ಜಾರ್ಖಂಡ್: ಧನಬಾದ್ ನಲ್ಲಿ ಬೆಂಕಿ ಅವಘಡ,12 ಸಾವು

ಧನಬಾದ್,ಜ.31: ಧನಬಾದ್ ಜಿಲ್ಲೆಯ ಅಪಾರ್ಟ್ಮೆಂಟ್ ವೊಂದರಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ. ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ತಡರಾತ್ರಿಯವರೆಗೂ ಮಂದುವರಿದಿದ್ದು,ಹಲವರು ಕಟ್ಟಡದಲ್ಲಿ ಸಿಕ್ಕಿ ಹಾಕಿಕೊಂಡಿರುವ ಆತಂಕ ವ್ಯಕ್ತವಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಬಗ್ಗೆ ಸ್ಥಳೀಯರಲ್ಲಿ ಭೀತಿ ಮೂಡಿದೆ.
ನಗರದ ಐಷಾರಾಮಿ ಬಡಾವಣೆ ಜೋರಾಪಾಟಕ್ನಲ್ಲಿರುವ ‘ಆಶೀರ್ವಾದ ಅಪಾರ್ಟ್ಮೆಂಟ್’ನಲ್ಲಿ ಸಂಭವಿಸಿದ ಈ ಅವಘಡದಲ್ಲಿ ಮೃತರಲ್ಲಿ ಎಂಟು ಮಹಿಳೆಯರು ಸೇರಿದ್ದಾರೆ.ಬೆಂಕಿಯಲ್ಲಿ ಸಿಕ್ಕಿಕೊಂಡಿದ್ದ 18 ಜನರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರಾಥಮಿಕ ಮಾಹಿತಿಯಂತೆ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು ಮತ್ತು ಈ ಅಂತಸ್ತಿನಲ್ಲಿಯ ಫ್ಲಾಟ್ವೊಂದರ ನಿವಾಸಿಗಳು ಅಲ್ಲಿ ಮದುವೆಯನ್ನು ನಡೆಸಿದ್ದರು. ಆದರೆ ಬೆಂಕಿಗೆ ಖಚಿತ ಕಾರಣವಿನ್ನೂ ದೃಢಪಟ್ಟಿಲ್ಲ.
Next Story





