ಏರ್ ಶೋ ಹಿನ್ನೆಲೆ: ಯಲಹಂಕ ವಾಯುಸೇನಾ ನೆಲೆಯ ಸುತ್ತಮುತ್ತ ಕ್ರೇನ್ ಎತ್ತರವನ್ನು ತಗ್ಗಿಸುವಂತೆ BBMP ಸೂಚನೆ

ಬೆಂಗಳೂರು, ಜ.31: ಯಲಹಂಕ ವಾಯುಸೇನಾ ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ‘ಏರ್ ಇಂಡಿಯಾ-2023’ ನಡೆಯಲಿದ್ದು, ಫೆ.9ರಿಂದ ಫೆ.17ರವರೆಗೆ ವಾಯುಸೇನಾ ನೆಲೆಯಿಂದ 5 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್‍ಗಳ ಎತ್ತರವನ್ನು ತಗ್ಗಿಸುವಂತೆ ಬಿಬಿಎಂಪಿ ತಿಳಿಸಿದೆ.
ಹಾಗೆಯೇ ಬಹುಮಹಡಿ ಕಟ್ಟಡಗಳ ಸಂಸ್ಥೆಗಳು, ಮಾಲಕರು, ಅಭಿವೃದ್ಧಿದಾರರು ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸಬೇಕು. ಇದನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ-2020 ಮತ್ತು ಭಾರತೀಯ ಏರ್‍ಕ್ರಾಫ್ಟ್ ನಿಯಮ 1937ರ ನಿಯಮ 91 ರೀತ್ಯಾ ಕ್ರಮವಹಿಸಲಾಗುವುದು ಎಂದು ನಗರ ಯೋಜನೆಯ ಜಂಟಿ ನಿರ್ದೇಶಕರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





