Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಬಜೆಟ್ ವಿರುದ್ಧ ಫೆ.22ರಿಂದ 28ರವರೆಗೆ...

ಬಜೆಟ್ ವಿರುದ್ಧ ಫೆ.22ರಿಂದ 28ರವರೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆ: ಸಿಪಿಎಂ

ಬಜೆಟ್ ನ ಜನವಿರೋಧಿ, ಅರ್ಥವ್ಯವಸ್ಥೆಯನ್ನು ಕುಗ್ಗಿಸುವ ಅಂಶಗಳ ವಿರುದ್ಧ ಹಾಗೂ ಬೇಡಿಕೆಗಳ ಅನುಷ್ಠಾನಕ್ಕೆ ಆಗ್ರಹ

2 Feb 2023 12:39 PM IST
share
ಬಜೆಟ್ ವಿರುದ್ಧ ಫೆ.22ರಿಂದ 28ರವರೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆ: ಸಿಪಿಎಂ
ಬಜೆಟ್ ನ ಜನವಿರೋಧಿ, ಅರ್ಥವ್ಯವಸ್ಥೆಯನ್ನು ಕುಗ್ಗಿಸುವ ಅಂಶಗಳ ವಿರುದ್ಧ ಹಾಗೂ ಬೇಡಿಕೆಗಳ ಅನುಷ್ಠಾನಕ್ಕೆ ಆಗ್ರಹ

ಬೆಂಗಳೂರು, ಫೆ.2: ಕೇಂದ್ರ ಬಜೆಟ್‍ 2023-24 ಭಾರತದ ಅರ್ಥವ್ಯವಸ್ಥೆಯ ಸದ್ಯದ ಸನ್ನಿವೇಶವನ್ನು ಎದುರಿಸುವಲ್ಲಿ ವಿಫಲವಾಗಿರುವ ಜನ-ವಿರೋಧಿ ಬಜೆಟ್‍ ಆಗಿದೆ ಎಂದು ಸಿಪಿಎಂ ಪಾಲಿಟ್‌ ಬ್ಯೂರೋ ಟೀಕಿಸಿದೆ.

ಬಜೆಟ್ ನ ಜನವಿರೋಧಿ ಮತ್ತು ಅರ್ಥವ್ಯವಸ್ಥೆಯನ್ನು ಕುಗ್ಗಿಸುವ ಅಂಶಗಳ ವಿರುದ್ಧ ಹಾಗೂ ಕೆಲವೊಂದು ಬೇಡಿಕೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಫೆ.22ರಿಂದ 28ರವರೆಗೆ ಸಿಪಿಎಂ ರಾಷ್ಟ್ರವ್ಯಾಪಿ ಪ್ರತಿಭಟನಾ ಕಾರ್ಯಾಚರಣೆಗಳನ್ನು ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

ಜನರಿಗೆ ಬಹಳಷ್ಟು ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸಲು ಮತ್ತು ಅರ್ಥ ವ್ಯವಸ್ಥೆ ಸುಧಾರಿಸಿಕೊಳ್ಳುವಂತೆ ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಗಣನೀಯವಾಗಿ ಹೆಚ್ಚಿಸಬೇಕಿತ್ತು. ಹೆಚ್ಚಿನ ಕೂಲಿಯೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಿ ಹಂಚಿಕೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕಿತ್ತು. ಐದು ಕೆಜಿ ಉಚಿತ ಆಹಾರ ಧಾನ್ಯಗಳ ಜೊತೆಗೆ 5 ಕೆಜಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಮತ್ತೆ ಒದಗಿಸಬೇಕಿತ್ತು. ಸಂಪತ್ತು ಮತ್ತು ಪಿತ್ರಾರ್ಜಿತ ತೆರಿಗೆಯನ್ನು ವಿಧಿಸಬೇಕಿತ್ತು. ಆಹಾರ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಹಿಂಪಡೆಯಬೇಕಿತ್ತು ಎಂದು ಸಿಪಿಎಂ ಪಾಲಿಟ್‌ ಬ್ಯೂರೋ ಆಗ್ರಹಿಸಿದೆ.

ಭಾರತದ ಅರ್ಥ ವ್ಯವಸ್ಥೆ ಕೋವಿಡ್ ಎರಗುವ ಮೊದಲೇ ನಿಧಾನಗತಿಗಿಳಿದಿತ್ತು. ಮಹಾಸೋಂಕಿನ ಎರಡು ವರ್ಷಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ತದನಂತರದ ಚೇತರಿಕೆಯ ಮೇಲೆ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಆರ್ಥಿಕ ಸ್ಥಗಿತತೆಯತ್ತ ಸಾಗುವ ಸಾಧ್ಯತೆಯು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ. ಇಂತಹ ಸನ್ನಿವೇಶದಲ್ಲಿ ಈ ಬಜೆಟ್ ಉದ್ಯೋಗ ಸೃಷ್ಟಿಯೊಂದಿಗೆ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಆಂತರಿಕ ಬೇಡಿಕೆಯ ಬೆಳವಣಿಗೆಗೆ ಒತ್ತಾಸೆ ನೀಡುವ ಕೇಂದ್ರೀಯ ಪ್ರಶ್ನೆಗಳನ್ನು ಎತ್ತಿಕೊಳ್ಳಬೇಕಿತ್ತು ಎಂದು ಅದು ಹೇಳಿದೆ.

ಈ ಬಜೆಟ್ ಅದರಲ್ಲಿ ವಿಫಲವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಇದು ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಸರ್ಕಾರದ ವೆಚ್ಚಗಳನ್ನು ಹಿಂಡುತ್ತದೆ ಮತ್ತು ಶ್ರೀಮಂತರಿಗೆ ಮತ್ತಷ್ಟು ತೆರಿಗೆ ರಿಯಾಯಿತಿಯನ್ನು ನೀಡುತ್ತದೆ. ಆಕ್ಸ್ಫಾಮ್ ವರದಿಯು ಭಾರತದಲ್ಲಿ ಶೇ.1ರಷ್ಟು ಶ್ರೀಮಂತರು ಕಳೆದ 2 ವರ್ಷಗಳಲ್ಲಿ ಉತ್ಪತ್ತಿಯಾದ ಸಂಪತ್ತಿನ ಶೇ.40.5ನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ತೋರಿಸಿರುವ ಈ ಬಜೆಟ್‍ ಬಂದಿದೆ. ಹೀಗೆ, ಇದು ಸಂಕೋಚನಗೊಳಿಸುವ ಬಜೆಟ್ ಆಗಿದ್ದು, ಆರ್ಥಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತದೆ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಅಭಿಪ್ರಾಯಪಟ್ಟಿದೆ.

 2023-24ರಲ್ಲಿ ಸರಕಾರದ ಒಟ್ಟು ವೆಚ್ಚದ ಹೆಚ್ಚಳವು ಕೇವಲ 7 ಶೇ. ಈ ಅವಧಿಯಲ್ಲಿ ಜಿಡಿಪಿ (ಹಣದುಬ್ಬರದೊಂದಿಗೆ) ಹೆಚ್ಚಳ 10.5 ಶೇ. ಎಂದು ಅಂದಾಜಿಸಲಾಗಿದೆ. ಹೀಗಾಗಿ, ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಸರ್ಕಾರದ  ವೆಚ್ಚದಲ್ಲಿ ಇಳಿಕೆಯಾಗಿದೆ. ಬಡ್ಡಿ ಪಾವತಿಗಳನ್ನು ಹೊರತುಪಡಿಸಿದರೆ, ಈ ವೆಚ್ಚವು ಕಳೆದ ವರ್ಷಕ್ಕಿಂತ ಕೇವಲ 5.4 ಶೇ. ಹೆಚ್ಚು. ಸೂಚ್ಯ ಹಣದುಬ್ಬರ ದರ 4 ಶೇ.  ಮತ್ತು ಸುಮಾರು 1 ಶೇ. ಜನಸಂಖ್ಯಾ ಹೆಚ್ಚಳವನ್ನು ಗಣನೆಗೆ ತೆಗೆದುಕೊಂಡರೆ, 'ಜನಕೇಂದ್ರಿತ' ಬಜೆಟ್ ಎಂದು ಕರೆಯಲ್ಪಡುವ ಇದು ನಮ್ಮ ಬಹುಪಾಲು ಜನರ ಜೀವನೋಪಾಯದ ಮೇಲೆ ಮತ್ತಷ್ಟು ದಾಳಿಗಳನ್ನು ಮಾಡುತ್ತದೆ ಎಂದು ಸಿಪಿಎಂ ಹೇಳಿದೆ.

ನಿರುದ್ಯೋಗ ದರವು ಇದುವರೆಗೆ ಕಾಣದ ಎತ್ತರಕ್ಕೆ ಏರಿರುವಾಗ ಈ ಬಜೆಟ್ ಮನರೇಗ ಯೋಜನೆಗೆ ಹಂಚಿಕೆಯನ್ನು ಶೇ.33ರಷ್ಟು ಕಡಿಮೆ ಮಾಡುತ್ತದೆ. ಆಹಾರ ಸಬ್ಸಿಡಿಯಲ್ಲಿ ರೂ. 90,000 ಕೋಟಿ, ರಸಗೊಬ್ಬರ ಸಬ್ಸಿಡಿಯಲ್ಲಿ  ರೂ.50,000 ಕೋಟಿ ಮತ್ತು ಪೆಟ್ರೋಲಿಯಂ ಸಬ್ಸಿಡಿಯಲ್ಲಿ ರೂ. 6,900 ಕೋಟಿ ಕಡಿತ ಮಾಡುತ್ತದೆ.

ಸಾಂಕ್ರಾಮಿಕ ರೋಗದಿಂದ ಉಂಟಾದ ವಿನಾಶದ ಹೊರತಾಗಿಯೂ ಕಳೆದ ವರ್ಷ ಆರೋಗ್ಯಕ್ಕಾಗಿ ಮೀಸಲಿಟ್ಟ ರೂ.9255 ಕೋಟಿ ಖರ್ಚಾಗದೆ ಉಳಿದಿದೆ. ಅಂತೆಯೇ, ಶಿಕ್ಷಣ ಬಜೆಟ್ ನಲ್ಲಿ ರೂ. 4297 ಕೋಟಿ ಖರ್ಚಾಗದೇ ಉಳಿದಿದೆ.

ಐಸಿಡಿಎಸ್ ಯೋಜನಾ ಕಾರ್ಯಕರ್ತರಿಗೆ ಈಗಾಗಲೇ ನೀಡಲಾಗುತ್ತಿರುವ ಅಲ್ಪ ಸಂಭಾವನೆ ಯಾವುದೇ ಏರಿಕೆ ಕಾಣುತ್ತಿಲ್ಲ. ಲಿಂಗ ಬಜೆಟ್ ಒಟ್ಟು ಖರ್ಚಿನ ಶೇ.9 ಮಾತ್ರ. ಶೇ. 16ರಷ್ಟಿರುವ ಪರಿಶಿಷ್ಟ ಜಾತಿಗಳ ಬಜೆಟಿಗೆ ಕೇವಲ 3.5 ಶೇ. ಮತ್ತು 8.6 ಶೇ. ಪರಿಶಿಷ್ಟ ಬುಡಕಟ್ಟು ಜನಗಳ ಬಜೆಟಿಗೆ ಕೇವಲ 2.7 ಶೇ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಅಬ್ಬರದ ಹೇಳಿಕೆಗಳ ಟೊಳ್ಳುತನವು ಪ್ರಧಾನ ಮಂತ್ರಿ ಕಿಸಾನ್ ನಿಧಿಗೆ ಹಂಚಿಕೆಯನ್ನು ರೂ. 68,000 ಕೋಟಿ ರೂ.ಗಳಿಂ ದ ರೂ.60,000 ಕೋಟಿಗೆ ಇಳಿಸಿರುವದರಲ್ಲಿ ಕಾಣಬಹುದು.

ಬಂಡವಾಳ ವೆಚ್ಚಗಳಲ್ಲಿ ಗಣನೀಯ ಹೆಚ್ಚಳ ಮಾಡಲಾಗಿದೆ, ಇದು ಉದ್ಯೋಗ ಸೃಷ್ಟಿಗೆ ಅನುವು ಮಾಡಿಕೊಡುತ್ತದೆ ಎಂಬ  ಸರ್ಕಾರದ ಹೇಳಿಕೆ ಕೇವಲ ತೋರಿಕೆ , ಏಕೆಂದರೆ 2022-2023ರಲ್ಲಿ  ಸಾರ್ವಜನಿಕ ಉದ್ಯಮದ ಸಂಪನ್ಮೂಲಗಳನ್ನು ಒಳಗೊಂಡಂತೆ ಒಟ್ಟು ಬಂಡವಾಳ ವೆಚ್ಚಗಳು ಕೇವಲ 9.6 ಶೇ. ಹೆಚ್ಚಿವೆ ಎಂದು ಪರಿಷ್ಕೃತ ಅಂದಾಜುಗಳೇ ತೋರಿಸುತ್ತವೆ, ಇದು ಜಿಡಿಪಿ ಹೆಚ್ಚಳಕ್ಕಿಂತ ಕೆಳಮಟ್ಟದಲ್ಲೇ ಇದೆ.

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ. 5 ರಿಂದ 7 ಲಕ್ಷ ರೂ. ಗೆ ಏರಿಸಿರುವುದು  ಸಂಬಳದಾರ ವಿಭಾಗಗಳಿಗೆ ಸ್ವಲ್ಪ ಪರಿಹಾರವನ್ನು ಒದಗಿಸಿದೆ. ಆದಾಗ್ಯೂ,  ಹಣದುಬ್ಬರ ಮತ್ತು ಸಾಮಾಜಿಕ ವಲಯದ ವೆಚ್ಚದಲ್ಲಿ ಕಡಿತದಿಂದ ಜನರು ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಅಗತ್ಯ ಸೇವೆಗಳಿಗೆ ಹೆಚ್ಚು ಖರ್ಚು ಮಾಡಬೇಕಾಗಿ ಬರುತ್ತದೆ ಎಂಬುದನ್ನು ಗಣನೆಗೆ ತಗೊಂಡರೆ ಕಡಿತವೇ ಹೆಚ್ಚು.  ಈ ಬಜೆಟ್ ರಾಜ್ಯ ಸರ್ಕಾರಗಳಿಗೆ ಸಂಪನ್ಮೂಲ ವರ್ಗಾವಣೆಯನ್ನು ಹಿಸುಕುವ ಮೂಲಕ ಹಣಕಾಸು ಒಕ್ಕೂಟ ತತ್ವದ ಮೇಲೆ ಮತ್ತಷ್ಟು ದಾಳಿಗಳನ್ನು ಹೇರುವುದನ್ನು ಮುಂದುವರೆಸಿದೆ. ಈ ವರ್ಗಾವಣೆಗಳು 2022-23 ರಲ್ಲಿ 8.4 ಶೇ. ಹಣದುಬ್ಬರ ದರದ ಹೊರತಾಗಿಯೂ 2021-22 ರ ಮಟ್ಟದಲ್ಲೇ ಇವೆ ಎಂದು 2022-23ರ ಪರಿಷ್ಕೃತ ಅಂದಾಜು ತೋರಿಸುತ್ತದೆ. ಅಲ್ಲದೆ ಸಾಲ ಪಡೆಯಲು ರಾಜ್ಯ ಸರ್ಕಾರಗಳಿಗೆ ಮತ್ತಷ್ಟು ಷರತ್ತುಗಳನ್ನು ವಿಧಿಸಲಾಗಿದೆ.

ಹಣಕಾಸು ಸಚಿವರು  ನೀಡಿರುವ ಮಾಹಿತಿಯ ಪ್ರಕಾರ ಶ್ರೀಮಂತರಿಗೆ ತೆರಿಗೆ ರಿಯಾಯಿತಿಗಳು ಮತ್ತು ಒಟ್ಟಾರೆ ತೆರಿಗೆ ಪ್ರಸ್ತಾವಗಳು 2023-24ರಲ್ಲಿ 35,000 ಕೋಟಿ ರೂ ಆದಾಯ ನಷ್ಟಕ್ಕೆ ಕಾರಣವಾಗುತ್ತವೆ ಎಂದು ಸಿಪಿಎಂ ಪ್ರಕಟನೆ ತಿಳಿಸಿದೆ.

share
Next Story
X