Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಭಿವೃದ್ಧಿಯೆಂಬ ಮಾತೇ ಇಲ್ಲದ ಅತ್ಯಂತ...

ಅಭಿವೃದ್ಧಿಯೆಂಬ ಮಾತೇ ಇಲ್ಲದ ಅತ್ಯಂತ ಕೆಟ್ಟ ಬಜೆಟ್

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರುಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು2 Feb 2023 10:36 AM IST
share
ಅಭಿವೃದ್ಧಿಯೆಂಬ ಮಾತೇ ಇಲ್ಲದ ಅತ್ಯಂತ ಕೆಟ್ಟ ಬಜೆಟ್

ಈ ವರ್ಷದ ಬಜೆಟ್ ಗಾತ್ರ 45,03,097 ಕೋಟಿ ರೂ. ಇದರಲ್ಲಿ ರಾಜಸ್ವ ಸ್ವೀಕೃತಿ 26.32 ಲಕ್ಷ ಕೋಟಿ. ತೆರಿಗೆ ಮೂಲದ ಆದಾಯ23.03 ಲಕ್ಷ ಕೋಟಿ, ತೆರಿಗೆಯೇತರ ಆದಾಯ 3 ಲಕ್ಷ ಕೋಟಿ. 2023-24ಕ್ಕೆ 18 ಲಕ್ಷ ಕೋಟಿ ಸಾಲ ಮಾಡಲು ಹೊರಟಿದ್ದಾರೆ. 2022-23 ರಲ್ಲಿ 16.61 ಸಾಲ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಹೇಳಿದ್ದರು. ಆದರೆ ಮಾಡಿದ ಸಾಲ 17.55 ಲಕ್ಷ ಕೋಟಿ ರೂ. 2023ರ ಕೊನೆಗೆ ಮೋದಿ ಸರಕಾರದ ಸಾಲದ ಮೊತ್ತ 173 ಲಕ್ಷ ಕೋಟಿಗೆ ಏರಿಕೆಯಾಗುತ್ತದೆ. ಮನಮೋಹನ್‌ಸಿಂಗ್‌ರವರು ಅಧಿಕಾರದಿಂದ ಇಳಿದಾಗ 53.11 ಲಕ್ಷ ಕೋಟಿಗಳಷ್ಟು ಸಾಲ ಇತ್ತು. ಆದರೆ ಮೋದಿ ಒಬ್ಬರೆ 120 ಲಕ್ಷ ಕೊಟಿ ರೂ.ಯಷ್ಟು ಸಾಲ ಮಾಡಿದ್ದಾರೆ.

26.32 ಲಕ್ಷ ಕೋಟಿಯಷ್ಟು ರೆವೆನ್ಯೂ ಸ್ವೀಕೃತಿ ಇದೆ ಎಂದು ಹಣಕಾಸು ಮಂತ್ರಿ ಹೇಳಿದ್ದಾರೆ. ಅದರಲ್ಲಿ 10.80 ಲಕ್ಷ ಕೋಟಿ ರೂ. ಕೇವಲ ಬಡ್ಡಿ ಪಾವತಿಗೆ ಖರ್ಚಾಗುತ್ತಿದೆ. ಇದು ಶೇ.42ರಷ್ಟು ಬಡ್ಡಿಗೆ ಆಗುತ್ತದೆ. ಅಂದರೆ ದೇಶ 100 ರೂ. ದುಡಿದರೆ ಅದರಲ್ಲಿ 42 ರೂ. ಕೇವಲ ಬಡ್ಡಿಗೆ ಹೋಗುತ್ತದೆ. ಈ ವರ್ಷದ ವಿತ್ತೀಯ ಕೊರತೆ 17.87 ಲಕ್ಷ ಕೋಟಿ ರೂ.ಯಷ್ಟು ಇರಲಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದ್ದರೂ ವಾಸ್ತವವಾಗಿ 18 ಲಕ್ಷ ಕೋಟಿಯನ್ನೂ ಮೀರಲಿದೆ. ಈ ಲೆಕ್ಕದಲ್ಲಿ ವಿತ್ತೀಯ ಕೊರತೆ ಶೇ.6.1ರಷ್ಟು ಇರಲಿದೆ. ಆದರೆ, ಹಣಕಾಸು ಸಚಿವರು ಶೇ.9ರಷ್ಟು ಇರಲಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

2023-24ರ ಪ್ರಾಥಮಿಕ ಕೊರತೆ 7.01 ಲಕ್ಷ ಕೋಟಿಗಳಷ್ಟು ಇರಲಿದೆ. 2022-23ರ ಬಜೆಟ್ ಸಂದರ್ಭದಲ್ಲಿ 7.02 ಲಕ್ಷ ಕೋಟಿಗಳಷ್ಟು ಪ್ರಾಥಮಿಕ ಕೊರತೆ ಇರಲಿದೆ ಎಂದು ಅಂದಾಜಿಸಿದ್ದರು. ಆದರೆ ಅಂತಿಮ ಪರಿಷ್ಕರಣೆ ಸಂದರ್ಭದಲ್ಲಿ ಅದರ ಪ್ರಮಾಣ 8.02 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಹಾಗಾಗಿ ಕೇಂದ್ರ ಸರಕಾರದ ಅಂಕಿ ಅಂಶಗಳ ಮೇಲೆಯೇ ನಮಗೆ ನಂಬಿಕೆ ಹೊರಟು ಹೋಗಿದೆ. 

ಸಂಗ್ರಹವಾಗುವ ಪ್ರತಿ 100 ರೂ.ಯಲ್ಲಿ ಕಾರ್ಪೊರೇಟ್ ಮತ್ತು ಆದಾಯ ತೆರಿಗೆ ಯಿಂದ 30 ರೂ.ಗಳು, ಜನರು ಕಟ್ಟುವ ತೆರಿಗೆಯಿಂದ 34 ರೂ., ಸಾಲ ಮತ್ತು ಇತರ ಹೊಣೆಗಾರಿಕೆಗಳ ಮೂಲದಿಂದ 34 ರೂ ಹಾಗೂ ಇತರ ಮೂಲದಿಂದ 2 ರೂ.ಗಳನ್ನು ಸ್ವೀಕರಿಸುತ್ತದೆ.ಈ ವರ್ಷ ತೆರಿಗೆ ಸಂಗ್ರಹದ ಪ್ರಮಾಣ ಹಿಂದಿನ ವರ್ಷಗಳಿಗಿಂತಲೂ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. 2021-22 ರಲ್ಲಿ ಜಿಡಿಪಿಗೆ ಶೇ.11.4 ರಷ್ಟು ತೆರಿಗೆ ಸಂಗ್ರಹವಾಗಿದ್ದರೆ, 2023-24ಕ್ಕೆ ಶೇ. 11.1 ರಷ್ಟು ತೆರಿಗೆ ಸಂಗ್ರಹ ಆಗಬಹುದೆಂದು ಅಂದಾಜಿಸಲಾಗಿದೆ. ಅಂದರೆ ಈ ವರ್ಷವೂ ಕೂಡ ಕಾರ್ಪೊರೇಟ್ ಬಂಡವಾಳಿಗರು ಮತ್ತು ಅತಿ ಶ್ರೀಮಂತರಿಗಿಂತ ಬಡವರೇ ಹೆಚ್ಚು ತೆರಿಗೆಯನ್ನು ಕಟ್ಟುವ ಗ್ರಹಚಾರಕ್ಕೆ ತುತ್ತಾಗಿದ್ದಾರೆ.

  • ಚುನಾವಣಾ ವರ್ಷ ಆಗಿರುವುದರಿಂದ ರಾಜ್ಯಕ್ಕೆ ಈ ನೆಪದಲ್ಲಾದರೂ ಒಂದಷ್ಟು ಅನುಕೂಲ ಈ ಬಜೆಟ್‌ನಿಂದ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಈ ನಿರೀಕ್ಷೆಯನ್ನು ಹುಸಿಗೊಳಿಸಿ ನಿರ್ಮಲಾ ಸೀತಾರಾಮನ್ ಅವರು ಮತ್ತೆ ತಾವು ಆಯ್ಕೆಯಾದ ರಾಜ್ಯಕ್ಕೆ ದ್ರೋಹ ಎಸಗಿದ್ದಾರೆ.
  • 2021 ರಲ್ಲಿ ತಮಿಳುನಾಡು ಚುನಾವಣೆ ಹೊತ್ತಲ್ಲಿ ಘೋಷಣೆಯ ಸಂದರ್ಭದಲ್ಲಿ ಆ ವರ್ಷದ ಬಜೆಟ್‌ನಲ್ಲಿ 1.03 ಲಕ್ಷ ಕೋಟಿ ಅನುದಾನಗಳನ್ನು ಹೆದ್ದಾರಿ ಯೋಜನೆಗಳಿಗೆ ಘೋಷಿಸಿದ್ದರು. ಆದರೆ ಈ ವರ್ಷ ಕರ್ನಾಟಕದ ಭದ್ರಾ ಮೇಲ್ದಂಡೆಗೆ 5,300 ಕೋಟಿ ಘೋಷಣೆ ಬಿಟ್ಟರೆ ಬೇರೆ ನಯಾಪೈಸೆ ಅನುಕೂಲ ಆಗಿಲ್ಲ. 
  • ಭದ್ರಾ ಮೇಲ್ದಂಡೆ ಯೋಜನೆಯ 2022-23 ರ ಯೋಜನಾ ವೆಚ್ಚ 23,000 ಕೋಟಿ ರೂ.ಎಂದು ಕಾರಜೋಳ ಅವರು ಹೇಳಿದ್ದರು.ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುತ್ತಾರೆ, ಇದರಿಂದ ಶೇ.50ರಷ್ಟು ಅನುದಾನವನ್ನು ಕೇಂದ್ರ ಸರಕಾರವು ಕೊಡುತ್ತದೆ ಎಂದು ಸಿಎಂ ಬೊಮ್ಮಾಯಿ ಮತ್ತು ಮಂತ್ರಿ ಕಾರಜೋಳ ಅವರು ಹೇಳಿಕೊಂಡು ಓಡಾಡುತ್ತಿದ್ದರು. ಆದರೆ ಕೇಂದ್ರ ಸರಕಾರ ರಾಜ್ಯದ ಜನರ ಮೂಗಿಗೆ ತುಪ್ಪ ಸವರಿ ಬಿಟ್ಟಿದೆ. ಕೇಂದ್ರ ಸರಕಾರ ಕೊಡುತ್ತೇನೆ ಎಂದು ಹೇಳಿರುವ ಅನುದಾನ ಎಷ್ಟು ವರ್ಷಕ್ಕೆ ಅನ್ವಯವಾಗುತ್ತದೆ ಎಂಬ ಮಾಹಿತಿಯನ್ನೇನೂ ಹೇಳಿಲ್ಲ.    
  • ಕಳೆದ ಎರಡು - ಮೂರು ವರ್ಷಗಳಿಂದ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆಂದು ಒಂದಿಷ್ಟು ಅನುದಾನ ಘೋಷಿಸುತ್ತಿದ್ದರು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಅದರ ಸುಳಿವೇ ಇಲ್ಲ.
  • ಕಳೆದ ವರ್ಷ ನದಿ ಜೋಡಣೆಗೆಂದು ದೊಡ್ಡ ಮೊತ್ತವನ್ನು ಘೋಷಿಸಿ ದ್ದರು. ಆ ಯೋಜನೆಗಳನ್ನೂ ಕೈಗೆತ್ತಿಕೊಂಡಿಲ್ಲ. ಈ ವರ್ಷ ಅನುದಾನವನ್ನೂ ಘೋಷಣೆ ಮಾಡಿಲ್ಲ.
  • ನರೇಗಾಕ್ಕೆ ಕಳೆದ ಸಾಲಿಗಿಂತ 29 ಸಾವಿರ ಕೋಟಿ ಅನುದಾನ ಕಡಿಮೆ ಮಾಡಿದ್ದಾರೆ. ದೇಶದಲ್ಲಿ ನಿರುದ್ಯೋಗ ತಾಂಡವ ಆಡುತ್ತಿ ರುವ ಹೊತ್ತಲ್ಲಿ ನರೇಗಾ ಆಸರೆಯಾಗಿದೆ. ಕೋವಿಡ್ ಮತ್ತು ಡಿಮಾನೆಟೈಸೇಷನ್ ನಿಂದ ಆದ ಅನಾಹುತಗಳ ಸಂದರ್ಭದಲ್ಲಿ ಗ್ರಾಮೀಣ ಭಾಗಕ್ಕೆ ಉಸಿರಾಗಿದ್ದು ನರೇಗಾ. ಆದರೆ ಕ್ರಮೇಣ ನರೇಗಾಕ್ಕೆ ಹಣ ಹೆಚ್ಚಾಗಿಸುವ ಬದಲಿಗೆ ಕಡಿಮೆ ಮಾಡಲಾಗುತ್ತಿದೆ. 
  • ಈ ವರ್ಷ ಆಹಾರಕ್ಕೆ ನೀಡುವ ಸಬ್ಸಿಡಿ ಪ್ರಮಾಣ 2022-23 ಕ್ಕಿಂತ ಸುಮಾರು 90 ಸಾವಿರ ಕೋಟಿಗಳಷ್ಟು ಕಡಿಮೆ ಮಾಡಿದ್ದಾರೆ. (2022-23 ರಲ್ಲಿ 2.87 ಲಕ್ಷ ಕೋಟಿ ಇದ್ದದ್ದು ಈ ವರ್ಷ 1.97 ಲಕ್ಷ ಕೋಟಿಗೆ ಇಳಿಸಿದ್ದಾರೆ) 
  • ರಸಗೊಬ್ಬರದ ಮೇಲಿನ ಸಬ್ಸಿಡಿ ಪ್ರಮಾಣ ಸುಮಾರು 50 ಸಾವಿರ ಕೋಟಿ ಕಡಿಮೆಯಾಗಿದೆ. (2022-23 ರಲ್ಲಿ 2.25 ಲಕ್ಷ ಕೋಟಿ ಇದ್ದದ್ದು ಈ ವರ್ಷ 1.75 ಲಕ್ಷ ಕೋಟಿಗೆ ಇಳಿಸಿದ್ದಾರೆ)
  • ಕೃಷಿಗೆ 83 ಸಾವಿರ ಕೋಟಿ ಕಳೆದ ವರ್ಷ ಇತ್ತು. ಈ ವರ್ಷ ಕೇವಲ ಒಂದು ಸಾವಿರ ಕೋಟಿ ಹೆಚ್ಚಿಸಿ 84 ಸಾವಿರ ಕೋಟಿ ಮಾಡಿದ್ದಾರೆ.
  • ಕೈಗಾರಿಕಾ ಅಭಿವೃದ್ಧಿಗೆ 53 ಸಾವಿರ ಕೋಟಿ ಇದ್ದದ್ದನ್ನು 48 ಸಾವಿರ ಕೋಟಿ ಇಳಿಸಿದ್ದಾರೆ.  
  • ಶಿಕ್ಷಣಕ್ಕೆ 1.04 ಲಕ್ಷ ಕೋಟಿಯಿಂದ ಕೇವಲ 8 ಸಾವಿರ ಕೋಟಿ ಹೆಚ್ಚಿಸಿ 1.12 ಲಕ್ಷ ಕೋಟಿ ಮಾಡಿದ್ದಾರೆ.
  • ಆರೋಗ್ಯಕ್ಕೆ 88.9 ಸಾವಿರ ಕೋಟಿ ಕೊಟ್ಟಿದ್ದರು. ಈ ವರ್ಷ 87 ಸಾವಿರ ಕೋಟಿ ಮಾತ್ರ ಕೊಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿಗೆ 2.43 ಲಕ್ಷ ಕೋಟಿ ಖರ್ಚು ಮಾಡಿದ್ದವರು, ಈಗ 2.38 ಲಕ್ಷ ಕೋಟಿಗೆ ಇಳಿಸಿ ಸುಮಾರು 5 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ.
  • ಸಮಾಜ ಕಲ್ಯಾಣಕ್ಕೆ 52 ಸಾವಿರ ಕೋಟಿ ಕೊಟ್ಟಿದ್ದವರು ಈ ಬಾರಿ ಹೆಚ್ಚಿಸಿರುವುದು ಕೇವಲ 3 ಸಾವಿರ ಕೋಟಿ ಮಾತ್ರ. ಇದರಿಂದ 55 ಸಾವಿರ ಕೋಟಿಗೆ ಏರಿಕೆಯಾಗಿದೆಯಷ್ಟೆ.
  • ಕಳೆದ ವರ್ಷ ನಗರಾಭಿವೃದ್ಧಿಗೆ 76.6 ಸಾವಿರ ಕೋಟಿ ಕೊಟ್ಟಿದ್ದರು. ಈ ವರ್ಷ 76.4 ಸಾವಿರ ಕೋಟಿಗೆ ಇಳಿಸಿದ್ದಾರೆ. 
  • ಒಟ್ಟಾರೆ, ಶಿಕ್ಷಣ-ಸಮಾಜ ಕಲ್ಯಾಣ-ಕೃಷಿ-ರಾಜ್ಯಗಳಿಗೆ ತೆರಿಗೆ ಹಂಚಿಕೆ-ಗ್ರಾಮೀಣಾಭಿವೃದ್ಧಿ-ಸಬ್ಸಿಡಿಗಳು-ಆರೋಗ್ಯ ಇತರ ಅತೀ ಮುಖ್ಯವಾದ ಕ್ಷೇತ್ರಗಳಿಗೆ ಕಳೆದ ವರ್ಷ ಕೊಟ್ಟಿದ್ದ ಅನುದಾನಕ್ಕಿಂತ ಕಡಿಮೆ ಮಾಡಿದ್ದಾರೆ ಅಥವಾ ಯಥಾ ಸ್ಥಿತಿಯನ್ನು ಉಳಿಸಿ ಕೊಂಡಿದ್ದಾರೆ.    
  • ಹಣದುಬ್ಬರದ ಪ್ರಮಾಣ ಶೇ.7ರಷ್ಟು ಕಳೆದರೆ, ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಕೊಟ್ಟಿರುವ ಅನುದಾನಗಳು ನಕಾರಾತ್ಮಕ ಹಾದಿಯಲ್ಲಿವೆ. ಉದಾಹರಣೆಗೆ, ನರೇಗಾಕ್ಕೆ 90 ಸಾವಿರ ಕೋಟಿ 2022-23 ರಲ್ಲಿ ಖರ್ಚು ಮಾಡಿದ್ದರೆ ಈ ವರ್ಷ ಕೇವಲ 60 ಸಾವಿರ ಕೋಟಿಗಳನ್ನು ಮೀಸಲಿರಿಸಿದ್ದಾರೆ.
  • ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಬಗ್ಗೆ ಮೋದಿಯವರು ಹೋದಲ್ಲೆಲ್ಲಾ ಮಾತನಾಡುತ್ತಾರೆ. ಆದರೆ, ಕಳೆದ ವರ್ಷ 13 ಸಾವಿರ ಕೋಟಿ ರೂ. ಕೊಟ್ಟಿದ್ದವರು ಈ ಬಾರಿ. 10,700 ಕೋಟಿ ರೂ. ಮಾತ್ರ ಕೊಟ್ಟಿದ್ದಾರೆ. 
  • ನಿನ್ನೆ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯಲ್ಲಿ ಶೇ.20ರಷ್ಟು ಕುಟುಂಬಗಳು ಇನ್ನೂ ಶೌಚಾಲಯ ಹೊಂದಿಲ್ಲ ಎಂಬ ವರದಿ ಇದೆ. ಆದರೆ, ಗ್ರಾಮೀಣ ಸ್ವಚ್ಛ ಭಾರತ್ ಮಿಷನ್‌ಗೆ ಕಳೆದ ವರ್ಷ ಕೊಟ್ಟಿದ್ದಷ್ಟೇ ಅನುದಾನವನ್ನು ಈ ವರ್ಷವೂ ಕೊಟ್ಟಿದ್ದಾರೆ.
  • ಗ್ರಾಮೀಣ ಜೀವನಾಭಿವೃದ್ಧಿ ಅಥವಾ ಉದ್ಯೋಗ ಸೃಷ್ಟಿಗಾಗಿ ಇರುವ ನ್ಯಾಷನಲ್ ಲೈವ್ಲಿವುಡ್ ಮಿಷನ್‌ನಲ್ಲಿ ಕಳೆದ ವರ್ಷ 14.3 ಸಾವಿರ ಕೋಟಿ ಕೊಟ್ಟಿದ್ದರು. ಈ ವರ್ಷ ಅದಕ್ಕಿಂತ 200 ಕೋಟಿ ರೂ. ಕಡಿತಗೊಳಿಸಿದ್ದಾರೆ.
  • ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಮುಖ್ಯ ಯೋಜನೆಗಳಿಗಾಗಿ ಕಳೆದ ವರ್ಷ 1,800 ಕೋಟಿ ರೂ. ಮೀಸಲಿಸಿದ್ದರು ಈ ವರ್ಷ ಕೇವಲ 610 ಕೋಟಿ ರೂ. ಒದಗಿಸಿದ್ದಾರೆ.
  • ಪ್ರಧಾನ ಮಂತ್ರಿ ಗ್ರಾಮ ಸಡಕ್ (ಗ್ರಾಮೀಣ ರಸ್ತೆ) ಕಳೆದ ವರ್ಷ ನೀಡಿದ್ದ 19 ಸಾವಿರ ಕೋಟಿ ರೂ.ಯಷ್ಟೇ ಅನುದಾನವನ್ನು ಈ ವರ್ಷಕ್ಕೂ ಉಳಿಸಿದ್ದಾರೆ.
  • ಬಿಜೆಪಿ ಸರಕಾರವು ಅತಿ ಹೆಚ್ಚು ಮಾತನಾಡುವ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಗೆ ಕಳೆದ ವರ್ಷ 10,433 ಕೋಟಿ ರೂ.ಕೊಟ್ಟಿದ್ದರೆ ಈ ವರ್ಷ ಕೇವಲ 7 ಸಾವಿರ ಕೋಟಿ ರೂ.ಕೊಟ್ಟಿದ್ದಾರೆ.
  • ರೈತರು, ಸಣ್ಣ ರೈತರಿಗೆ ಯಾವ ಯೋಜನೆಯೂ ಇಲ್ಲ. 
  • ಬಿಜೆಪಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿ.ಎಂ. ಕಿಸಾನ್‌ಗೆ 8,000 ಕೋಟಿ ರೂ.ಷ್ಟು ಅನುದಾನ ಕಡಿಮೆ ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಹೊಸ ಸಣ್ಣ ರೈತರು ಉದ್ಭವಿ ಸುತ್ತಾರೆ. ಆಸ್ತಿ ವಿಭಜನೆಗೊಳ್ಳುತ್ತಲೆ ಇವೆ. ಆದರೆ ಕೊಡುತ್ತಿರುವ ಅನುದಾನವನ್ನೇ ಕಡಿಮೆ ಮಾಡಿದ್ದಾರೆ.
  • 2022 ರ ಒಳಗೆ ದೇಶದ ಎಲ್ಲರಿಗೂ ಮನೆ ನಿರ್ಮಿಸುವುದಾಗಿ ಘೋಷಿಸಿದ್ದರು. ಆದರೆ ಕರ್ನಾಟಕದಲ್ಲೇ ಇನ್ನೂ 25 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಸುಭದ್ರ ಸೂರುಗಳಿಲ್ಲವೆಂದು ದಾಖಲೆಗಳು ಹೇಳುತ್ತಿವೆ. ಹಾಗಾಗಿ ಬಜೆಟ್‌ನಲ್ಲಿ ಇಟ್ಟಿರುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ.
  • ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರೆ, ಆದರೆ ಯಾವ ಯೋಜನೆ ಯೂ ಬಜೆಟ್‌ನಲ್ಲಿ ಇಲ್ಲ. ಎನ್.ಆರ್.ಎಲ್.ಎಂ. ಮತ್ತು ನರೇಗಾಕ್ಕೆ ಕೊಡುವ ಅನುದಾನಗಳನ್ನೇ ಕಡಿತ ಮಾಡಿದ್ದಾರೆ.
  • ಎಂಎಸ್‌ಪಿ ಯೋಜನೆಯಡಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲು 2022-23 ರಲ್ಲಿ 72.3 ಸಾವಿರ ಕೋಟಿ ರೂ.ಖರ್ಚು ಮಾಡಿದ್ದರೆ, ಈ ವರ್ಷ ಕೇವಲ 59.7 ಸಾವಿರ ಕೋಟಿ ರೂಗಳನ್ನು ಒದಗಿಸಿದ್ದಾರೆ.
  • ದೇಶದ ಮೆಟ್ರೋ ಯೋಜನೆಗಳಿಗಾಗಿ 2022-23 ರಲ್ಲಿ 19,130 ಕೋಟಿ ಒದಗಿಸಿದ್ದರೆ ಈ ವರ್ಷ ಕೇವಲ 400 ಕೋಟಿಗಳಷ್ಟನ್ನು ಮಾತ್ರ ಹೆಚ್ಚಿಸಿದ್ದಾರೆ.
  • ಆದಾಯ ತೆರಿಗೆ ಮಿತಿ ಹೆಚ್ಚಿಸಿದ್ದನ್ನು ಬಿಜೆಪಿಯವರು ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಕಾರ್ಪೊರೇಟ್ ಬಂಡವಾಳಿ ಗರ ಮೇಲಿನ ತೆರಿಗೆಯನ್ನು ಶೇ.8ರಷ್ಟು ಕಡಿಮೆ ಮಾಡಿದ್ದಾರೆ. ಅದಾನಿ, ಅಂಬಾನಿ ಮುಂತಾದವರ ಮೇಲಿನ ತೆರಿಗೆ ಕಡಿತದಿಂದ ದೇಶಕ್ಕೆ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವಾಗುತ್ತಿದೆ. ಆದರೆ ಮಧ್ಯಮ ವರ್ಗದವರ ಮೇಲಿನ ತೆರಿಗೆ ಇಳಿಸಿದ್ದೇವೆಂದು ಹೇಳುತ್ತಿರುವುದು ಸಣ್ಣ ಮೊತ್ತವನ್ನು ಮಾತ್ರ.
  • ಅದಾನಿ ಬೇನಾಮಿ ವ್ಯವಹಾರದ ಮೂಲಕ ದೇಶಕ್ಕೆ ಮಾಡಿರುವ ಮೋಸದ ಪ್ರಮಾಣ ಲೆಕ್ಕ ಹಾಕಲು ಸಾಧ್ಯವಾಗದಷ್ಟು ಮಟ್ಟಕ್ಕೆ ಇದೆ. ಅದನ್ನು ತನಿಖೆ ಮಾಡಿ ದೇಶಕ್ಕೆ ಆಗಿರುವ ಲುಕ್ಸಾನನ್ನು ಸರಿಪಡಿಸುವ ಕುರಿತು ಯಾವುದೇ ಪ್ರಸ್ತಾಪ ಇಲ್ಲ.
  • ಒಟ್ಟಾರೆ, ಈ ಬಜೆಟ್ ಅತ್ಯಂತ ನಿರಾಶಾದಾಯಕ. ಕೃಷಿ, ನೀರಾವರಿ,ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಸಮಾಜ ಕಲ್ಯಾಣ ಎಲ್ಲಾ ಯೋಜನೆ ಗಳನ್ನೂ ಮೋದಿ ಅವರ ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ. ದೇಶವು ಗಂಭೀರ ಸ್ವರೂಪದ ಸಾಲದ ಸುಳಿಯಲ್ಲಿ ಸಿಲುಕಿದೆ. ನಿನ್ನೆ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯೂ ಅತ್ಯಂತ ಹುಸಿ ಅಂಕಿಅಂಶಗಳ ಅಲಂಕಾರ ಎನ್ನುವುದನ್ನು ಬಜೆಟ್ ಸಾಬೀತು ಪಡಿಸಿದೆ.
  • ಒಟ್ಟಾರೆ ಈ ದೇಶದ ಯುವಕರಿಗೆ, ಮಹಿಳೆಯರಿಗೆ, ರೈತರು, ಕಾರ್ಮಿಕ ವರ್ಗಕ್ಕೆ, ದುಡಿಯುವ ಜನರಿಗೆ, ವಿದ್ಯಾರ್ಥಿಗಳಿಗೆ ಯಾರಿಗೂ ಸಹ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರದಿಂದ ಯಾವುದೇ ಭರವಸೆ ಇಲ್ಲ ಎಂಬುದು ಈ ಬಜೆಟ್ ಸಾಬೀತುಮಾಡಿದೆ.
  • ವಿಶೇಷವಾಗಿ ಕರ್ನಾಟಕದ ವಿಚಾರಕ್ಕೆ ಬಂದರೆ, ರೈಲ್ವೆ, ರಸ್ತೆ, ಕೃಷಿ ಹಾಗೂ ಇನ್ನಿತರ ಎಲ್ಲಾ ಕ್ಷೇತ್ರಗಳನ್ನೂ ಮೋದಿ ನೇತೃತ್ವದ ಸರಕಾರ ನಿರ್ಲಕ್ಷಿಸಿದೆ.  
  • ರಾಜ್ಯ ಬಿಜೆಪಿಯವರು ಭದ್ರಾ ಮೇಲ್ದಂಡೆ ಯೋಜನೆಗೆ ಕೊಡುತ್ತೇ ವೆಂದು ಹೇಳಿರುವ 5,300 ಕೋಟಿ ರೂ.ಗಳ ಅನುದಾನವನ್ನು ಇಟ್ಟುಕೊಂಡೇ ಚುನಾವಣೆಯನ್ನು ಎದುರಿಸುತ್ತೇವೆ ಎನ್ನುವ ತಿಕ್ಕಲು ಭ್ರಮೆಯಲ್ಲಿ ಇದ್ದಾರೆ. 
  • ಮೇಕೆದಾಟು, ಮಹಾದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಂದೇ ಒಂದು ರೂ.ಯನ್ನೂ ಕೊಟ್ಟಿಲ್ಲ.
  • ಈ ವರ್ಷ ಚುನಾವಣೆಯ ನೆಪದಲ್ಲಾದರೂ ರಾಜ್ಯಕ್ಕೆ ಹೆಚ್ಚಿನ ಅನುದಾನ ಬರುತ್ತದೆ, ಹೆಚ್ಚಿನ ಯೋಜನೆಗಳು ಬರುತ್ತವೆ ಎಂದು ನಿರೀಕ್ಷಿಸಿದ್ದೆ. ಈಗ ಅದೆಲ್ಲವೂ ಹುಸಿಯಾಗಿದೆ.
  • ಕರ್ನಾಟಕದ ಜನರಿಂದ 3.5 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ದೋಚುವ ಮೋದಿ ಸರಕಾರ ಕರ್ನಾಟಕದ ಜನರಿಗೆ ಎಲ್ಲಾ ದಿಕ್ಕುಗಳಿಂದಲೂ ಮೋಸ ಮಾಡಿದೆ.

share
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು
Next Story
X