ಬೆಂಗಳೂರು: ಫೆ.23ರಿಂದ ಸ್ಟಾಫರ್ಡ್ ಚಾಲೆಂಜ್ ಕಪ್ ಫುಟ್ಬಾಲ್
ಬೆಂಗಳೂರು: ಪ್ರತಿಷ್ಠಿತ ಸ್ಟಾಫರ್ಡ್ ಚಾಲೆಂಜ್ ಕಪ್ ಫುಟ್ಬಾಲ್ ಟೂರ್ನಿಯನ್ನು 30 ವರ್ಷಗಳ ಬಳಿಕ ಮತ್ತೊಮ್ಮೆ ನಡೆಸುವುದಾಗಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ) ಘೋಷಿಸಿದೆ.
40ನೇ ಆವೃತ್ತಿಯ ಟೂರ್ನಿ ಫೆ.23ರಂದು ಆರಂಭಗೊಳ್ಳಲಿದ್ದು, 16 ತಂಡಗಳು ಸ್ಪರ್ಧಿಸಲಿವೆ ಎಂದು ತಿಳಿಸಿದೆ. ಎಲ್ಲಾ ಪಂದ್ಯಗಳಿಗೆ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಐಎಸ್‌ಎಲ್ ನ ಬೆಂಗಳೂರು ಎಫ್‌ಸಿ, ಚೆನ್ನೈಯಿನ್ ಎಫ್‌ಸಿ, ಐ-ಲೀಗ್ನ ಗೋಕುಲಂ, ಕೇರಳ ಸೇರಿದಂತೆ ಹಲವು ತಂಡಗಳು ಕಣಕ್ಕಿಳಿಯಲಿವೆ.
16 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಗುಂಪಿನ ಅಗ್ರಸ್ಥಾನಿ ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ಮಾರ್ಚ್ 4ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿ 1938ರಲ್ಲಿ ಆರಂಭಗೊಂಡಿದ್ದು, 1993ರಲ್ಲಿ ಕೊನೆಯ ಬಾರಿ ಟೂರ್ನಿ ಆಯೋಜಿಸಲಾಗಿತ್ತು. ಹಲವು ವಿದೇಶಿ ತಂಡಗಳು ಕೂಡಾ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದವು. ಈ ಬಾರಿ ಭಾರತದ ಕ್ಲಬ್‌ಗಳು ಮಾತ್ರ ಕಣಕ್ಕಿಳಿಯಲಿವೆ ಎಂದು ಕೆಎಸ್‌ಎಫ್‌ಎ ಮಾಹಿತಿ ನೀಡಿದೆ.
Next Story





