ಮಂಗಳೂರು | ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿಯ ಕೊಲೆ ಪ್ರಕರಣ; ಓರ್ವ ವಶಕ್ಕೆ

ಮಂಗಳೂರು, ಫೆ.5: ನಗರದ ಬಲ್ಮಠ-ಹಂಪನಕಟ್ಟೆ ರಸ್ತೆಯಲ್ಲಿರುವ ಮಂಗಳೂರು ಜ್ಯುವೆಲ್ಲರ್ಸ್‌ನ ಸೇಲ್ಸ್‌ಮ್ಯಾನ್ ರಾಘವೇಂದ್ರ ಆಚಾರ್ಯರನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಜುವೆಲ್ಲರಿಯಲ್ಲಿ ರಾಘವೇಂದ್ರ ಆಚಾರ್ಯರು ಏಕಾಂಗಿಯಾಗಿದ್ದಾಗ ಆರೋಪಿಯು ಕೊಲೆಗೈದು ರಿಕ್ಷಾದಲ್ಲಿ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಆ ರಿಕ್ಷಾದ ನಂಬರ್ ಆಧರಿಸಿ ಪೊಲೀಸರು ರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
Next Story