Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೋವಿಡ್ ಕರಿನೆರಳು: ಮಕ್ಕಳ ಓದುವ...

ಕೋವಿಡ್ ಕರಿನೆರಳು: ಮಕ್ಕಳ ಓದುವ ಸಾಮರ್ಥ್ಯ ತೀವ್ರ ಕುಸಿತ

5 Feb 2023 12:05 AM IST
share
ಕೋವಿಡ್ ಕರಿನೆರಳು: ಮಕ್ಕಳ ಓದುವ ಸಾಮರ್ಥ್ಯ ತೀವ್ರ ಕುಸಿತ

ಕೆ.ಸಿ. ದಯಾಕರ್

ವರ್ಷಗಳ ಕಾಲ ದೇಶವನ್ನೇ ಕಂಗೆಡಿಸಿ ಹಲವಾರು ಜೀವಗಳನ್ನು ಬಲಿಪಡೆದ ಕೊರೋನ, ಆರ್ಥಿಕತೆಯ ಕುಸಿತಕ್ಕೆ ಕಾರಣವಾದ ಕೊರೋನ, ಜನಸಾಮಾನ್ಯರ ಬದುಕನ್ನು ದೊಡ್ಡಮಟ್ಟದಲ್ಲಿ ಘಾಸಿಗೊಳಿಸಿದ ಕೊರೋನ, ಶಿಕ್ಷಣದ ಮೇಲೆಯೂ ಅಷ್ಟೇ ದೊಡ್ಡ ಪ್ರತಿಕೂಲ ಪರಿಣಾಮ ಉಂಟುಮಾಡಿದೆ. ಈಗ ಕೊರೋನ ತೀವ್ರತೆ ಕಮ್ಮಿಯಾಗಿದ್ದರೂ, ಮೂರು ವರ್ಷಗಳ ಅವಧಿಯಲ್ಲಿ ಅದರಿಂದಾದ ಕಲಿಕೆಯಲ್ಲಿನ ಕುಸಿತ ಇನ್ನೂ ಬಾಧಿಸುತ್ತಲೇ ಇದೆ. ಕಲಿಕೆಯಲ್ಲಿ ಬಹುಪಾಲು ಮಕ್ಕಳು ಹಿಂದೆ ಬಿದ್ದಿದ್ದಾರೆ.

ಹೊಸದಾಗಿ ಬಿಡುಗಡೆಯಾಗಿರುವ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ಅಖಉ್ಕ) ಹೇಳುತ್ತಿರುವ ಪ್ರಕಾರ, ದೇಶಾದ್ಯಂತ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿನ 5ರಿಂದ 16 ವರ್ಷ ವಯಸ್ಸಿನ ಮಕ್ಕಳ ಓದುವ ಸಾಮರ್ಥ್ಯ ತೀವ್ರವಾಗಿ ಕುಸಿದಿದೆ. ಯಾವ ಮಟ್ಟಿಗೆಂದರೆ, ಗಣಿತದ ಬೇಸಿಕ್ ಲೆಕ್ಕಗಳನ್ನು ಮಾಡಬಲ್ಲ ಸಾಮರ್ಥ್ಯದಲ್ಲಿನ ಕುಸಿತಕ್ಕಿಂತ ಪಠ್ಯವನ್ನು ಓದುವ ಸಾಮರ್ಥ್ಯದಲ್ಲಿನ ಕುಸಿತ ಜಾಸ್ತಿಯಿದೆ.

ರಾಷ್ಟ್ರವ್ಯಾಪಿ ನಡೆದ ಸಮೀಕ್ಷೆಯಲ್ಲಿ 616 ಜಿಲ್ಲೆಗಳ 19,060 ಹಳ್ಳಿಗಳನ್ನು ಪರಿಗಣಿಸಲಾಗಿತ್ತು. 3,74,544 ಕುಟುಂಬಗಳಲ್ಲಿನ 3ರಿಂದ 16 ವರ್ಷ ವಯಸ್ಸಿನ 6,99,597 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ವರದಿಯ ಪ್ರಕಾರ, ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿನ 2ನೇ ತರಗತಿ ಪಠ್ಯ ಓದಬಲ್ಲ 3ನೇ ತರಗತಿ ವಿದ್ಯಾರ್ಥಿಗಳ ಪ್ರಮಾಣ 2018ರಲ್ಲಿ ಶೇ. 27.3 ಇದ್ದದ್ದು 2022ರಲ್ಲಿ ಶೇ. 20.5ಕ್ಕೆ ಕುಸಿದಿದೆ. ಪ್ರತೀ ರಾಜ್ಯದಲ್ಲೂ ಈ ಕುಸಿತ ಕಾಣುತ್ತಿದೆ ಮತ್ತು ಈ ಕುಸಿತ 2018ರಲ್ಲಿ ಇದ್ದ ಪ್ರಮಾಣದ ಶೇ. 10ಕ್ಕಿಂತಲೂ ಹೆಚ್ಚು.
ಕೇರಳದಲ್ಲಿ 2018ರಲ್ಲಿ ಶೇ. 52.1 ಇದ್ದದ್ದು 2022ರಲ್ಲಿ ಶೇ. 38.7, ಹಿಮಾಚಲ ಪ್ರದೇಶದಲ್ಲಿ ಶೇ. 47.7ರಿಂದ ಶೇ. 28.4ಕ್ಕೆ ಇಳಿಕೆ, ಹರ್ಯಾಣದಲ್ಲಿ ಶೇ. 46.4ರಿಂದ ಶೇ. 31.5ಕ್ಕೆ ಕುಸಿತ. ಅತಿ ಹೆಚ್ಚು ಕುಸಿತ ಕಾಣಿಸುತ್ತಿರುವುದು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಎಂಬುದನ್ನೂ ವರದಿ ಹೇಳಿದೆ. ಆಂಧ್ರಪ್ರದೇಶದಲ್ಲಿ ಶೇ. 22.6ರಿಂದ ಶೇ. 10.3ಕ್ಕೆ ಕುಸಿದಿದ್ದರೆ, ತೆಲಂಗಾಣದಲ್ಲಿ ಶೇ. 18.1ರಿಂದ ಶೇ. 5.2ಕ್ಕೆ ಇಳಿದಿದೆ.
5ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕನಿಷ್ಠ 2ನೇ ತರಗತಿಯ ಪಠ್ಯ ಓದಬಲ್ಲ ಮಕ್ಕಳ ಪ್ರಮಾಣ 2018ರಲ್ಲಿ ಶೇ. 50.5 ಇದ್ದದ್ದು 2022ರಲ್ಲಿ ಶೇ. 42.8ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.
ಬಿಹಾರ, ಒಡಿಶಾ, ಮಣಿಪುರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ಸ್ಥಿರತೆ ಅಥವಾ ಸ್ವಲ್ಪಸುಧಾರಿಸುವಿಕೆ ಕಂಡಿದೆ. ಆದರೆ, ಶೇ. 15 ಅಥವಾ ಅದಕ್ಕಿಂತ ಹೆಚ್ಚಿನ ಕುಸಿತ ತೋರಿಸಿರುವ ರಾಜ್ಯಗಳೆಂದರೆ ಆಂಧ್ರ ಪ್ರದೇಶ (2018ರಲ್ಲಿ ಶೇ. 59.7 ಇದ್ದದ್ದು 2022ರಲ್ಲಿ ಶೇ. 36.3ಕ್ಕೆ ಕುಸಿತ), ಗುಜರಾತ್ (ಶೇ. 53.8ರಿಂದ ಶೇ. 34.2ಕ್ಕೆ ಕುಸಿತ) ಮತ್ತು ಹಿಮಾಚಲ ಪ್ರದೇಶ (ಸೇ. 76.9ರಿಂದ ಶೇ. 61.3ಕ್ಕೆ ಕುಸಿತ). ಇನ್ನು ಉತ್ತರಾಖಂಡ, ರಾಜಸ್ಥಾನ, ಹರ್ಯಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಶೇ. 10ಕ್ಕಿಂತ ಹೆಚ್ಚು ಕುಸಿತ ಕಂಡುಬಂದಿದೆ.

3 ಮತ್ತು 5ನೇ ತರಗತಿಗಳ ವಿದ್ಯಾರ್ಥಿಗಳಿಗೆ ಹೋಲಿಸಿದರೆ 8ನೇ ತರಗತಿಯ ವಿದ್ಯಾರ್ಥಿಗಳ ಓದುವ ಸಾಮರ್ಥ್ಯದಲ್ಲಿನ ಕುಸಿತ ಕೊಂಚ ಕಡಿಮೆ. ರಾಷ್ಟ್ರಮಟ್ಟದಲ್ಲಿ ಸರಕಾರಿ ಅಥವಾ ಖಾಸಗಿ ಶಾಲೆಗಳಲ್ಲಿನ 8ನೇ ತರಗತಿಯ ಶೇ. 69.6ರಷ್ಟು ಮಕ್ಕಳು ಬೇಸಿಕ್ ಪಠ್ಯಗಳನ್ನು ಓದಬಲ್ಲ ಸಾಮರ್ಥ್ಯ ಹೊಂದಿರುವುದು 2022ರ ಅಂಕಿಅಂಶಗಳಿಂದ ಗೊತ್ತಾಗಿದೆ. 2018ರಲ್ಲಿ ಈ ಪ್ರಮಾಣ ಶೇ. 73ರಷ್ಟಿತ್ತು. ಇನ್ನು ದೇಶಾದ್ಯಂತದ ವಿದ್ಯಾರ್ಥಿಗಳಲ್ಲಿ ಅಂಕಗಣಿತ ಕಲಿಕೆ ಸಾಮರ್ಥ್ಯ ಕೂಡ 2018ಕ್ಕಿಂತ ಕುಸಿದಿದೆಯಾದರೂ, ಓದುವ ಸಾಮರ್ಥ್ಯದಲ್ಲಿನ ಕುಸಿತಕ್ಕೆ ಹೋಲಿಸಿದರೆ ಇದು ಕಡಿಮೆ. ಉದಾಹರಣೆಗೆ, 3ನೇ ತರಗತಿಯಲ್ಲಿ ಕನಿಷ್ಠ ವ್ಯವಕಲನದಂತಹ ಲೆಕ್ಕವನ್ನಾದರೂ ಮಾಡಬಲ್ಲ ಮಕ್ಕಳ ಪ್ರಮಾಣ 2018ರಲ್ಲಿ ಶೇ. 28.2 ಇದ್ದದ್ದು 2022ರಲ್ಲಿ ಶೇ. 25.9ಕ್ಕೆ ಇಳಿದಿದೆ. ಹಾಗೆಯೇ ಭಾಗಾಕಾರ ಲೆಕ್ಕ ಮಾಡಬಲ್ಲ 5ನೇ ತರಗತಿಯ ಮಕ್ಕಳ ಸಂಖ್ಯೆ 2018ರಲ್ಲಿ ಶೇ. 27.9 ಇದ್ದದ್ದು 2022ರಲ್ಲಿ ಶೇ. 25.6ಕ್ಕೆ ಕುಸಿದಿದೆ.


ರಾಜ್ಯದಲ್ಲಿಯೂ ಸ್ಥಿತಿ ಬೇರೆಯಿಲ್ಲ

ಕರ್ನಾಟಕ ಕೂಡ ಇಂತಹ ಶೋಚನೀಯ ಸ್ಥಿತಿಯಿಂದ ಹೊರಗಿಲ್ಲ. ರಾಜ್ಯದಲ್ಲಿಯೂ ಸರಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ 3 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಲ್ಲಿನ ಕಲಿಕೆಯ ಮಟ್ಟ ಕೊರೋನ ನಂತರ ಕುಸಿದಿರುವುದನ್ನು ವರದಿ ಹೇಳಿದೆ. ಓದಿನ ಸಾಮರ್ಥ್ಯವನ್ನು ಗಮನಿಸಿದರೆ 3ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯ ಮಟ್ಟ 2018ರಲ್ಲಿ ಶೇ. 19.3 ಇದ್ದದ್ದು 2022ರ ಶೇ. 8.6ಕ್ಕೆ ಇಳಿದಿದೆ. ಹಾಗೆಯೇ, 5ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯ ಮಟ್ಟ 2018ರಲ್ಲಿ ಶೇ. 46.1 ಇದ್ದದ್ದು 2022ರಲ್ಲಿ ಶೇ. 30.2ಕ್ಕೆ ಕುಸಿದಿದೆ.

ರಾಜ್ಯದ 30 ಜಿಲ್ಲೆಗಳಲ್ಲಿನ ಒಟ್ಟು 900 ಹಳ್ಳಿಗಳಲ್ಲಿ 17,814 ಕುಟುಂಬಗಳಲ್ಲಿನ 3ರಿಂದ 16 ವರ್ಷದೊಳಗಿನ 31,854 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಸರಕಾರಿ ಅಥವಾ ಖಾಸಗಿ ಶಾಲೆಗಳಲ್ಲಿನ, ಕನಿಷ್ಠ 2ನೇ ತರಗತಿಯ ಪಠ್ಯ ಓದಬಲ್ಲ 8ನೇ ತರಗತಿಯ ಮಕ್ಕಳ ಪ್ರಮಾಣ 2018ರಲ್ಲಿ ಶೇ. 70.5 ಇದ್ದದ್ದು 2022ರಲ್ಲಿ ಶೇ. 59.9ಕ್ಕೆ ಕುಸಿದಿರುವುದು ಕಂಡುಬಂದಿದೆ. ಕನಿಷ್ಠ ವ್ಯವಕಲನ ಲೆಕ್ಕವನ್ನಾದರೂ ಮಾಡಬಲ್ಲ 3ನೇ ತರಗತಿಯ ಮಕ್ಕಳ ಸಂಖ್ಯೆ 2018ರಲ್ಲಿ ಶೇ. 26.4 ಇದ್ದದ್ದು 2022ರಲ್ಲಿ ಶೇ. 22.2ಕ್ಕೆ ಇಳಿದಿದೆ. ಭಾಗಾಕಾರ ಮಾಡಬಲ್ಲ 5ನೇ ತರಗತಿಯ ಮಕ್ಕಳ ಪ್ರಮಾಣ 2018ರಲ್ಲಿ ಶೇ. 20.5 ಇದ್ದದ್ದು 2022ರಲ್ಲಿ ಶೇ. 13.3ಕ್ಕೆ ಕುಸಿದಿದೆ. ಭಾಗಾಕಾರ ಮಾಡಬಲ್ಲ 8ನೇ ತರಗತಿಯ ಮಕ್ಕಳ ಪ್ರಮಾಣ 2018ರಲ್ಲಿ ಶೇ. 39 ಇದ್ದದ್ದು 2022ರಲ್ಲಿ ಶೇ. 36ಕ್ಕೆ ಇಳಿದಿದೆ. ಗ್ರಾಮೀಣ ಕರ್ನಾಟಕದಲ್ಲಿ ಈ ಸ್ಥಿತಿ ನಿರಾಶಾದಾಯಕ ಎಂಬುದನ್ನೂ ವರದಿ ತೋರಿಸಿದೆ.

ದಾಖಲಾತಿ ಗಮನಾರ್ಹ ಏರಿಕೆ

ಕಲಿಕಾ ಸಾಮರ್ಥ್ಯದಲ್ಲಿ ಕುಸಿತ ಕಂಡಿದ್ದರೂ, ಶಾಲೆ ಗಳಲ್ಲಿ ದಾಖಲಾತಿ ಹೆಚ್ಚಳವನ್ನು ವರದಿ ಎತ್ತಿ ತೋರಿಸಿದೆ. ಸರಕಾರಿ ಶಾಲೆಗಳಲ್ಲಿ ದಾಖಲಾದ 6ರಿಂದ 14 ವರ್ಷ ವಯಸ್ಸಿನ ಮಕ್ಕಳ ಪ್ರಮಾಣ 2018ರಲ್ಲಿ ಶೇ. 65.6 ಇದ್ದದ್ದು 2022ರಲ್ಲಿ ಶೇ. 72.9ಕ್ಕೆ ಏರಿದೆ. ಸರಕಾರಿ ಶಾಲಾ ದಾಖಲಾತಿಯಲ್ಲಿನ ಈ ಏರಿಕೆ ದೇಶದ ಪ್ರತಿಯೊಂದು ರಾಜ್ಯದಲ್ಲೂ ಕಂಡಿರುವುದಾಗಿ ವರದಿ ಹೇಳಿದೆ.

ಇನ್ನೊಂದು ಮುಖ್ಯ ವಿಚಾರ, ಶಾಲೆಗಳಲ್ಲಿ ಬಾಲಕಿಯರ ದಾಖಲಾತಿಯಲ್ಲಿ ಹೆಚ್ಚಳವಾಗಿರುವುದು. ದೇಶಾದ್ಯಂತ ಶಾಲೆಯಿಂದ ಹೊರಗುಳಿದ 11ರಿಂದ 14 ವರ್ಷ ವಯಸ್ಸಿನ ಬಾಲಕಿಯರ ಸಂಖ್ಯೆ 2022ರಲ್ಲಿ ಶೇ. 2ರಷ್ಟಿದೆ. 2018ರಲ್ಲಿದ್ದ ಶೇ. 4.1ರ ಪ್ರಮಾಣಕ್ಕೆ ಹೋಲಿಸಿದರೆ ಶಾಲೆಗೆ ಸೇರಿದ ಬಾಲಕಿಯರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಮಾತ್ರ ಶಾಲೆಯಿಂದ ಹೊರಗಿರುವ ಬಾಲಕಿಯರ ಸಂಖ್ಯೆ 2022ರಲ್ಲಿ ಶೇ.4ರಷ್ಟಿದೆ.

ಇನ್ನು ಶಾಲೆಗೆ ಸೇರುತ್ತಿರುವ 15ರಿಂದ 16ರ ಬಾಲಕಿಯರ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ. 2008ರಲ್ಲಿ ದೇಶಾದ್ಯಂತ ಈ ವಯೋಮಾನದ ಶೇ. 20ಕ್ಕಿಂತ ಹೆಚ್ಚು ಹುಡುಗಿಯರು ಶಾಲೆಗೆ ದಾಖಲಾಗಿರಲಿಲ್ಲ. ಹತ್ತು ವರ್ಷಗಳ ನಂತರ, 2018ರಲ್ಲಿ ಅದು ಶೇ. 13.5ಕ್ಕೆ ಇಳಿಯಿತು. 2022ರಲ್ಲಿ ಶೇ. 7.9ಕ್ಕೆ ಇಳಿದಿದೆ. ಅಂದರೆ ಈ 14 ವರ್ಷಗಳಲ್ಲಿ ಶಾಲೆಗೆ ಸೇರುತ್ತಿ ರುವ 15-16ರ ಬಾಲಕಿಯರ ಪ್ರಮಾಣ ಸುಮಾರು ಶೇ.12ರಷ್ಟು ಹೆಚ್ಚಿದೆ. ಆದರೆ ಈ ವಯಸ್ಸಿನ ಶೇ. 10ಕ್ಕಿಂತ ಹೆಚ್ಚು ಬಾಲಕಿಯರು ಶಾಲೆಯಿಂದ ಹೊರಗಿರುವ ಮೂರು ರಾಜ್ಯಗಳೆಂದರೆ, ಮಧ್ಯಪ್ರದೇಶ (ಶೇ. 17), ಉತ್ತರ ಪ್ರದೇಶ (ಶೇ. 15) ಮತ್ತು ಛತ್ತೀಸ್‌ಗಡ (ಶೇ. 11.2).
ಖಾಸಗಿ ಟ್ಯೂಷನ್ ತೆಗೆದುಕೊಳ್ಳುತ್ತಿರುವ 1ರಿಂದ 5ನೇ ತರಗತಿಯ ಮಕ್ಕಳ ಸಂಖ್ಯೆಯಲ್ಲಿಯೂ ಏರಿಕೆಯಾಗಿರುವು ದನ್ನು ವರದಿ ಗುರುತಿಸಿದೆ. ಅದರ ಪ್ರಕಾರ, 2018ರಲ್ಲಿ ಶೇ. 26.4 ಇದ್ದ ಈ ಪ್ರಮಾಣ 2022ರಲ್ಲಿ ಶೇ. 30.5ಕ್ಕೆ ಏರಿದೆ.
ಕರ್ನಾಟಕದಲ್ಲಿ ಕೋವಿಡ್ ಪರಿಣಾಮವಾಗಿ ಶಾಲೆಗಳು ಮುಚ್ಚಿದ್ದರ ಹೊರತಾಗಿಯೂ ದಾಖಲಾತಿ ಪ್ರಮಾಣ 2018ರಲ್ಲಿ ಶೇ. 99.3 ಇದ್ದದ್ದು 2022ರಲ್ಲಿ ಶೇ. 99.8ಕ್ಕೆ ಏರಿಕೆಯಾಗಿದೆ. ಸರಕಾರಿ ಶಾಲೆಗಳಲ್ಲಿ 2018ರಲ್ಲಿದ್ದ ಶೇ 69.9ರ ದಾಖಲಾತಿ ಪ್ರಮಾಣ 2022ರಲ್ಲಿ ಶೇ. 72.6ಕ್ಕೆ ಏರಿದೆ.

share
Next Story
X