಬಯಕೆಗಾಗಿ ಅಮೆರಿಕನ್ನರ ಜೀವವನ್ನು ವ್ಯರ್ಥಗೊಳಿಸಿದ್ದಾರೆ. ತನ್ನ ಅಧಿಕಾರಕ್ಕೆ ಸಂಚಕಾರ ಬಂದರೂ ಪರವಾಗಿಲ್ಲ, ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂಬ ಭಾವನೆಯನ್ನು ಅವರಲ್ಲಿ ನಾನೆಂದೂ ಕಂಡಿರಲಿಲ್ಲ’ ಎಂದು ಪಾಂಪಿಯೊ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕದ ನಿಯೋಗ ಹಾಗೂ ತಾಲಿಬಾನ್ ನಿಯೋಗದ ಮಧ್ಯೆ ನಡೆದಿದ್ದ ಸಂಧಾನ ಮಾತುಕತೆಯ ಸಂಪೂರ್ಣ ವಿವರ ಈ ಪುಸ್ತಕದಲ್ಲಿದೆ. ಮಾಜಿ ರಾಜತಾಂತ್ರಿಕ ಅಧಿಕಾರಿ ಝಲ್ಮೆ ಖಲಿಜಾದ್ರನ್ನು ತಾಲಿಬಾನ್ ಜತೆಗಿನ ಮಾತುಕತೆಗೆ ವಿಶೇಷ ಪ್ರತಿನಿಧಿಯಾಗಿ ಅಮೆರಿಕ ನೇಮಿಸಿತ್ತು.

ಅಫ್ಘಾನ್ನಲ್ಲಿ ನಡೆದ ಚುನಾವಣೆಯಲ್ಲಿ ಘನಿ ಮೋಸದಿಂದ ಪುನರಾಯ್ಕೆಗೊಂಡಿದ್ದರು. ಚುನಾವಣೆಯಲ್ಲಿ ತಮ್ಮ ಇದಿರಾಳಿ ಅಬ್ದುಲ್ಲಾ ಅಬ್ದುಲ್ಲಾಗಿಂತ ಹೆಚ್ಚಿನ ಲಂಚವನ್ನು ಮತದಾರರಿಗೆ ನೀಡಿದ್ದರಿಂದ ಘನಿ ಪುನರಾಯ್ಕೆಗೊಂಡಿದ್ದಾರೆ. ಘನಿ ಮತ್ತು ಅಬ್ದುಲ್ಲಾಗೆ ಅಧಿಕಾರಕ್ಕೆ ಬರುವುದು ಮುಖ್ಯವಾಗಿತ್ತು, ಚುನಾವಣೆ ಮುಗಿದಾಗ ದೇಶದಲ್ಲಿ ಸರಕಾರ ಇರುತ್ತದೆಯೇ ಎಂಬ ಬಗ್ಗೆ ಅವರು ಯೋಚಿಸಲೇ ಇಲ್ಲ ಎಂದು ಪಾಂಪಿಯೊ ಪ್ರತಿಪಾದಿಸಿದ್ದಾರೆ.
ಅಧಿಕಾರಕ್ಕಾಗಿ ಇವರಿಬ್ಬರ ಕಿತ್ತಾಟ ಪರಾಕಾಷ್ಟೆಗೆ ಏರಿದಾಗ , 2020ರ ಮಾರ್ಚ್ 23ರಂದು ಅಫ್ಘಾನ್ಗೆ ಭೇಟಿ ನೀಡಿದ ತಾನು , ಯಾರಾದರೊಬ್ಬರು ಹಿಂದೆ ಸರಿದು ಇನ್ನೊಬ್ಬರಿಗೆ ಸರಕಾರ ರಚಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಅಮೆರಿಕದ ಸೇನೆ ತಕ್ಷಣವೇ ಅಫ್ಘಾನ್ನಿಂದ ನಿರ್ಗಮಿಸುತ್ತದೆ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ ಬಳಿಕ ಅಬ್ದುಲ್ಲಾ ಹಿಂದೆ ಸರಿದು ಘನಿಗೆ ಅವಕಾಶ ಮಾಡಿಕೊಟ್ಟರು. ಆಗ ಅಮೆರಿಕವು ವಾರ್ಷಿಕವಾಗಿ ಸುಮಾರು 6 ಶತಕೋಟಿ ಡಾಲರ್ನಷ್ಟು ನೆರವನ್ನು ಅಫ್ಘಾನ್ಗೆ ಒದಗಿಸುತ್ತಿತ್ತು. ಕಾನೂನು ಸುವ್ಯವಸ್ಥೆಗೆ, ಶಾಲೆಗಳಿಗೆ, ಆರೋಗ್ಯ ಕ್ಷೇತ್ರಕ್ಕೆ ಅಮೆರಿಕದ ನೆರವು ವಿನಿಯೋಗವಾಗುತ್ತಿತ್ತು. ಆದರೆ, ಇದರ ಜತೆಗೆ ಬಹಳಷ್ಟು ನಿಧಿಯು ಮುಖಂಡರ ಜೇಬಿಗೆ ಹೋಗುತ್ತಿತ್ತು. ಉನ್ನತ ಮಟ್ಟದಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿತ್ತು.

ಅಮೆರಿಕದ ಆಡಳಿತದ ಬಳಿ ತನ್ನ ಪರವಾಗಿ ಲಾಬಿ ನಡೆಸಲು ಹಲವು ರಾಜತಾಂತ್ರಿಕರನ್ನು ಘನಿ ನಿಯೋಜಿಸಿದ್ದರು. ಅವರಿಗೆ ಅಫ್ಘಾನ್ನಲ್ಲಿ ಇರುವುದಕ್ಕಿಂತ ಹೆಚ್ಚಿನ ಮಿತ್ರರು ಅಮೆರಿಕದಲ್ಲಿದ್ದರು. ಘನಿಗೆ ವಾಕ್ಚಾತುರ್ಯವಿತ್ತು. ಆದರೆ ಯುದ್ಧದಿಂದ ಜರ್ಝರಿತಗೊಂಡ, ತೀವ್ರವಾಗಿ ವಿಭಜನೆಗೊಂಡ ಬುಡಕಟ್ಟು ಸಮುದಾಯದ ದೇಶವನ್ನು ಮರುನಿರ್ಮಿಸುವ ಮುತ್ಸದ್ದಿತನ ಇರಲಿಲ್ಲ ಎಂದು ಪಾಂಪಿಯೊ ಹೇಳಿದ್ದಾರೆ.
2021ರ ಆಗಸ್ಟ್ 15ರಂದು ಅಫ್ಘಾನ್ನಿಂದ ಪಲಾಯನ ಮಾಡಿ ಯುಎಇಯಲ್ಲಿ ನೆಲೆಸಿರುವ ಅಶ್ರಫ್ ಘನಿ, ತಾಲಿಬಾನ್ನಿಂದ ಇನ್ನಷ್ಟು ರಕ್ತಪಾತ ತಪ್ಪಿಸಲು ತಾನು ದೇಶದಿಂದ ಪಲಾಯನ ಮಾಡಿರುವುದಾಗಿ ಪ್ರತಿಪಾದಿಸುತ್ತಿದ್ದಾರೆ.

share
Next Story
X