ವಿಶ್ವಕಪ್ ವಿಜೇತ ಅಂಡರ್-19 ಮಹಿಳಾ ತಂಡಕ್ಕೆ 5 ಕೋ.ರೂ. ಬಹುಮಾನ
ಹೊಸದಿಲ್ಲಿ, ಜ.30: ಮೊದಲ ಆವೃತ್ತಿಯ ಅಂಡರ್-19 ಟ್ವೆಂಟಿ-20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿರುವ ಭಾರತ ಕ್ರಿಕೆಟ್ ತಂಡ ಹಾಗೂ ಸಹಾಯಕ ಸಿಬ್ಬಂದಿಗೆ 5 ಕೋ.ರೂ.ಬಹುಮಾನ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಭಾರತವು ರವಿವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿ ಪ್ರಾಬಲ್ಯ ಮೆರೆದಿತ್ತು.
ಶೆಫಾಲಿ ವರ್ಮಾ ನೇತೃತ್ವದ ಭಾರತದ ಅಂಡರ್-19 ತಂಡವು ಸೀನಿಯರ್ ತಂಡ ಐಸಿಸಿ ಟೂರ್ನಿಯಲ್ಲಿ ಮಾಡದ ಸಾಧನೆಯನ್ನು ಮಾಡಿದೆ. ಇದರಿಂದ ಸಂತೋಷಗೊಂಡಿರುವ ಶಾ ನಗದು ಬಹುಮಾನ ಘೋಷಿಸಿದ್ದಲ್ಲದೆ, ಇಡೀ ತಂಡವನ್ನು ಬುಧವಾರ ಅಹಮದಾಬಾದ್ಗೆ ಆಹ್ವಾನಿಸಿದ್ದಾರೆ.
Next Story