Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಹಿಂಡೆನ್‌ಬರ್ಗ್‌ ವರದಿ ಬೆನ್ನಲ್ಲೇ...

ಹಿಂಡೆನ್‌ಬರ್ಗ್‌ ವರದಿ ಬೆನ್ನಲ್ಲೇ ಜಾಗತಿಕ ಟಾಪ್‌ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್‌ ಅದಾನಿ

31 Jan 2023 11:55 AM IST
share
ಹಿಂಡೆನ್‌ಬರ್ಗ್‌ ವರದಿ ಬೆನ್ನಲ್ಲೇ ಜಾಗತಿಕ ಟಾಪ್‌ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್‌ ಅದಾನಿ

ಹೊಸದಿಲ್ಲಿ,ಜ.31: ಅಮೆರಿಕ ಮೂಲದ ಹೂಡಿಕೆ ಸಂಶೋಧನೆ ಸಂಸ್ಥೆ ಹಿಂಡನ್‌ಬರ್ಗ್ ರೀಸರ್ಚ್‌ನ(Hindenburg Research) ಪ್ರಹಾರದಿಂದಾಗಿ ಅದಾನಿ ಗ್ರೂಪ್‌ನ(Adani Group) ಅಧ್ಯಕ್ಷ ಹಾಗೂ ಏಶ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಯವರ(Gautam Adani)ನಿವ್ವಳ ಸಂಪತ್ತು(Net worth)ಸುಮಾರು ಎಂಟು ಶತಕೋಟಿ ಡಾ.(65448 ಕೋ.ರೂ.)ಕರಗಿದ್ದು,ವಿಶ್ವದ 10 ಅತ್ಯಂತ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಮಂಗಳವಾರ ಈ ವರದಿ ಸಿದ್ಧವಾಗುವಾಗ ಅದಾನಿಯವರ ನಿವ್ವಳ ಸಂಪತ್ತು 84.4 ಬಿ.ಡಾ.(6.90 ಲ.ಕೋ.ರೂ.)ಗಳಾಗಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ(Bloomberg Billionaires Index) 11ನೇ ಸ್ಥಾನಕ್ಕೆ ಜಾರಿದ್ದಾರೆ.

ಹಿಂಡನ್‌ಬರ್ಗ್‌ನ ಕಟುವಾದ ವರದಿಯು ಅದಾನಿಯವರ ಮತ್ತು ಅದಾನಿ ಗ್ರೂಪ್‌ನ ಶೇರುಗಳ ಭವಿಷ್ಯಕ್ಕೆ ತೀವ್ರ ಹೊಡೆತವನ್ನು ನೀಡಿದೆ. ಅದಾನಿ ಗ್ರೂಪ್ ದಶಕಗಳಿಂದಲೂ ಶೇರುಗಳ ಬೆಲೆಗಳನ್ನು ಕೃತಕವಾಗಿ ಏರಿಸುವ,ಅಕ್ರಮ ಹಣ ವರ್ಗಾವಣೆ ಮತ್ತು ಲೆಕ್ಕಪತ್ರಗಳ ವಂಚನೆಯಂತಹ ಕೃತ್ಯಗಳಲ್ಲಿ ರಾಜಾರೋಷವಾಗಿ ತೊಡಗಿಕೊಂಡಿದೆ ಎಂದು ಹಿಂಡನ್‌ಬರ್ಗ್ ತನ್ನ ವರದಿಯಲ್ಲಿ ಆರೋಪಿಸಿದೆ.

ವರದಿಯಂತೆ ಅದಾನಿ ಗ್ರೂಪ್‌ನ ಏಳು ಲಿಸ್ಟೆಡ್ ಕಂಪನಿಗಳ ಶೇರುಗಳ ಬೆಲೆಗಳು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸರಾಸರಿ ಶೇ.819ರಷ್ಟು ಏರಿಕೆಯನ್ನು ಕಂಡಿವೆ.

‘‘ದಶಕಗಳಿಂದಲೂ ಅದಾನಿ ಗ್ರೂಪ್ ನಡೆಸುತ್ತಿರುವ ಅಕ್ರಮಗಳಿಗೆ ಪುರಾವೆಗಳನ್ನು ನಾವು ಬಹಿರಂಗಗೊಳಿಸಿದ್ದೇವೆ. ಸರಕಾರದಲ್ಲಿಯ ಅಧಿಕಾರಸ್ಥರು ಮತ್ತು ಇಂತಹ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಅಂತರಾಷ್ಟ್ರೀಯ ಕಂಪನಿಗಳ ಕಾಟೇಜ್ ಉದ್ಯಮದ ನೆರವಿನೊಂದಿಗೆ ಅದಾನಿ ಈ ‘ಬೃಹತ್ ಸಾಧನೆ ’ಯನ್ನು ಮಾಡಿದ್ದಾರೆ ’’ಎಂದು ಶಾರ್ಟ್‌ಸೆಲ್ಲರ್ ಹಿಂಡನ್‌ಬರ್ಗ್ ವರದಿಯು ಹೇಳಿದೆ.

ಅದಾನಿಯವರ ಹಿರಿಯ ಸೋದರ ವಿನೋದ್ ಅದಾನಿಯವರು ತನ್ನ ನಿಕಟವರ್ತಿಗಳ ಮೂಲಕ ಮುಖವಾಡ ಕಂಪನಿಗಳ ಜಾಲವೊಂದನ್ನು ನಡೆಸುತ್ತಿದ್ದಾರೆ ಎಂದೂ ಹೇಳಿರುವ ವರದಿಯು ಅವರು ನಡೆಸುತ್ತಿರುವ ಮಾರಿಷಸ್ನ 38 ಇಂತಹ ಕಂಪನಿಗಳನ್ನು ಗುರುತಿಸಿದೆ. ಜೊತೆಗೆ ವಿನೋದ ಅದಾನಿ ನಿಯಂತ್ರಣದಲ್ಲಿರುವ ಸೈಪ್ರಸ್,ಸಿಂಗಾಪುರ,ಯುಎಇ ಮತ್ತು ಹಲವಾರು ಕೆರಿಬಿಯನ್ ದ್ವೀಪಗಳಲ್ಲಿಯ ಸಂಸ್ಥೆಗಳನ್ನೂ ಅದು ಗುರುತಿಸಿದೆ.
 ‌
ಈ ನಡುವೆ ಮಾಧ್ಯಮವೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅದಾನಿ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ಜುಗೆಶಿಂದರ್ ಸಿಂಗ್ ಅವರು, ‘ನಮ್ಮ ಕಂಪನಿಯು ಬಹಿರಂಗಗೊಳಿಸಿದ್ದ ಮಾಹಿತಿಗಳನ್ನೇ ಹಿಂಡನ್‌ಬರ್ಗ್ ಕಾಪಿ-ಪೇಸ್ಟ್ ಮಾಡಿದೆ ಮತ್ತು ಸಂಶೋಧನೆಯನ್ನು ನಡೆಸಿಲ್ಲ. ಹಿಂಡನ್‌ಬರ್ಗ್ ಮುಂದಿರಿಸಿರುವ 88 ಪ್ರಶ್ನೆಗಳಲ್ಲಿ 68 ಬೋಗಸ್ ಮತ್ತು ತಪ್ಪು ನಿರೂಪಣೆಯಿಂದ ಕೂಡಿವೆ. ಎಲ್ಲ 88 ಪ್ರಶ್ನೆಗಳಿಗೂ ಉತ್ತರಿಸಲಾಗಿದೆ. ಅದರ ವರದಿಯು ನಮ್ಮ ಎಫ್‌ಪಿಒ  ಪ್ರಕ್ರಿಯೆಗೆ ಹೊಡೆತ ನೀಡುವ ಉದ್ದೇಶವನ್ನು ಹೊಂದಿತ್ತು. ಅವರು ಸಂಶೋಧನೆಯನ್ನು ಮಾಡಿದ್ದರೆ ಮತ್ತು ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸಿದ್ದರೆ ಇನ್ನೂ ಕೆಟ್ಟದ್ದಾಗುತ್ತಿತ್ತು. ನೀವು ಅವರನ್ನೇ ಕೇಳಬೇಕು. 68 ಪ್ರಶ್ನೆಗಳನ್ನು ತಪ್ಪಾಗಿ ಬಿಂಬಿಸಿದ್ದೇಕೆ ಎಂದು ಅವರನ್ನ ಪ್ರಶ್ನಿಸಬೇಕು ’ ಎಂದು ಹೇಳಿದ್ದಾರೆ.
 
ಅದಾನಿ 11 ಬಿ.ಡಾ.(89,991 ಕೋ.ರೂ.)ಗೂ ಹೆಚ್ಚಿನ ನಷ್ಟವನ್ನು ಅನುಭವಿಸಿದ್ದಾರೆ ಮತ್ತು ಅವರ ನಿವ್ವಳ ಸಂಪತ್ತು 85.4 ಶತಕೋಟಿ ಡಾ.(6.99 ಲ.ಕೋ.ರೂ.)ಗೆ ಇಳಿದಿದೆ ಎಂದು ಫೋರ್ಬ್ಸ್‌ನ ರಿಯಲ್-ಟೈಮ್ ಬಿಲಿಯನೇರ್ಸ್ ಇಂಡೆಕ್ಸ್(Forbes Real-time Billionaires Index) ಸಹ ತೋರಿಸಿದೆ. ಆದರೆ ಈ ಇಂಡೆಕ್ಸ್‌ನಂತೆ ಅದಾನಿ ವಿಶ್ವದ 10 ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

share
Next Story
X