Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿಚ್ಛೇದಿತ ಪತ್ನಿ ಕೌಟುಂಬಿಕ ದೌರ್ಜನ್ಯ...

ವಿಚ್ಛೇದಿತ ಪತ್ನಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜೀವನಾಂಶಕ್ಕೆ ಅರ್ಹಳು:ಬಾಂಬೆ ಹೈಕೋರ್ಟ್

6 Feb 2023 5:47 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ವಿಚ್ಛೇದಿತ ಪತ್ನಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜೀವನಾಂಶಕ್ಕೆ ಅರ್ಹಳು:ಬಾಂಬೆ ಹೈಕೋರ್ಟ್

ಮುಂಬೈ,ಫೆ.6: ವಿಚ್ಛೇದಿತ ಪತ್ನಿಯು ಕೌಟುಂಬಿಕ ದೌಜರ್ನ್ಯ ಕಾಯ್ದೆಯಡಿ ಜೀವನಾಂಶ ಪಡೆಯಲು ಅರ್ಹಳಾಗಿದ್ದಾಳೆ ಎಂದು ಬಾಂಬೆ ಹೈಕೋರ್ಟ್(Bombay High Court) ಎತ್ತಿ ಹಿಡಿದಿದೆ.

ವಿಚ್ಛೇದಿತ ಪತ್ನಿಯು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ (PWDVA)ಯಡಿ ಜೀವನಾಂಶ ಪಡೆಯಲು ಅರ್ಹಳೇ ಎಂಬ ಪ್ರಶ್ನೆಗೆ ಉತ್ತರಿಸುವಾಗ ಬಾಂಬೆ ಉಚ್ಚ ನ್ಯಾಯಾಲಯವು,ಒಮ್ಮೆ ಅಂತಹ ಹಿಂಸಾಚಾರವನ್ನು ಎಸಗಿದರೆ ನಂತರದ ವಿಚ್ಛೇದನವು ಪತಿಯನ್ನು ಆತನ ವಿತ್ತೀಯ ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದಿಲ್ಲ ಎಂದು ಹೇಳಿದೆ.

2013,ಮೇ 6ರಂದು ವಿವಾಹವಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್‌ವೋರ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ.ಆರ್.ಜಿ.ಅವಚಾತ್(R.G Avachat) ಅವರ ಪೀಠವು ಕೈಗೆತ್ತಿಕೊಂಡಿತ್ತು. ಎರಡು ತಿಂಗಳಿಗೂ ಕೊಂಚ ಹೆಚ್ಚು ಸಮಯ ದಂಪತಿ ಒಟ್ಟಿಗೆ ವಾಸವಾಗಿದ್ದರು.

ಪತಿ ತನ್ನನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಮತ್ತು ತನ್ನನ್ನು ಮನೆಯಿಂದ ಹೊರಕ್ಕೆ ದಬ್ಬಿದ್ದ ಎಂದು ಪತ್ನಿ ಹೇಳಿಕೊಂಡಿದ್ದಳು. ಆದರೆ ಕಾನ್‌ಸ್ಟೇಬಲ್ ತನ್ನದೇ ಆದ ನಿರೂಪಣೆಯನ್ನು ಹೊಂದಿದ್ದ. ತನ್ನ ಪತ್ನಿ ತನ್ನನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಮತ್ತು ಮನೆಯನ್ನು ಅವಳಾಗಿಯೇ ಬಿಟ್ಟು ಹೋಗಿದ್ದಳು ಎನ್ನುವುದು ಆತನ ವಿವರಣೆಯಾಗಿತ್ತು. ಹೀಗಾಗಿ ಆತ ವಿವಾಹ ವಿಚ್ಛೇದನ ಅರ್ಜಿಗೆ ಆದ್ಯತೆಯನ್ನು ನೀಡಿದ್ದ ಮತ್ತು ನ್ಯಾಯಾಲಯವು ಅದನ್ನು ಅನುಮತಿಸಿತ್ತು. ಪತ್ನಿಯೂ ವಿಚ್ಛೇದನ ಆದೇಶಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿರಲಿಲ್ಲ.

ಕಾನ್‌ಸ್ಟೇಬಲ್ ಪರ ವಕೀಲ ಮಚ್ಛೀಂದ್ರ ಪಾಟೀಲ್ ಅವರು,ವೈವಾಹಿಕ ಸಂಬಂಧ ಊರ್ಜಿತದಲ್ಲಿರಲಿಲ್ಲ,ಹೀಗಾಗಿ ವಿಚ್ಛೇದನದ ಆದೇಶದ ದಿನಾಂಕದಿಂದ ಪತ್ನಿಯು ಪಿಡಬ್ಲ್ಯುಡಿವಿಎ ಅಡಿ ಯಾವುದೇ ಪರಿಹಾರಕ್ಕೆ ಅರ್ಹಳಲ್ಲ ಎಂದು ವಾದಿಸಿದ್ದರು.

ಸ್ಪಷ್ಟನೆಗಾಗಿ,ಈ ಪ್ರಕರಣದಲ್ಲಿ ಪತಿ ಮೊದಲು ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದ. ಈ ಅರ್ಜಿಯು ವಿಚಾರಣೆಗೆ ಬಾಕಿಯಿದ್ದಾಗ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜೀವನಾಂಶವನ್ನು ಕೋರಿ ಪತ್ನಿಯು ಅರ್ಜಿ ಸಲ್ಲಿಸಿದ್ದಳು. ಅದನ್ನು ಕೌಟುಂಬಿಕ ನ್ಯಾಯಾಲಯವು ತಿರಸ್ಕರಿಸಿದ ಬಳಿಕ ಮಹಿಳೆ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದಳು ಮತ್ತು ಅದು ಜೀವನಾಂಶವನ್ನು ಮಂಜೂರು ಮಾಡಿತ್ತು. ಇದನ್ನು ಪತಿಯು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಈ ನಡುವೆ ಆದೇಶ ಹೊರಬೀಳುವುದರೊಂದಿಗೆ ವಿಚ್ಛೇದನ ಪ್ರಕ್ರಿಯೆ ಅಂತ್ಯಗೊಂಡಿತ್ತು.

ವಿಚ್ಛೇದನ ಪ್ರಕ್ರಿಯೆಯಲ್ಲಿ ಕಾನ್‌ಸ್ಟೇಬಲ್ 2.5 ಲ.ರೂ.ಗಳ ಇಡಿಗಂಟನ್ನು ಪತ್ನಿಗೆ ಪಾವತಿಸಿದ್ದ. ಮಾಸಿಕ 6,000 ರೂ.ಗಳ ಜೀವನಾಂಶ ನೀಡುವಂತೆ ಸೆಷನ್ಸ್ ನ್ಯಾಯಾಲಯದ ಆದೇಶವು ಈ 2.5 ಲ.ರೂ.ಗಳನ್ನು ಪ್ರತ್ಯೇಕವಾಗಿ ಪರಿಗಣಿಸಿತ್ತು.

ಪತಿಯು ತನ್ನ ಪತ್ನಿಗೆ ಜೀವನಾಂಶವನ್ನು ನೀಡುವ ಶಾಸನಬದ್ಧ ಬಾಧ್ಯತೆಯನ್ನು ಹೊಂದಿದ್ದ. ಆದರೆ ಆತ ತನ್ನ ಬಾಧ್ಯತೆಯನ್ನು ಪೂರೈಸಲು ವಿಫಲನಾಗಿದ್ದರಿಂದ ಪತ್ನಿಗೆ ಪಿಡಬ್ಲ್ಯುಡಿವಿಎ ಅಡಿ ನ್ಯಾಯಾಲಯದ ಮೊರೆ ಹೋಗುವುದನ್ನು ಬಿಟ್ಟು ಬೇರೆ ಆಯ್ಕೆಯಿರಲಿಲ್ಲ ಎಂದು ನ್ಯಾ.ಅವಚಾತ್ ತೀರ್ಪಿನಲ್ಲಿ ಹೇಳಿದ್ದಾರೆ.

ಪತ್ನಿಗೆ ಸಣ್ಣ ಮೊತ್ತದ ಜೀವನಾಂಶವನ್ನು ನೀಡುವಂತೆ ಕಾನ್‌ಸ್ಟೇಬಲ್‌ಗೆ ಆದೇಶಿಸಿದ ಉಚ್ಚ ನ್ಯಾಯಾಲಯವು,ಆತ ತನ್ನ ಪತ್ನಿಗೆ ಮಾಸಿಕ ಕೇವಲ 6,000 ರೂ.ಗಳ ಜೀವನಾಂಶವನ್ನು ನೀಡಬೇಕಾಗಿರುವುದು ಆತನ ಅದೃಷ್ಟವಾಗಿದೆ. ಆತ ಪೊಲೀಸ್ ಸೇವೆಯಲ್ಲಿರುವುದರಿಂದ ಸಂಬಂಧಿತ ಸಮಯದಲ್ಲಿ ಮಾಸಿಕ 25,000 ರೂ.ಗೂ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದ ಮತ್ತು ಈಗ ಅದಕ್ಕಿಂತ ಬಹಳಷ್ಟು ಹೆಚ್ಚು ವೇತನವನ್ನು ಪಡೆಯುತ್ತಿದ್ದಾನೆ ಎಂದು ಬೆಟ್ಟು ಮಾಡಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X