ಅಣಕು ನ್ಯಾಯಾಲಯದಲ್ಲಿ ಕಾನೂನಿನ ಪ್ರಶ್ನೆಗಳಿಗೆ ಆದ್ಯತೆ ನೀಡಿ: ಜಗದೀಶ್ ಎಸ್. ಹಾಲ ಶೆಟ್ಟಿ

ಉಡುಪಿ: ಅಣಕು ನ್ಯಾಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಯಾರಿ ಹಂತದಲ್ಲಿ ಹಾಗೂ ವಾದ ಮಂಡನೆಯ ಸಮಯದಲ್ಲಿ ಪ್ರಕರಣ ವಸ್ತುಸ್ಥಿತಿಗಿಂತ ಆ ಪ್ರಕರಣದಲ್ಲಿ ಅಡಕವಾಗಿರುವ ಕಾನೂನಿನ ಪ್ರಶ್ನೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರಾದ ಡಾ.ಜಗದೀಶ ಎಸ್ ಹಾಲಶೆಟ್ಟಿ ತಿಳಿಸಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಅಣುಕು ನ್ಯಾಯಾಲಯ ಮತ್ತು ವಕಾಲತ್ತು ಕೌಶಲ್ಯ ಎಂಬ ವಿಷಯದ ಮೇಲಿನ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾನೂನು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಕಾನೂನು ಮೂಲಗಳ ಬಳಕೆಯ ಬಗ್ಗೆ ಮಾಹಿತಿ ಇರಬೇಕು ಹಾಗೂ ಕಾನೂನುಗಳನ್ನು ವಸ್ತುಸ್ಥಿತಿಗೆ ತಕ್ಕ ಹಾಗೆ ಅನ್ವಯಿಸಿ ಅರ್ಥೈಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಘುನಾಥ್ ಕೆ.ಎಸ್. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಾನೂನು ವಿಭಾಗದ ಮುಖ್ಯಸ್ಥೆ ಸುರೇಖಾ ಕೆ. ಕಾರ್ಯಕ್ರಮ ಸಂಯೋಜಿಸಿದ್ದರು.
ಅಭಯ್ ಶ್ರೀಕುಮಾರ್ ಸ್ವಾಗತಿಸಿದರು. ಕ್ಲೆಮೆಂಟ್ ಆಲ್ವಿನ್ ವಂದಿಸಿದರು. ಅವಿನಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.