ಮಂಜೇಶ್ವರ: 30 ಕಿಲೋ ಗಾಂಜಾ ಸಹಿತ ಆರೋಪಿಯ ಬಂಧನ
![ಮಂಜೇಶ್ವರ: 30 ಕಿಲೋ ಗಾಂಜಾ ಸಹಿತ ಆರೋಪಿಯ ಬಂಧನ ಮಂಜೇಶ್ವರ: 30 ಕಿಲೋ ಗಾಂಜಾ ಸಹಿತ ಆರೋಪಿಯ ಬಂಧನ](https://www.varthabharati.in/sites/default/files/images/articles/2023/01/30/365497-1675070487.jpg)
ಮಂಜೇಶ್ವರ, ಜ. 30: ಮಂಜೇಶ್ವರ ಮೀಯಪದವಿನ ನಿರ್ಮಾಣ ಹಂತದಲ್ಲಿರುವ ಮನೆಯಿಂದ ಸುಮಾರು 30 ಕಿಲೋ ಗಾಂಜಾ ಸಹಿತ ಓರ್ವ ಆರೋಪಿಯನ್ನು ಸೋಮವಾರ ಬಂಧಿಸಿರುವುದಾಗಿ ವರದಿಯಾಗಿದೆ.
ಮನೆ ಮಾಲಕ ಮುಸ್ತಾಫ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಖಚಿತ ಮಾಹಿತಿಯ ಮೇರೆಗೆ ಕಾಸರಗೋಡು ಅಬಕಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
Next Story