ಕಿನ್ಯ: ಗೋಲ್ಡನ್ ಹೆಲ್ತ್ ಫೌಂಡೇಶನ್ ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಉಳ್ಳಾಲ, ಫೆ.5: ಕಿನ್ಯದ ಗೋಲ್ಡನ್ ಹೆಲ್ತ್ ಫೌಂಡೇಶನ್ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವು ರವಿವಾರ ಕಿನ್ಯದ ಅಲ್ ಮದ್ರಸತುಲ್ ಕುತುಬಿಯ್ಯಾ ಸಭಾಂಗಣದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಇಕ್ಬಾಲ್ ಕಿನ್ಯ, ಇಂತಹ ಶಿಬಿರಗಳು ಆರೋಗ್ಯ ದೃಷ್ಟಿಯಿಂದ ಬಹಳಷ್ಟು ಅಗತ್ಯವಿದೆ ಎಂದರು
ಗೋಲ್ಡನ್ ಹೆಲ್ತ್ ಫೌಂಡೇಶನ್ ಅಧ್ಯಕ್ಷ ಮೂಸಾ ಅಬ್ಬಾಸ್ ಕುರಿಯಕ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಾದಿತ್ವೈಬಾ ಕೋಶಾಧಿಕಾರಿ ಅಬೂಸಾಲಿ ಕುರಿಯಕಾರ್, ಕಿನ್ಯ ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಖಾದರ್, ಕೋಶಾಧಿಕಾರಿ ಸಾದುಕುಂಞಿ ಕಿನ್ಯ, ಕಿನ್ಯ ಗ್ರಾಪಂ ಸದಸ್ಯ ಅಬೂ ಸಾಲಿ ಕಿನ್ಯ, ಫಾರೂಕ್ ಕಿನ್ಯ, ಗೋಲ್ಡನ್ ಹೆಲ್ತ್ ಫೌಂಡೇಶನ್ ಉಪಾಧ್ಯಕ್ಷ ಮೊಯ್ದಿನ್ ಕುಂಞಿ ಅಬ್ಬು, ಕೋಶಾಧಿಕಾರಿ ಅಬೂಬಕರ್, ಕುತುಬಿ ನಗರ ಅಧ್ಯಕ್ಷ ಮುಹಮ್ಮದ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.
ಗೋಲ್ಡನ್ ಹೆಲ್ತ್ ಫೌಂಡೇಶನ್ ಕಾರ್ಯ ದರ್ಶಿ ಸಮದ್ ಕಿನ್ಯ ಸ್ವಾಗತಿಸಿದರು. ಸದಸ್ಯ ಹಮೀದ್ ಕಿನ್ಯ ಕಾರ್ಯಕ್ರಮ ನಿರೂಪಿಸಿದರು.