ಉತ್ತಮ ಬಜೆಟ್, ‘ಎಂಎಸ್‍ಎಂಇ’ಗಳ ನಿರೀಕ್ಷೆಯಷ್ಟಿಲ್ಲ: ಕಾಸಿಯಾ
ಬೆಂಗಳೂರು, ಫೆ.1: ಕೇಂದ್ರ ಸರಕಾರದ ಬಜೆಟ್ ಉತ್ತಮವಾಗಿದೆ. ಆದರೆ, ಎಂಎಸ್‍ಎಂಇ(ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳು)ಗಳ ನಿರೀಕ್ಷೆಯಷ್ಟಿಲ್ಲ ಎಂದು ಕಾಸಿಯಾ(ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ) ಹೇಳಿದೆ.
ರೈಲ್ವೆಗೆ ನೀಡಿರುವ ಬಜೆಟ್ ಗಮನಾರ್ಹವಾಗಿದೆ. ಕೃಷಿಯ ಹೊರತಾಗಿ ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡಿರುವುದು ಹಾಗೂ ಮತ್ತು ಕೌಶಲ್ಯದ ಮೇಲೆ ಕೇಂದ್ರೀಕರಿಸಿ ಹೆಚ್ಚಿನ ಹಂಚಿಕೆ ನೀಡಿರುವುದು ಸ್ವಾಗತಾರ್ಹ ಪ್ರಸ್ತಾಪಗಳು ಎಂದು ತಿಳಿಸಿದೆ.
ಈ ಬಜೆಟ್ ಸ್ವಲ್ಪ ಒಳ್ಳೆಯ ಉದ್ದೇಶಗಳ ಮತ್ತು ಚುನಾವಣಾ ಪೂರಕವಾದ ಮಿಶ್ರಣವಾಗಿದ್ದರೂ, ಅಂತಿಮವಾಗಿ ಅದರ ನಿಬಂಧನೆಗಳನ್ನು ಎಷ್ಟು ನಿಖರವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಕಾಸಿಯಾ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





