ಮಲ್ಲೇಶ್ವರಂ: ಸಚಿವ ಡಾ.ಅಶ್ವತ್ಥನಾರಾಯಣರ ಹುಟ್ಟುಹಬ್ಬ ಆಚರಣೆ

ಬೆಂಗಳೂರು, ಫೆ.2: ಉನ್ನತ ಶಿಕ್ಷಣ ಸಚಿವ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ 54ನೇ ಹುಟ್ಟುಹಬ್ಬವನ್ನು ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯ ಹಲವೆಡೆಗಳಲ್ಲಿ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಸಮ್ಮುಖದಲ್ಲಿ ಗುರುವಾರ ಆಚರಿಸಲಾಯಿತು. ಸಚಿವರು ಎಲ್ಲರೊಂದಿಗೂ ಖುಷಿಯಿಂದ ಕಲೆತು, ಶುಭಾಶಯಗಳನ್ನು ಸ್ವೀಕರಿಸಿದರು.
ಬೆಳಿಗ್ಗೆ 6 ಗಂಟೆಗೆ ಆರಂಭವಾದ ಹುಟ್ಟುಹಬ್ಬದ ಆಚರಣೆಯು ಆರ್.ಎಂ.ವಿ. ಉದ್ಯಾನ, ಡಾ.ಶಿವಪ್ರಸಾದ್ ಉದ್ಯಾನವನ, ಸ್ಯಾಂಕಿ ಕೆರೆ, ಸುಬ್ರಹ್ಮಣ್ಯ ನಗರ, ಪ್ಯಾಲೇಸ್ ಗುಟ್ಟಹಳ್ಳಿ ಮತ್ತು ಮಲ್ಲೇಶ್ವರಂ 8ನೇ ಅಡ್ಡರಸ್ತೆಗಳಲ್ಲಿ ನಡೆಯಿತು. ಯತಿರಾಜ ಮಠಕ್ಕೆ ತೆರಳಿ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಎಲ್ಲೆಡೆಗಳಲ್ಲೂ ಅಭಿಮಾನಿಗಳು ಕೇಕ್ ಕತ್ತರಿಸಿ, ನೆರೆದಿದ್ದ ಜನರಿಗೆ ವಿತರಿಸಿದರು; ಜತೆಗೆ ಎಲ್ಲೆಡೆಗಳಲ್ಲೂ ನೆರೆದಿದ್ದವರಿಗೆ ಉಪಾಹಾರ ಮತ್ತು ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಮಲ್ಲೇಶ್ವರಂ 8ನೇ ಅಡ್ಡರಸ್ತೆಯಲ್ಲಿ ಅಲ್ಲಿನ ಬೀದಿಬದಿ ವ್ಯಾಪಾರಿಗಳು ಸಚಿವರ ಹುಟ್ಟುಹಬ್ಬ ಏರ್ಪಡಿಸಿ, ಬೃಹತ್ ಸೇಬಿನ ಹಾರ ಹಾಕಿ ಸಂಭ್ರಮಿಸಿದರು. ಜತೆಗೆ ಅವರೆಲ್ಲ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ನೋಟ್ ಬುಕ್ ಮತ್ತು ಬ್ಯಾಗ್ ಗಳನ್ನು ವಿತರಿಸಿದರು.
ಸ್ಯಾಂಕಿ ಉದ್ಯಾನದಲ್ಲಿ ಸಚಿವರು ಬೆಳಗಿನ ವಾಯುವಿಹಾರಿಗಳ ಜತೆ ಒಂದು ಗಂಟೆಗೂ ಹೆಚ್ಚು ಹೊತ್ತು ಕಳೆದು, ಶುಭಾಶಯಗಳನ್ನು ಸ್ವೀಕರಿಸಿದರು. ಸುಬ್ರಹ್ಮಣ್ಯ ನಗರದಲ್ಲಿ ಸಚಿವರ ಹುಟ್ಟುಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಸುಬ್ರಹ್ಮಣ್ಯ ನಗರ ಕ್ರಿಕೆಟ್ ಕ್ಲಬ್ ಏರ್ಪಡಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕಿ ಕಾವೇರಿ ಕೇದಾರನಾಥ್, ಸುರೇಶ್ ಗೌಡ, ಜೈಪಾಲ್ ಮುಂತಾದವರು ಭಾಗವಹಿಸಿದ್ದರು.
15 ದಿನಗಳಲ್ಲಿ ಡಾಮರೀಕರಣ: ಸುಬ್ರಹ್ಮಣ್ಯ ನಗರದಲ್ಲಿ ಮಾತನಾಡಿದ ಸಚಿವರು, ಇನ್ನು 15 ದಿನಗಳಲ್ಲಿ ಬಡಾವಣೆಯ ಎಲ್ಲ ರಸ್ತೆಗಳನ್ನೂ ಡಾಮರೀಕರಣ ಮಾಡಲಾಗುವುದು. ಜತೆಗೆ ಒಂದು ತಿಂಗಳಲ್ಲಿ ಬಡಾವಣೆಯಲ್ಲಿ ನಮ್ಮ ಕ್ಲಿನಿಕ್, ಡಿಜಿಟಲ್ ಕ್ಲಿನಿಕ್ ಮತ್ತು ವರ್ಚುಯಲ್ ಕ್ಲಿನಿಕ್ ಉದ್ಘಾಟಿಸಲಾಗುವುದು" ಎಂದರು.
ಕೇರಳದಲ್ಲಿ ವಿಶೇಷ ಪೂಜೆ: ಸಚಿವರ ಹುಟ್ಟುಹಬ್ಬದ ಪ್ರಯುಕ್ತ ಕೇರಳದ ತಿರುವನಂತಪುರದ ಅನಂತ ಪದ್ಮನಾಭ ಮತ್ತು ಗುರುವಾಯೂರಿನ ಕೃಷ್ಣ ದೇಗುಲ ಸೇರಿದಂತೆ ಅಲ್ಲಿನ 60 ದೇವಾಲಯಗಳಲ್ಲಿ ಚಲನಚಿತ್ರ ನಿರ್ದೇಶಕ ವಿಜೀಶ್ ವಿಶೇಷ ಪೂಜೆ ಏರ್ಪಡಿಸಿದ್ದರು.
ನಮ್ಮ ಮಲ್ಲೇಶ್ವರದ ಸನ್ನಿಧಿ ಹಾಗೂ ನಂದಿನಿ ಎಂಬ ಇಬ್ಬರು ಪುಟ್ಟ ಮಕ್ಕಳು ನೀಡಿರುವ ಜನ್ಮ ದಿನದ ಉಡುಗೊರೆ. ನಿಷ್ಕಲ್ಮಶ ಮನಸ್ಸುಗಳಿಗೆ ನನ್ನ ಪ್ರೀತಿ ಪೂರ್ವಕ ಧನ್ಯವಾದಗಳು. pic.twitter.com/8yedkoxJ1c
— Dr. Ashwathnarayan C. N. (@drashwathcn) February 2, 2023










