ಮಂಗಳೂರು| ನ್ಯಾಯಾಲಯದ ಆವರಣದಲ್ಲೇ ವಕೀಲೆಗೆ ಕೊಲೆ ಬೆದರಿಕೆ: ಪ್ರಕರಣ ದಾಖಲು

ಮಂಗಳೂರು: ನಗರದ ಯುವ ವಕೀಲೆಯೊಬ್ಬರಿಗೆ ಮಂಗಳವಾರ ಅಪರಾಹ್ನ ನ್ಯಾಯಾಲಯದ ಆವರಣದಲ್ಲೇ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆಯೊಡ್ಡಿರುವುದಾಗಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.
ವಕೀಲೆ ರುಬಿಯಾ ಅಖ್ತರ್‌ಗೆ ಆರೋಪಿ ಹಮೀದ್ ಕಾವೂರು ಯಾನೆ ಮುಹಮ್ಮದ್ ಹನೀಫ್ ಎಂಬಾತ ಮಂಗಳವಾರ ಅಪರಾಹ್ನ ಸುಮಾರು 3:30ಕ್ಕೆ ಜಾಮೀನು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಶಬ್ದದಿಂದ ಬೈದು ಕೋರ್ಟ್‌ಗೆ ಬಾರದ ಹಾಗೆ ಮಾಡುವೆ, ಕೈಕಾಲು ಪುಡಿಮಾಡುವೆ ಎಂದು ಬೆದರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಂದರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story