Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಗದಗಲ

ಜಗದಗಲ

7 Feb 2023 3:28 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಜಗದಗಲ

ಶೇಕ್ಸ್‌ಪಿಯರ್ ಅಭಿಮಾನಿಯ ಟಿಪ್ಪಣಿ

ಅದೊಂದು ಪುಟ್ಟ ಟಿಪ್ಪಣಿ ಪುಸ್ತಕ. ಅಂಗೈ ಅಗಲದ ಅದು 17ನೇ ಶತಮಾನದ್ದು. ಶೇಕ್ಸ್ ಪಿಯರ್ ಹೆಸರನ್ನು ಹೊಂದಿದ್ದುದರಿಂದ ಕುತೂಹಲ ಕೆರಳಿಸಿತ್ತು. ಆದರೆ ಬರಹವು ಓದಲಾರದಷ್ಟು ಚಿಕ್ಕದಿದ್ದುದರಿಂದ ಪರಿಣಿತರು ತಲೆಕೆಡಿಸಿಕೊಂಡಿದ್ದರು.
2017ರ ಬಿಬಿಸಿ ವನ್‌ನ ಪ್ರಾಚ್ಯವಸ್ತು ಕುರಿತ ಶೋನಲ್ಲಿ ಕಂಡಂದಿನಿಂದ ಪ್ರಮುಖ ವಿದ್ವಾಂಸರು ಅದರ ಲಿಪ್ಯಂತರವನ್ನೂ ಅಧ್ಯಯನವನ್ನು ಮಾಡುತ್ತಲೇ ಬಂದಿದ್ದಾರೆ ಮತ್ತು ಈ ಟಿಪ್ಪಣಿ ಪುಸ್ತಕದಲ್ಲಿ ಬರೆದವನು ಶೇಕ್ಸ್‌ಪಿಯರ್‌ನ ಪರಮ ಅಭಿಮಾನಿ ಇದ್ದಿರಬೇಕೆಂದು ಭಾವಿಸಲಾಗಿದೆ. 
ಅಷ್ಟೊಂದು ಪುಟ್ಟ ಪುಸ್ತಕದ 48 ಪುಟಗಳಲ್ಲಿ, 1623ರಲ್ಲಿ ಪ್ರಕಟವಾಗಿದ್ದ ಶೇಕ್ಸ್‌ಪಿಯರ್‌ನ ಮೊದಲ ಸಂಪುಟದ 36 ನಾಟಕಗಳಿಂದ ಆರಿಸಿದ ನೂರು ಉಲ್ಲೇಖಗಳು 12,500 ಪದಗಳಲ್ಲಿವೆ.

ಇಂಗ್ಲೆಂಡಿನ ಸ್ಟ್ರಾಟ್‌ಫೋರ್ಡ್-ಆನ್-ಏವನ್ ನಗರದಲ್ಲಿನ ಶೇಕ್ಸ್‌ಪಿಯರ್ ಜನ್ಮಸ್ಥಳ ಟ್ರಸ್ಟ್ ಪ್ರದರ್ಶನದಲ್ಲಿ ಇದು ಮೊದಲ ಬಾರಿಗೆ ಸಾರ್ವಜನಿಕರ ಕಣ್ಣಿಗೆ ಬೀಳುತ್ತಿದೆ. ಪ್ರಮುಖ ವಿದ್ವಾಂಸ ಮತ್ತು ಈ ಕಾರ್ಯಕ್ರಮ ರೂಪಿಸಿದವರಲ್ಲಿ ಒಬ್ಬರಾದ ಡಾ. ಪಾಲ್ ಎಡ್ಮಂಡ್ಸನ್, ‘‘ಇದು ನಾನು ಕಂಡ ಅತ್ಯಂತ ಆಕರ್ಷಕ ಶೇಕ್ಸ್‌ಪಿಯರ್ ಕಲಾಕೃತಿಗಳಲ್ಲಿ ಒಂದು’’ ಎಂದಿದ್ದಾರೆ.

ಈ ಟಿಪ್ಪಣಿ ಪುಸ್ತಕವನ್ನು ಇನ್ನೊಬ್ಬ ಪ್ರಮುಖ ವಿದ್ವಾಂಸರಾದ, ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾನಿಲಯದ ಶೇಕ್ಸ್‌ಪಿಯರ್ ಇನ್‌ಸ್ಟಿಟ್ಯೂಟ್‌ನ ಪ್ರೊ. ಟಿಫಾನಿ ಸ್ಟರ್ನ್ ನಕಲು ಮಾಡಿದ್ದಾರೆ. ಅವರ ಪ್ರಕಾರ, ಈ ಕೈಬರಹ 1630ರಿಂದ 1650ರ ನಡುವಿನ ಅವಧಿಯದ್ದು. ಶೇಕ್ಸ್‌ಪಿಯರ್‌ನ ಅತ್ಯಂತ ಪ್ರಸಿದ್ಧ ಸಾಲುಗಳು ಈ ಟಿಪ್ಪಣಿ ಪುಸ್ತಕದಲ್ಲಿಲ್ಲ ಎಂಬುದನ್ನು ಅವರು ವಿಶೇಷವಾಗಿ ಗಮನಿಸುತ್ತಾರೆ. ಶೇಕ್ ಪಿಯರ್‌ನ ಮೊದಲ ತಲೆಮಾರಿನ ಓದುಗರಲ್ಲಿ ಆಸಕ್ತಿ ಮೂಡಿಸಿದ್ದೇನು ಎಂಬುದನ್ನು ಇಲ್ಲಿನ ಸಾಲುಗಳು ಹೇಳುತ್ತಿರುವಂತಿದೆ ಎನ್ನುವ ಅವರು, ಶೇಕ್ಸ್ ಪಿಯರ್‌ನಲ್ಲಿ ನಾವು ಏನನ್ನು ಗೌರವಿಸುತ್ತೇವೆಯೋ ಅದು ಕಾಲಾಂತರದಲ್ಲಿ ಬದಲಾಗುತ್ತ ಬಂದಿದೆ ಎಂದು ಗುರುತಿಸುತ್ತಾರೆ.

ಶೇಕ್ಸ್‌ಪಿಯರ್ ಜನ್ಮಸ್ಥಳ ಟ್ರಸ್ಟ್ ಸ್ವತಂತ್ರ ಚಾರಿಟಿಯಾಗಿದ್ದು, ಆತನ ವಾರ್ವಿಕ್‌ಷೈರ್ ತವರು ಪಟ್ಟಣದಲ್ಲಿ ಐದು ಐತಿಹಾಸಿಕ ತಾಣಗಳ ನಿರ್ವಹಣೆ ಮಾಡುತ್ತಿದೆ. 1597ರಿಂದ 1616ರವರೆಗೆ ಆತ ಸಾಯುವ ತನಕವೂ ನೆಲೆಸಿದ್ದ ಮನೆ ನ್ಯೂ ಪ್ಲೇಸ್ ಕೂಡ ಈ ಐದು ತಾಣಗಳಲ್ಲಿ ಸೇರಿದೆ.

ಪುಸ್ತಕಗಳಿಗೂ ಹಣದುಬ್ಬರದ ಕಾಟ

ಹಣದುಬ್ಬರ ಏನೆಲ್ಲವನ್ನೂ ಪ್ರಭಾವಿಸಬಲ್ಲುದು, ಜನಸಾಮಾನ್ಯರ ಬದುಕನ್ನು ಹೇಗೆ ಕಂಗೆಡಿಸಬಹುದು ಎಂಬುದು ಕಾಣಿಸುತ್ತಿದೆ. ತಮಾಷೆಯೆಂದರೆ ಈಜಿಪ್ಟಿನಲ್ಲಿ ಹಣದುಬ್ಬರ ನಿಜಜೀವನವನ್ನು ಮಾತ್ರವಲ್ಲ, ಕಾಲ್ಪನಿಕ ಕೃತಿಗಳ ಪಾತ್ರಗಳು ಮತ್ತು ಬದುಕನ್ನೂ ಕತ್ತರಿಸಿ ಬಿಸಾಕುತ್ತಿದೆ.
ಹೌದು. ಅಲ್ಲೀಗ ಪುಸ್ತಕ ಅತ್ಯಂತ ಐಷಾರಾಮಿ ವಸ್ತುಗಳ ಸಾಲಿಗೆ ಸೇರಿದೆ. ಪುಸ್ತಕಗಳ ಬೆಲೆಗಳು ದುಪ್ಪಟ್ಟಾಗುತ್ತಿವೆ. ಕಾಗದ ಮತ್ತು ಶಾಯಿಯ ವೆಚ್ಚ ಗಮನೀಯವಾಗಿ ಏರಿದೆ. ಒಂದು ಟನ್ ಕಾಗದದ ಬೆಲೆ ವರ್ಷದ ಆರಂಭದಲ್ಲಿದ್ದುದಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆಯಂತೆ.

ಮುದ್ರಣ ವೆಚ್ಚ ಹೆಚ್ಚುತ್ತಿರುವುದರಿಂದ ಕೆಲವು ಈಜಿಪ್ಟ್ ಲೇಖಕರು ತಮ್ಮ ಕೃತಿಯಲ್ಲಿನ ಪಾತ್ರಗಳು ಮತ್ತು ವಿವರಣೆಗಳನ್ನು ಕತ್ತರಿಸುತ್ತಿದ್ದಾರೆ. ಹದಿಹರೆಯದವರಿಗಾಗಿ ಜನಪ್ರಿಯ ಕಾಲ್ಪನಿಕ ಕಥೆಗಳನ್ನು ಬರೆಯುವ ಲೇಖಕಿ ದಿನಾ ಅಫೀಫಿ, ಮುದ್ರಣ ವೆಚ್ಚ ಕಡಿಮೆ ಮಾಡಲು ತಮ್ಮ ಇತ್ತೀಚಿನ ಪುಸ್ತಕದ ಗಾತ್ರ ಕಡಿತಗೊಳಿಸಿರುವುದಾಗಿ ಹೇಳುತ್ತಾರೆ. ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಅವರು, ಪುಸ್ತಕದ ಗಾತ್ರವನ್ನು ಸುಮಾರು 100ರಿಂದ ಕೇವಲ 60 ಪುಟಗಳಿಗೆ ತಗ್ಗಿಸಲಾಗಿದೆ ಎಂದಿದ್ದಾರೆ.

ಮತ್ತೆ ಕೆಲ ಕಾದಂಬರಿಕಾರರು ಗಾತ್ರ ಚಿಕ್ಕದಾಗಿಸಲು ಪ್ರಕಾಶಕರಿಂದ ತಮ್ಮ ಕೃತಿಗಳನ್ನು ಹಿಂದೆಗೆದುಕೊಂಡ ಸುದ್ದಿಯೂ ಇದೆ. ಕಡಿಮೆ ಪಾತ್ರಗಳು, ಕಡಿಮೆ ವಿವರಣೆ ಮತ್ತು ಸರಳ ಕಥಾಹಂದರ ಇಂತಹದೊಂದು ಸೂತ್ರಕ್ಕೆ ಕಟ್ಟುಬೀಳಬೇಕಾದ ಅನಿವಾರ್ಯತೆ ತಲೆದೋರಿದೆ.
ಈಜಿಪ್ಟಿನ ಪುಸ್ತಕಪ್ರಿಯರು ಈಗ ಕಡಿಮೆ ಗುಣಮಟ್ಟದ ನಕಲಿ ಪ್ರತಿಗಳನ್ನು ಖರೀದಿಸಲಾರಂಭಿಸಿದ್ದಾರಂತೆ. ಬೀದಿಬದಿಯ ಅಂಗಡಿಗಳಲ್ಲಿ ಇಂತಹ ನಕಲಿ ಪ್ರತಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಇನ್ನೊಂದೆಡೆ, ಪುಸ್ತಕ ಖರೀದಿಸುವುದಕ್ಕೇ ಸಾಲವೂ ಸಿಗುತ್ತಿದೆಯಂತೆ.
ಆದರೆ ಹಣದುಬ್ಬರದ ಅಬ್ಬರದಲ್ಲಿ ತತ್ತರಿಸುತ್ತಿರುವ ಜನರು ಪುಸ್ತಕ ಖರೀದಿಸುವುದಕ್ಕಿಂತ ಹೆಚ್ಚಾಗಿ ಊಟದ ಟೇಬಲ್‌ನ ಮೇಲೆ ಆಹಾರವಿರುವುದನ್ನು ಖಾತ್ರಿಪಡಿಸಿಕೊಳ್ಳುವುದರ ಕಡೆಗೇ ಗಮನ ಕೊಡುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ.


ಕೃತಿಕಾರನನ್ನು ಪತ್ತೆಮಾಡಿದ AI

ಸ್ಪೇನ್‌ನ ಸಾಹಿತ್ಯದ ಸುವರ್ಣ ಕಾಲಘಟ್ಟದ ಕೆಲವು ಅತ್ಯುತ್ತಮ ಬರಹಗಾರರ ಕಳೆದುಹೋದ ಅಥವಾ ಯಾರದೋ ಹೆಸರಲ್ಲಿ ಗುರುತಿಸಲಾಗುತ್ತಿರುವ ಕೃತಿಗಳನ್ನು ಪತ್ತೆಹಚ್ಚುವಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಮಹತ್ವದ ಕೆಲಸ ನಡೆಯುತ್ತಿದೆ. ಆವತ್ತಿನ ಕಾಲದ ನಾಟಕಕಾರ, ಕವಿ, ನಾವಿಕ ಮತ್ತು ಪಾದ್ರಿ ಲೋಪ್ ಡಿ ವೇಗಾ ಅವರ ಮಹತ್ವದ ಕೃತಿಯೊಂದು ಈಗ ಪತ್ತೆಯಾಗಿದೆ.

ಇತ್ತೀಚೆಗೆ ಸ್ಪೇನ್‌ನ ರಾಷ್ಟ್ರೀಯ ಗ್ರಂಥಾಲಯದ ಬೃಹತ್ ಆರ್ಕೈವ್‌ನಲ್ಲಿ ಮರೆಯಾಗಿಹೋಗಿದ್ದ, 1635ರಲ್ಲಿ ಸಾಯುವ ಕೆಲವು ವರ್ಷಗಳ ಮೊದಲು ಲೋಪ್ ಬರೆದಿದ್ದು ಎನ್ನಲಾಗುವ ನಾಟಕ ಕೃತಿ ಅವರದೇ ಎಂಬುದನ್ನು ಸಂಶೋಧಕರು ಕಡೆಗೂ ತೀರ್ಮಾನಿಸಿದ್ದಾರೆ. 

16 ಮತ್ತು 17ನೇ ಶತಮಾನದ ಸಾಂಸ್ಕೃತಿಕ ಉತ್ಕರ್ಷ ಸ್ಪೇನ್‌ನ ಸಾಮ್ರಾಜ್ಯಶಾಹಿ ಬೆಳವಣಿಗೆಯೊಂದಿಗೆ ಲೋಪ್, ಸೆರ್ವಾಂಟೆಸ್, ಕಾಲ್ಡೆರಾನ್ ಮತ್ತು ವೆಲಾಝ್‌ಕ್ವೆಝ್ ಮೊದಲಾದವರ ಮೇರುಕೃತಿಗಳಿಗೂ ಕಾರಣವಾಯಿತು. ಸ್ಪ್ಯಾನಿಷ್ ಸುವರ್ಣಯುಗದ ಅನೇಕ ನಾಟಕಗಳಂತೆ ‘ಲಾ ಫ್ರಾನ್ಸೆಸಾ ಲಾರಾ’ (ಫ್ರೆಂಚ್ ಮಹಿಳೆ ಲಾರಾ) ಪ್ರೀತಿ, ಅಸೂಯೆ ಮತ್ತು ಸಾಮಾಜಿಕ ಶ್ರೇಣಿಯ ಕಥೆ. ಇದರಲ್ಲಿ ಅನುಮಾನವು ಮುಗ್ಧ ಮಹಿಳೆಯನ್ನು ತನ್ನ ಗಂಡನ ಗೌರವದ ಬಲಿಪೀಠದ ಮೇಲೆ ಪ್ರಾಣತ್ಯಾಗಕ್ಕೆ ಒತ್ತಾಯಿಸುತ್ತದೆ. ಆದರೆ, ಆ ಅವಧಿಯ ಇಂಥದೇ ಅನೇಕ ನಾಟಕಗಳಿಗಿಂತ ಭಿನ್ನವಾಗಿ ಉಳಿದಿದೆ ಇದು ಎಂಬುದು ವಿದ್ವಾಂಸರ ಅಭಿಪ್ರಾಯ.

ಈ ನಾಟಕದ ಆವಿಷ್ಕಾರದ ವಿಧಾನವೂ ಅಷ್ಟೇ ಅಸಾಧಾರಣವಾಗಿತ್ತು. 2017ರಲ್ಲಿ, ವಲ್ಲಾಡೋಲಿಡ್ ವಿಶ್ವವಿದ್ಯಾನಿಲಯದ ಸುವರ್ಣಯುಗ ಸಾಹಿತ್ಯ ತಜ್ಞರಾದ ಜರ್ಮನ್ ವೆಗಾ ಮತ್ತು ಈಗ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿರುವ ಅಲ್ವಾರೊ ಕ್ಯುಲರ್ ಅವರು ಎಟ್ಸೊ ಯೋಜನೆ ಆರಂಭಿಸಿದರು. ಇದು ಆ ಕಾಲದ ಕೃತಿಗಳ ರಚನೆಕಾರರ ಬಗ್ಗೆ ನಿರ್ಧರಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ವಿಶ್ಲೇಷಣೆಯನ್ನು ಬಳಸುವ ಯೋಜನೆ. ಆವತ್ತಿನ ಹಲವು ನಾಟಕಗಳು ಒಂದೋ ಬರೆದವರ ಗುರುತಿಲ್ಲದಂತಾಗಿವೆ ಅಥವಾ ಇನ್ನಾರದೋ ಹೆಸರಿನಲ್ಲಿ ಗುರುತಿಸಲ್ಪಟ್ಟಿವೆ ಎಂದು ಹೇಳಲಾಗುತ್ತದೆ.

ಈ ಯೋಜನೆಯ ಭಾಗವಾಗಿ 1,300 ನಾಟಕಗಳನ್ನು ಡಿಜಿಟಲೀಕರಣಗೊಳಿಸಲಾಯಿತು. ಅವುಗಳಲ್ಲಿ ಹೆಚ್ಚಿನವು ಸ್ಪೇನ್‌ನ ರಾಷ್ಟ್ರೀಯ ಗ್ರಂಥಾಲಯದಿಂದ ತೆಗೆದುಕೊಂಡವುಗಳು. ಲಿಪ್ಯಂತರದ ಬಳಿಕ ಸ್ಟೈಲೊ ಎಂಬ ಮತ್ತೊಂದು ಪ್ರೋಗ್ರಾಮ್ ಮೂಲಕ ಎಟ್ಸೊ ಡೇಟಾಬೇಸ್‌ನಲ್ಲಿನ 350 ಲೇಖಕರ 2,800 ಡಿಜಿಟಲೀಕೃತ ಕೃತಿಗಳೊಂದಿಗೆ ಅವುಗಳ ಭಾಷೆ ಮತ್ತು ಶೈಲಿಯನ್ನು ಹೋಲಿಸಲಾಯಿತು. ಈ ತಾಂತ್ರಿಕ ವಿಶ್ಲೇಷಣೆಯಲ್ಲಿ, ದೀರ್ಘ ಕಾಲದಿಂದ ಅನಾಮಧೇಯ ಕೃತಿಯಾಗಿ ಉಳಿದಿದ್ದ ಲಾ ಫ್ರಾನ್ಸೆಸಾ ಲಾರಾ ನಾಟಕವು ಲಿಪ್ಯಂತರಗೊಳಿಸಿದ 1,300 ಪಠ್ಯಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚಿನ ಕೃತಿಗಳನ್ನು ಹೋಲುವುದನ್ನು ಕಂಪ್ಯೂಟರ್ ಗಮನಿಸಿತು ಮತ್ತು ಅವೆಲ್ಲವೂ ಲೋಪ್ ಅವರ ಕೃತಿಗಳೇ ಆಗಿದ್ದವು.

‘‘ಅದು ನಿಜವಾಗಿಯೂ ಗಮನ ಸೆಳೆಯಿತು. ಹೀಗೆ ಕೃತಿಯ ಲೇಖಕ ಯಾರೆಂಬುದನ್ನು ಕಂಡುಕೊಳ್ಳುತ್ತೇವೆ ಎಂದು ನಾವು ಭಾವಿಸಿರಲಿಲ್ಲ. ಆದರೆ ಲಾ ಫ್ರಾನ್ಸೆಸಾ ಲಾರಾದಲ್ಲಿನ ಅಭಿವ್ಯಕ್ತಿ ಲೋಪ್‌ರ ಇತರ ನಾಟಕಗಳೊಂದಿಗೆ ಸಾಮ್ಯತೆ ಹೊಂದಿದೆ’’ ಎನ್ನುತ್ತಾರೆ ವೆಗಾ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X