ನೆತ್ತಿಲಪದವು: 27 ಲಕ್ಷ ಮೌಲ್ಯದ ಭಾರೀ ಪ್ರಮಾಣದ ಗಾಂಜಾ ವಶ, ಮೂವರ ಬಂಧನ

ಕೊಣಾಜೆ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೇರಳ-ಕರ್ನಾಟಕ ಗಡಿ ಪ್ರದೇಶ ನೆತ್ತಿಲಪದವು ಎಂಬಲ್ಲಿ ಮಂಗಳವಾರ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ ಪೊಲೀಸರು, ಕಾರು ಹಾಗೂ ಸುಮಾರು 27 ಲಕ್ಷ ಮೌಲ್ಯದ ಗಾಂಜಾವನ್ನು ಸ್ವಾಧೀನಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಕಡಪುರಂ ,ಹೊಸಬೆಟ್ಟು ನಿವಾಸಿ ಅಬೂಬಕ್ಕರ್ ಸಿದ್ದೀಕ್(35) ಅಲಿಯಾಸ್ ಹ್ಯಾರೀಸ್, ಕಾಸರಗೋಡು ಜಿಲ್ಲೆಯ ಮುದ್ರಾನ್ ಗ್ರಾಮದ ಕುಂಬಿ ನಿವಾಸಿ ಅಖಿಲ್ ಎಮ್(25) ಉದ್ಯಾವರ ,ಮಾಡ ನಿವಾಸಿ ಹೈದರ್ ಆಲಿ(39) ಅಲಿಯಾಸ್ ಗಾಡಿ ಹೈದರ್ ಎಂದು ಗುರುತಿಸಲಾಗಿದೆ.
ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 32,07,000/- ಎಂದು ಅಂದಾಜಿಸಲಾಗಿದೆ.
ಪೊಲೀಸ್ ಆಯುಕ್ತರಾದ ಶಶಿಕುಮಾರ್, ಡಿಸಿಪಿಗಳಾದ ಅಂಶು ಕುಮಾರ್,ಅನೇಶ್ ಕುಮಾರ್, ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಧನ ನಾಯಕ್ ರವರ ನಿರ್ದೇಶನದಂತೆ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಶರಣಪ್ಪ ಭಂಡಾರಿ ಹಾಗೂ ಸಿಬ್ಬಂದಿಗಳಾದ ಶೈಲೇಂದ್ರ,ನವೀನ್, ವಿನ್ಸೆಂಟ್ ರೊಡ್ರಿಗಸ್, ಶಿವಕುಮಾರ್, ಪುರುಷೋತ್ತಮ, ಸುರೇಶ್, ದೀಪಕ್, ಬರಮ್ ಬಡಿಗೇರ, ಹೇಮಂತ್, ದೇವರಾಜ್, ಸುನೀತಾ, ಮಹಮ್ಮದ್ ಗೌಸ್ ಹಾಗೂ ತಾಂತ್ರಿಕ ವಿಭಾಗದ ಮನೋಜ್ ರವರೊಂದಿಗೆ ಕಾರ್ಯಚರಣೆ ನಡೆಸಲಾಗಿದೆ.