Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪತ್ರಕರ್ತ ಸಿದ್ದೀಕ್‌ ಕಪ್ಪನ್‌...

ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಬಿಡುಗಡೆಗೆ ಅವಿರತ ಶ್ರಮ ವಹಿಸಿದ್ದ ಕುಮಾರ್‌ ಸೌವೀರ್‌ ಯಾರು ಗೊತ್ತೇ?

3 Feb 2023 4:00 PM IST
share
ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಬಿಡುಗಡೆಗೆ ಅವಿರತ ಶ್ರಮ ವಹಿಸಿದ್ದ ಕುಮಾರ್‌ ಸೌವೀರ್‌ ಯಾರು ಗೊತ್ತೇ?

ಹೊಸದಿಲ್ಲಿ: ಕುಮಾರ್‌ ಸೌವೀರ್‌ ಮತ್ತು ಸಿದ್ದೀಕ್ ಕಪ್ಪನ್‌ ಅವರು ವಾಸವಿರುವ ಸ್ಥಳಗಳ ನಡುವೆ 2,000 ಕಿಮೀ ಅಂತರವಿದೆ. ಆದರೆ ಕೇರಳ ಮೂಲದ ಪತ್ರಕರ್ತ ಸಿದ್ದೀಖ್‌ ಕಪ್ಪನ್‌ ಅವರು ಗುರುವಾರ ಲಕ್ನೋ ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದಂತೆಯೇ ಅವರು ಮೊದಲು ನೋಡಲು ಬಯಸಿದ್ದು ಸೌವೀರ್‌ ಅವರನ್ನು.

ʻʻಇಬ್ಬರ ನಡುವೆ ಮಾತುಕತೆಯಿರಲಿಲ್ಲ, ದೀರ್ಘ ಆಲಿಂಗನ ಮಾತ್ರ," ಎಂದು ಸೌವೀರ್‌ ಹೇಳುತ್ತಾರೆ.

ಸೌವೀರ್‌ ಲಕ್ನೋ ಮೂಲದ ಪತ್ರಕರ್ತರಾಗಿದ್ದು ಕಪ್ಪನ್‌ ಅವರ ಬಿಡುಗಡೆಗೆ ಅಗತ್ಯವಾಗಿದ್ದ ಜಾಮೀನು ಬಾಂಡ್‌ ನೀಡಿದವರಾಗಿದ್ದಾರೆ. ತಮ್ಮ ಹೆಸರಿನಲ್ಲಿ ಲಕ್ನೋ ನಗರದ ಬಕ್ಷಿ ಕಾ ತಾಲಾಬ್‌ ಪ್ರದೇಶದಲ್ಲಿರುವ 9,000 ಚದರ ಅಡಿಯ ಕೃಷಿ ಭೂಮಿಯ ಮಾಲೀಕತ್ವದ ದಾಖಲೆಗಳನ್ನು ಬಾಂಡ್‌ ರೂಪದಲ್ಲಿ ಸೌವೀರ್‌ ನೀಡಿದ್ದಾರೆ.

ಸೌವೀರ್‌ ಅವರ ಈ ಕ್ರಮ ಮಾಧ್ಯಮ ಮತ್ತು ನಾಗರಿಕ ಸಮಾಜದ ಶ್ಲಾಘನೆಗೆ ಪಾತ್ರವಾಗಿದೆ. ಆದರೆ ತಮ್ಮ ಕಾರ್ಯವನ್ನು ಧೈರ್ಯದ ಕಾರ್ಯ ಎಂದು 63 ವರ್ಷದ ಸೌವೀರ್‌ ಹೇಳುವುದಿಲ್ಲ. "ನಾವು ಜವಾಬ್ದಾರಿಯಯುತ, ಭಾವನಾತ್ಮಕ ಮತ್ತು ಸೂಕ್ಷ್ಮ ಜೀವಿಗಳು, ನಮ್ಮ ಸಹ ನಾಗರಿಕರಿಗೆ ಅನುಕಂಪ ತೋರುವುದು, ಇನ್ನೊಬ್ಬರ ಕಣ್ಣೀರಿನ ಹಿಂದಿನ ನೋವು ಕಾಣುವುದು ಮತ್ತು ಕಣ್ಣೀರನ್ನು ತೊಡೆದು ಹಾಕುವುದು ನಮ್ಮ ಜೀವನ," ಎಂದು ಅವರು ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ ಒಂದರಲ್ಲಿ ಬರೆದಿದ್ದಾರೆ.

ಕಳೆದ 42 ವರ್ಷಗಳಿಂದ ಸೌವೀರ್‌ ಪತ್ರಕರ್ತರಾಗಿದ್ದಾರೆ. ಅವರ ತಂದೆ ಸಿಯಾರಾಂ ತ್ರಿಪಾಠಿ ಖ್ಯಾತ ಹಿಂದಿ ದಿನಪತ್ರಿಕೆಯೊಂದರ ಹಿರಿಯ ಸಂಪಾದಕೀಯ ಹುದ್ದೆಯಲ್ಲಿದ್ದವರಾಗಿದ್ದರು. "ನಾವು ಯಾವತ್ತೂ ನ್ಯಾಯದ ಬಗ್ಗೆ ಮಾತನಾಡುತ್ತಿದ್ದೆವು," ಎಂದು ಅವರು ಹೇಳುತ್ತಾರೆ. ತ್ರಿಪಾಠಿ ಅವರು ಸಿಪಿಐ ಸದಸ್ಯತ್ವ ಕಾರ್ಡ್‌ ಹೊಂದಿದವರಾಗಿದ್ದು  ಹಾಗೂ ಇಂಡಿಯನ್‌ ಫೆಡರೇಶನ್‌ ಆಫ್‌ ವರ್ಕಿಂಗ್‌ ಜರ್ನಲಿಸ್ಟ್ಸ್‌ ಇದರ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಚಿಕ್ಕಂದಿನಿಂದಲೇ ನಿರ್ಭೀತಿಯಿಂದಿರಬೇಕೆಂಬ ಅರಿವು ತಮಗೆ ಮೂಡಿಸಲಾಗಿತ್ತು ಎಂದು ಸೌವೀರ್‌ ಹೇಳುತ್ತಾರೆ.

ಕಪ್ಪನ್‌ ಅವರನ್ನು ಅಕ್ಟೋಬರ್‌ 2020 ರಲ್ಲಿ ಹತ್ರಾಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ವರದಿಗಾರಿಕೆಗೆ ತೆರಳುತ್ತಿದ್ದಾಗ  ಬಂಧಿಸಲಾಗಿತ್ತು. ಅವರ ವಿರುದ್ಧ  ಅಕ್ರಮ ಹಣ ವಹಿವಾಟು ಹಾಗೂ ಯುಎಪಿಎ ಪ್ರಕರಣಗಳನ್ನೂ ನಂತರ ದಾಖಲಿಸಲಾಗಿತ್ತು. ಇದೀಗ ನಿಷೇಧಿತ ಪಿಎಫ್‌ಐನಿಂದ ಅವರು ಹಣ ಪಡೆದಿದ್ದಾರೆಂದೂ ಆರೋಪಿಸಲಾಗಿತ್ತು.

ರಾಜ್ಯ ಸರ್ಕಾರ ಹೇಗೆ ಸ್ಪಂದಿಸಬಹುದೆಂಬ ಭಯದಿಂದ ರಾಜ್ಯದ ಹಲವು ವಕೀಲರು ಹಾಗೂ ಪತ್ರಕರ್ತರು ಜಾಮೀನು ಬಾಂಡ್‌ ನೀಡಲು ಮುಂದೆ ಬಂದಿರಲಿಲ್ಲ. ಆ ಸಂದರ್ಭ ಇಬ್ಬರು ಹಿರಿಯ ಪತ್ರಕರ್ತರು ಸೌವೀರ್‌ ಅವರಿಗೆ ಕರೆ ಮಾಡಿ ಸಹಾಯ ಮಾಡಲು ಕೋರಿದ್ದರು.

"ಎಷ್ಟೊಂದು ಭಯದ ವಾತಾವರಣವಿದೆಯೆಂದರೆ ಯಾವುದೇ ಮುಸ್ಲಿಂ ವ್ಯಕ್ತಿ ಕೂಡ ಅವರ ಸಹಾಯಕ್ಕೆ ಬರಲು ಸಿದ್ಧರಿರಲಿಲ್ಲ. ಆದರೆ ಈ ಕಾರ್ಯದ ಹಿಂದಿನ ನಿಜವಾದ ಉದ್ದೇಶ ನ್ಯಾಯ ದೊರಕಿಸಿಕೊಡುವುದು ಮತ್ತು ಪತ್ರಕರ್ತ ಸಮುದಾಯ ಇಂತಹ ಸಂದರ್ಭಗಳಲ್ಲಿ ಒಂದಾಗಿದೆ ಎಂದು ತೋರಿಸುವುದಾಗಿತ್ತು," ಎಂದು ಸೌವೀರ್‌ ಹೇಳುತ್ತಾರೆ.

ನಾಸ್ತಿಕರಾಗಿರುವ ಸೌವೀರ್‌ ಅವರು ಇದು ತಮ್ಮ ಧರ್ಮ ಎಂದು ನಂಬಿದ್ದರು. ಸೌವೀರ್‌ ಅವರು ಜನವರಿ 3 ರಂದು ದಾಖಲೆಗಳನ್ನು ಸಲ್ಲಿಸಿದ್ದರೆ ಐದು ದಿನಗಳ ನಂತರ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರಾಗುವಂತೆ ತಿಳಿಸಲಾಗಿತ್ತು. ಆಗ ಅವರಿಗೆ ಕೇಳಲಾದ ಪ್ರಶ್ನೆಗಳ್ಲಲೊಂದು "ನಿಮಗೆ ಸಿದ್ದೀಖ್‌ ಕಪ್ಪನ್‌ ಗೊತ್ತೇ?" ಎಂಬುದಾಗಿತ್ತು. ಅದಕ್ಕೆ ಅವರು. "ನನಗೆ ಗೊತ್ತು., ಪತ್ರಕರ್ತರಾಗಿ ನಾವು ಒಂದೇ ಧರ್ಮ ಹಂಚಿಕೊಂಡಿದ್ದೇವೆ," ಎಂಬ ಉತ್ತರ ನೀಡಿದ್ದರು.

ಆದರೆ ಇಬ್ಬರು  ಹೆಣ್ಣುಮಕ್ಕಳ ತಂದೆಯಾಗಿರುವ ಸೌವೀರ್‌ ಜನವರಿ ಮಧ್ಯಭಾಗದಲ್ಲಿ ಬ್ರೈನ್‌ ಸ್ಟ್ರೋಕ್‌ಗೆ ಒಳಗಾಗಿದ್ದರಲ್ಲದೆ ಪಕ್ಷವಾತ ಸಮಸ್ಯೆಯನ್ನೂ ಎದುರಿಸಿದ್ದರು. ಅವರು ಆಸ್ಪತ್ರೆಯಲ್ಲಿದ್ದಾಗ ಪೊಲೀಸರಿಂದ ಸತತ ಕರೆಗಳು ಬರುತ್ತಿದ್ದವು.

ದಾಖಲೆಗಳನ್ನು ಕೇಳುತ್ತಿದ್ದರು. ತಮ್ಮ ಸ್ಥಿತಿ ವಿವರಿಸಿ ತಮ್ಮ ಪಾಸ್‌ಪೋರ್ಟ್‌, ಆಧಾರ್‌, ಪ್ರೆಸ್‌ ಕಾರ್ಡ್‌ ನೀಡುವುದಾಗಿ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಖುದ್ದಾಗಿ ಹಾಜರಾಗಬೇಕೆಂದು ಸೂಚಿಸಲಾಯಿತು. ಅಂತೂ ಫೆಬ್ರವರಿ 1 ರಂದು ಸೌವೀರ್‌ ನ್ಯಾಯಾಧೀಶರೆದುರು ಹಾಜರಾದಾಗ ಅವರು ಜಾಮೀನು ಬಾಂಡ್‌ ಆಗಿ ನೀಡಿದ್ದ ಜಮೀನನ್ನು ಯಾರಿಂದ ಖರೀದಿಸಿದ್ದರೆಂಬ ಪ್ರಶ್ನೆಯನ್ನು ಕೇಳಲಾಗಿತ್ತು.

"ಒಳ್ಳೆಯ ಕೆಲಸ ಮಾಡುವಾಗ ಜನರನ್ನು ಈ ರೀತಿ ಕಿರುಕುಳ ನೀಡಬಾರದು," ಎಂದು ಅಪ್ರಸ್ತುತ ಪ್ರಶ್ನೆ ಬಗ್ಗೆ ಸೌವೀರ್‌ ಪ್ರತಿಕ್ರಿಯಿಸಿದ್ದಾರೆ.

ಕಪ್ಪನ್‌ ಜೈಲಿನಿಂದ ಬಿಡುಗಡೆಯಾದಾಗ ಸೌವೀರ್‌ ಅವರಿಗಾಗಿ ಕಾಯುತ್ತಿದ್ದರು. ಪದಗಳೇ ಬೇಕಿರಲಿಲ್ಲ. ಇಬ್ಬರು ಮೌನವಾಗಿ ಪರಸ್ಪರ ಆಲಂಗಿಸಿದ್ದರು.

share
Next Story
X