Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾಂಗ್ರೆಸ್-ಜೆಡಿಎಸ್ ಪೈಪೋಟಿಯ ಮಧ್ಯೆ...

ಕಾಂಗ್ರೆಸ್-ಜೆಡಿಎಸ್ ಪೈಪೋಟಿಯ ಮಧ್ಯೆ ಲಾಭವಾಗುವುದೇ ಬಿಜೆಪಿಗೆ?

6 Feb 2023 1:06 PM IST
share
ಕಾಂಗ್ರೆಸ್-ಜೆಡಿಎಸ್ ಪೈಪೋಟಿಯ ಮಧ್ಯೆ ಲಾಭವಾಗುವುದೇ ಬಿಜೆಪಿಗೆ?

ಆರ್.ವಿ.ದೇಶಪಾಂಡೆ

ಆರ್. ವಿ. ದೇಶಪಾಂಡೆ ಕಾಂಗ್ರೆಸ್‌ನ ಹಿರಿಯ ಮತ್ತು ಅತ್ಯಂತ ಪ್ರಭಾವಿ ನಾಯಕ. ಮೂಲತಃ ಜನತಾ ಪರಿವಾರದವರು. 1999ರಲ್ಲಿ ಕಾಂಗ್ರೆಸ್ ಸೇರಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯನ್ನು ಹಲವು ವರ್ಷ ನಿರ್ವಹಿಸಿದ್ದ ಹೆಗ್ಗಳಿಕೆ. ಈಗ ಶಾಸಕರಾಗಿರುವ ಹಳಿಯಾಳ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಹಿಡಿತ ಸಾಧಿಸಿದ್ದಾರೆ.

ಗೆಲ್ಲುವ ಎಲ್ಲ ಸೂತ್ರ ಬಲ್ಲ ದೇಶಪಾಂಡೆಗೆ ಈ ಬಾರಿ ಸ್ನೇಹಿತನೇ ಎದುರಾಳಿಯೆ? ಅಖಾಡದವರೆಗೂ ಬಂದಿದೆಯೆ ಇಬ್ಬರ ಹಲವು ವರ್ಷಗಳ ಮುಸುಕಿನ ಗುದ್ದಾಟ? ಜೆಡಿಎಸ್ ಎದುರು ಕಂಡಿದ್ದ ಸೋಲು ಮರುಕಳಿಸೀತೆ ಪ್ರಬಲ ನಾಯಕನ ಪಾಲಿಗೆ? ಹಳಿಯಾಳ ಕ್ಷೇತ್ರದಲ್ಲಿ ಇವರಿಬ್ಬರ ಪೈಪೋಟಿಯ ಲಾಭ ಪಡೆಯಲಿದೆಯೆ ಬಿಜೆಪಿ?

ಹಳಿಯಾಳ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ. ರಾಜಕೀಯವಾಗಿ ತನ್ನದೇ ಆದ ಮಹತ್ವ ಪಡೆದಿದೆ. ಹಳಿಯಾಳದಲ್ಲಿ ಒಂದೆಡೆ ಮಲೆನಾಡು, ಇನ್ನೊಂದೆಡೆ ಬಯಲುಸೀಮೆ. ಕೃಷಿಯೇ ಪ್ರಧಾನ. ಅರಣ್ಯಭೂಮಿಯ ಒಡೆತನ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯಂತಹ ಮಹತ್ವದ ಕೆಲಸಗಳು ಕಾರ್ಯರೂಪಕ್ಕೆ ಬರದೆ ಸ್ಥಳೀಯ ಮುಖಂಡರ ವಿರುದ್ಧ ಅಸಮಾಧಾನ ಮನೆ ಮಾಡಿದೆ.

ಹಳಿಯಾಳ ಕ್ಷೇತ್ರದಲ್ಲಿರುವುದು ಮರಾಠರ ಪ್ರಾಬಲ್ಯ ನಂತರ ಮುಸ್ಲಿಮರು, ಕುಣಬಿಗಳು ಬರುತ್ತಾರೆ. ಬ್ರಾಹ್ಮಣರು ಕಡಿಮೆ. ಆದರೆ ಗೆಲ್ಲುವುದು ಮಾತ್ರ ಅವರೇ. ಹಿಂದುಳಿದ ಅಭ್ಯರ್ಥಿಗೆ ಶಾಸಕನಾಗುವ ಅವಕಾಶ ಸಿಕ್ಕಿಲ್ಲ. ಶಿರಸಿ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ, ಹಳಿಯಾಳ 1967ರಲ್ಲಿ ಬೇರ್ಪಟ್ಟಿತು. 1983ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದ ದೇಶಪಾಂಡೆಯವರು, 1989 ಮತ್ತು 1994ರಲ್ಲಿ ಜನತಾದಳದಿಂದ ಮತ್ತೆ ಸ್ಪರ್ಧಿಸಿ ಗೆದ್ದಿದ್ದರು. 1999ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಚುನಾವಣೆಗೆ ಇಳಿದ ದೇಶಪಾಂಡೆಯವರು 2004ರಲ್ಲಿ, 2013ರಲ್ಲಿ ಮತ್ತು 2018ರಲ್ಲಿ ಜಯಗಳಿಸುತ್ತಾ ಬಂದರು. 2008ರಲ್ಲಿ ಜೆಡಿಎಸ್ ಅಭ್ಯರ್ಥಿ ಸುನೀಲ್ ವಿರುದ್ಧ ಸೋಲು ಅನುಭವಿಸಿದ್ದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದಂತೆ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದ ದೇಶಪಾಂಡೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾ ಗಲೆಲ್ಲಾ ಸಚಿವರಾಗುತ್ತಾ ಬಂದಿದ್ದಾರೆ. ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಸಣ್ಣ ಕೈಗಾರಿಕೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷಿ, ತೋಟಗಾರಿಕೆ, ಕಂದಾಯ, ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಸಚಿವ ಸ್ಥಾನ ಅಲಂಕರಿಸಿದ್ದಾರೆ. 10 ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ.

ಸುದೀರ್ಘ ಕಾಲದ ಅನುಭವ, ಹಳಿಯಾಳದ ಉದ್ದಗಲವನ್ನೂ ಅರಿತಿರುವ ದೇಶಪಾಂಡೆಯವರಿಗೆ ಕ್ಷೇತ್ರವನ್ನು ಗೆಲ್ಲುವ ಸೂತ್ರ ಚೆನ್ನಾಗಿಯೇ ಗೊತ್ತು ಎನ್ನುತ್ತಾರೆ ಸ್ಥಳೀಯರು. ವಿರೋಧಿಗಳು ಅವರ ವಿರುದ್ಧ ಏನೇ ಆರೋಪ ಮಾಡಲಿ, ಅಪಪ್ರಚಾರ ಮಾಡಲಿ, ಅವರ ಲೆಕ್ಕಾಚಾರ ಬುಡ ಮೇಲು ಮಾಡಬಲ್ಲರು ಎಂದೇ ಕಾಂಗ್ರೆಸ್‌ನ ಸ್ಥಳೀಯ ಮುಖಂಡರ ನಂಬಿಕೆ. ನಾಲ್ಕೂ ದಶಕಗಳು ಮೀರಿ ಹಳಿಯಾಳ ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿರುವುದು ಇದಕ್ಕೆ ಸಾಕ್ಷಿ ಎಂದು ಬೇರೆ ಹೇಳಬೇಕಿಲ್ಲ.

ದೇಶಪಾಂಡೆಯವರ ದೆಸೆಯೊ? ಮತದಾರರ ಬೆಂಬಲವೊ?

ದೇಶಪಾಂಡೆಯವರು ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಲೋಪವೆಸಗಿಲ್ಲ ಎಂಬ ಮಾತಿದೆ. ಕಳೆದ ವರ್ಷ ಅತ್ಯುತ್ತಮ ಶಾಸಕ ಪುರಸ್ಕಾರಕ್ಕೂ ಪಾತ್ರರಾಗಿದ್ದು ಅವರ ಕಾರ್ಯನಿಷ್ಠೆಗೆ ಒಂದು ನಿದೆರ್ಶನ ಎಂದೇ ಹೇಳಲಾಗುತ್ತದೆ. ಇಷ್ಟು ದೀರ್ಘ ಕಾಲ ತಮ್ಮ ಕ್ಷೇತ್ರದಲ್ಲಿ ವರ್ಚಸ್ಸು, ಮತದಾರರ ವಿಶ್ವಾಸ ಉಳಿಸಿಕೊಳ್ಳುವುದು ಬರಿಯ ಮಾತಿನಿಂದ ಸಾಧ್ಯವಿಲ್ಲ ಎಂಬುದು ಸಾಮಾನ್ಯ ವಿಶ್ಲೇಷಣೆ.

ಹಾಗೆಂದ ಮಾತ್ರಕ್ಕೆ ಕ್ಷೇತ್ರದಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ಹಳಿಯಾಳದ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೊನೆ ಇಲ್ಲವೆಂಬಂತಹ ಸ್ಥಿತಿ ಇದೆ. ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆರೋಗ್ಯ ಸೇವೆಯ ಲಭ್ಯತೆ ಬಹು ದೊಡ್ಡ ಸಮಸ್ಯೆ. ಕ್ಷೇತ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮತದಾರರು ಬೇಡಿಕೆ ಇಟ್ಟು ಬಹಳ ದಿನಗಳಾಗಿವೆ. ಕೃಷಿಯನ್ನೇ ಪ್ರಧಾನವಾಗಿ ನಂಬಿಕೊಂಡಿರುವ ಇಲ್ಲಿನ ಜನ ನೀರಾವರಿ ಯೋಜನೆ, ಸಹಕಾರಿ ಸಕ್ಕರೆ ಕಾರ್ಖಾನೆಗೆೆ ಆಗ್ರಹಿಸುತ್ತಲೇ ಬಂದಿದ್ದಾರೆ. ದಾಂಡೇಲಿ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹದ ನಿರೀಕ್ಷೆಯೂ ಇತ್ತು. ಆದರೆ ಯಾವುದೂ ಈಡೇರಿಲ್ಲ. ಆದರೆ ಕಳೆದ ಆರೇಳು ವರ್ಷಗಳಲ್ಲಿ ರಸ್ತೆ, ಕುಡಿಯುವ ನೀರು, ಕಾಲೇಜಿನಂತಹ ಅಭಿವೃದ್ಧಿ ಕೆಲಸಗಳ ಮೂಲಕ ಮತದಾರರ ವಿಶ್ವಾಸವನ್ನು ಮತ್ತೆ ಗಳಿಸುವ ಪ್ರಯತ್ನ ಮಾಡಿದ್ದಾರೆ. ಇದು ಈ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತದೆ ಕಾದು ನೋಡಬೇಕಷ್ಟೆ.

ದೋಸ್ತಿಯೇ ಈಗ ಎದುರಾಳಿ

ಮತದಾರರ ಆಕ್ರೋಶ, ಅಸಮಾಧಾನವನ್ನು ಅರಗಿಸಿಕೊಂಡ ದೇಶಪಾಂಡೆಯವರಿಗೆ ಈ ಬಾರಿ ದೀರ್ಘಕಾಲದ ಸ್ನೇಹಿತ ಸವಾಲಾಗಿದ್ದಾರೆ. ಅವರೇ ಶ್ರೀಕಾಂತ್ ಎಲ್. ಘೋಟ್ನೇಕರ್. ಕಳೆದ ಕೆಲವು ವರ್ಷಗಳಿಂದ ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಆದರೆ ಈಗ ಅಸಮಾಧಾನ ಬಹಿರಂಗವಾಗಿದ್ದು, ಜೆಡಿಎಸ್‌ನಿಂದ ಚುನಾವಣಾ ಕಣಕ್ಕೆ ಇಳಿಯುವುದಕ್ಕೆ ಸಜ್ಜಾಗಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿದ್ದರು ಘೋಟ್ನೇಕರ್. ಸ್ಥಳೀಯ ಸಂಸ್ಥೆಗಳ ರಾಜಕೀಯ ನಿರ್ಧಾರಗಳಲ್ಲಿ ಘೋಟ್ನೇಕರ್ ಪ್ರಭಾವ ಹೆಚ್ಚಿದ್ದು ಈ ದೀರ್ಘಕಾಲದ ದೋಸ್ತಿ ಮೇಲೆ ಕರಿನೆರಳು ಬೀಳುವುದಕ್ಕೆ ಕಾರಣವಾಗಿತ್ತು. ಇದರ ಜೊತೆಗೆ ದೇಶಪಾಂಡೆಯವರು ಗುಂಪುಗಾರಿಕೆ ಮಾಡುತ್ತಾರೆ ಎಂಬ ಆರೋಪವೂ ಇದ್ದು, ಇದು ಘೋಟ್ನೇಕರ್ ಅವರಿಗೆ ಅನುಕೂಲವಾಗಬಹುದು ಎಂಬುದು ಲೆಕ್ಕಾಚಾರ. ಆದರೆ ದೇಶಪಾಂಡೆ- ಘೋಟ್ನೇಕರ್ ತಿಕ್ಕಾಟದಲ್ಲಿ ಬಿಜೆಪಿ ಗೆಲುವನ್ನು ಎದುರು ನೋಡುತ್ತಿದೆ. ಘೋಟ್ನೇಕರ್ ಮತ್ತು ಬಿಜೆಪಿಯ ನಾಯಕ, ಮಂತ್ರಿ ಶಿವರಾಮ್ ಹೆಬ್ಬಾರ್ ನಡುವಿನ ಸ್ನೇಹವೂ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಜೆಡಿಎಸ್ ಕಣ್ಮರೆ? ಬಿಜೆಪಿಗೆ ಹೆಚ್ಚಿದ ಮತ ಪಾಲು

ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಂಚಿಕೆಯಾಗಿದ್ದ ಮತಗಳನ್ನುನಿಧಾನವಾಗಿ ಬಿಜೆಪಿ ಕಬಳಿಸುತ್ತಾ ಬಂದಿದೆ. ಈಗ ಘೋಟ್ನೇಕರ್- ಸುನೀಲ್-ದೇಶಪಾಂಡೆ ತ್ರಿಕೋನ ಸ್ಪರ್ಧೆಯಲ್ಲಿ ಮತದಾರರ ಒಲವು ಹೇಗೆ ಹಂಚಿಕೆಯಾಗಲಿದೆ ಎಂಬ ಕುತೂಹಲ ತೀವ್ರ ವಾಗಿದೆ.

ಜೆಡಿಎಸ್‌ನಿಂದ ಒಮ್ಮೆ ಗೆದ್ದಿದ್ದ ಸುನೀಲ್ ಹೆಗಡೆ, ಈಗ ಬಿಜೆಪಿಯಟಿಕೆಟ್ ನಿರೀಕ್ಷೆಯಲ್ಲಿದ್ದು, ದೋಸ್ತಿಗಳ ಜಗಳದಲ್ಲಿ ತಾವು ಲಾಭ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಕಾಂಗ್ರೆಸ್ ಜಿಲ್ಲೆ ಎನಿಸಿಕೊಂಡ ಉತ್ತರ ಕನ್ನಡದಲ್ಲಿ ಬಿಜೆಪಿ ತನ್ನೆಲ್ಲಾ ತಂತ್ರಗಾರಿಕೆ ಮೂಲಕ ಮೂರು ಕ್ಷೇತ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಹಳಿಯಾಳದ ಆಸುಪಾಸು ಸುಳಿಯುವುದಕ್ಕೆ ಆಗಿಲ್ಲ. ಆದರೆ ಸುನೀಲ್ ಹೆಗಡೆ ಆಗಮನದಿಂದ ಬಿಜೆಪಿಗೆ ಹಳಿಯಾಳದ ಮೇಲೆ ಆಸೆ ಹೆಚ್ಚಿದೆ. ಹಿಂದಿನ ಎರಡೂ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲು ಕಂಡಿದ್ದು, ಈ ಬಾರಿಯಾದರೂ ಶಾಸಕರಾಗುವ ಕನಸನ್ನು ಸುನೀಲ್ ಜೊತೆಗೆ ಬಿಜೆಪಿಯೂ ಕಾಣುತ್ತಿದೆ. ಮರಾಠಾ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ರಣತಂತ್ರಗಳ ಮೂಲಕ ದೇಶಪಾಂಡೆಯವರ ಕೈಯಿಂದ ಕ್ಷೇತ್ರವನ್ನು ಕಸಿಯಲು ಉತ್ಸುಕವಾಗಿದೆ. ಇದಕ್ಕೆ ಪೂರಕವಾಗಿ ಮರಾಠಾ ಸಮುದಾಯದ ಘೋಟ್ನೇಕರ್ ಕಣಕ್ಕಿಳಿಯುತ್ತಿರುವುದು ಅನುಕೂಲಕರವಾಗುವ ನಿರೀಕ್ಷೆಯೂ ಬಿಜೆಪಿಗಿದೆ.

ಆದರೆ ದೇಶಪಾಂಡೆಯವರು ಆಲದ ಮರದಂತೆ ಬೆಳೆದು ನಿಂತಿದ್ದಾರೆ. ಅಲ್ಲದೆ ಈ ಬಾರಿ ತನ್ನದೇ ಆಪ್ತನ ಬಂಡಾಯ ಹಾಗೂ ಪ್ರತಿಷ್ಠೆಗೆ ಕಾರಣವಾಗಿರುವ ಚುನಾವಣೆಯ ಹಿನ್ನೆಲೆಯಲ್ಲಿ ಎಪ್ಪತ್ತೈದು ವರ್ಷದ ದೇಶಪಾಂಡೆ ಹುರುಪಿನಿಂದ ಓಡಾಡುತ್ತಿದ್ದಾರೆ. ಹಾಗಾಗಿ ಹಳಿಯಾಳದ ಹಣಾಹಣಿ ರೋಚಕವಾಗುವ ನಿರೀಕ್ಷೆ ಇದೆ. ಹಳಿಯಾಳದ ಹಳಿಯ ಮೇಲೆ ಯಾರ ಗೆಲುವಿನ ಬಂಡಿ ಓಡಲಿದೆ ಎಂಬುದೇ ಕುತೂಹಲ.

share
Next Story
X