ಮಂಗಳೂರು| ಲೀಸ್ ಪಡೆದ ವ್ಯಕ್ತಿಯಿಂದ ಫ್ಲ್ಯಾಟ್ ಮಾಲಕನಿಗೆ ಹಲ್ಲೆ ಆರೋಪ: ಆಸ್ಪತ್ರೆಗೆ ದಾಖಲು

ಮಂಗಳೂರು: ನಗರ ಹೊರವಲಯದ ಕಣ್ಣೂರು ಗ್ರಾಮದ ಯೂಸುಫ್ ನಗರ ಎಂಬಲ್ಲಿನ ಮುನಾವರ್ ಅಪಾರ್ಟ್‌ಮೆಂಟ್‌ನ ಮಾಲಕ ಎಸ್.ಎಚ್. ಅಬ್ದುಲ್ ಖಾದರ್ ಎಂಬವರಿಗೆ ಲೀಸ್ ಹೊಂದಿದ್ದ ವ್ಯಕ್ತಿಯು ಹಲ್ಲೆಗೈದ ಘಟನೆ ನಡೆದಿರುವುದಾಗಿ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ನ್ನು ಇಕ್ಬಾಲ್ ಎಂಬವರು 2018ರ ಜುಲೈ 26ರಿಂದ 2019ರ ಜೂನ್ 25ರವರೆಗೆ 11 ತಿಂಗಳ ಅವಧಿಗೆ ಲೀಸ್ ಪಡೆದಿದ್ದು, ಅವಧಿ ಮುಗಿದ ಬಳಿಕವೂ ಫ್ಲ್ಯಾಟ್ ಬಿಟ್ಟು ಕೊಡದೆ ಒತ್ತುವರಿ ಮಾಡಿಕೊಂಡು ತೊಂದರೆ ಕೊಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಜನವರಿ 27ರಂದ ಬೆಳಗ್ಗೆ 9:15ಕ್ಕೆ ತಾನು ಬಾಡಿಗೆದಾರರಾದ ಸಂಸುದ್ದೀನ್‌ರ ಎರಡನೆ ಮಹಡಿಯಲ್ಲಿರುವ ನೀರಿನ ಪೈಪ್‌ಲೈನ್‌ನ ದುರಸ್ತಿಯನ್ನು ಕೈಗೊಳ್ಳಲು ಹೋದಾಗ ಆರೋಪಿ ಇಕ್ಬಾಲ್ ಮತ್ತಿತರರು ಅವಾಚ್ಯ ಶಬ್ದದಿಂದ ಬೈದು ತಲೆ, ಎದೆ, ಬೆನ್ನು, ಮುಖ ಮತ್ತು ಸೊಂಟಕ್ಕೆ ಹಲ್ಲೆಗೈದು ಕೊಲೆಯತ್ನ ಮಾಡಿ ನೆಲಕ್ಕೆ ತಳ್ಳಿ ಕಾಲಿನಿಂದ ಒದ್ದು ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ.
ಗಾಯಗೊಂಡ ಅಬ್ದುಲ್ ಖಾದರ್‌ರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.