ಆಸ್ಟ್ರೇಲಿಯದ ಟಿ-20 ವಿಶ್ವಕಪ್ ವಿಜೇತ ನಾಯಕ ಆ್ಯರೊನ್ ಫಿಂಚ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ
ಮೆಲ್ಬೋರ್ನ್: ಆಸ್ಟ್ರೇಲಿಯ ತಂಡ ಮೊದಲ ಬಾರಿ ಐಸಿಸಿ ಪುರುಷರ ಟಿ-20 ವಿಶ್ವಕಪ್ ಪ್ರಶಸ್ತಿ ಗೆಲ್ಲಲು ಕಾರಣರಾಗಿರುವ ಆ್ಯರೊನ್ ಫಿಂಚ್ ಮಂಗಳವಾರ ಅಂತರ್ ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ.
ಫಿಂಚ್ ಆಸ್ಟ್ರೇಲಿಯವನ್ನು ಎಲ್ಲ ಮಾದರಿ ಕ್ರಿಕೆಟ್ ನಲ್ಲಿ 254 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ(5 ಟೆಸ್ಟ್, 146 ಏಕದಿನ ಹಾಗೂ 103 ಟಿ-20)ಪ್ರತಿನಿಧಿಸಿದ್ದಾರೆ.
76 ಟಿ-20 ಹಾಗೂ 55 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ನಾಯಕನಾಗಿ ಮುನ್ನಡೆಸಿದ್ದಾರೆ.
ಮಾಜಿ ಏಕದಿನ ನಾಯಕ ಫಿಂಚ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ 50-ಓವರ್ ಮಾದರಿ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು. ಆಸ್ಟ್ರೇಲಿಯ ವಿಶ್ವಕಪ್ ಸೆಮಿ-ಫೈನಲ್ಗೆ ಮುಂಚೆಯೇ ಸೋತ ನಂತರ ಫಿಂಚ್ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದರು.
2011ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20ಯಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಾಲಿಟ್ಟ ಫಿಂಚ್ ಏಕದಿನ ಕ್ರಿಕೆಟ್ ನಲ್ಲಿ 17 ಶತಕ ಹಾಗೂ ಟಿ-20ಯಲ್ಲಿ 2 ಶತಕ ಸೇರಿದಂತೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 8,804 ರನ್ ಗಳಿಸಿದ್ದಾರೆ.
2018ರಲ್ಲಿ ಹರಾರೆಯಲ್ಲಿ ಝಿಂಬಾಬ್ವೆ ವಿರುದ್ಧ 172 ರನ್ ಗಳಿಸಿದ್ದ ಫಿಂಚ್ ಟಿ-20 ಕ್ರಿಕೆಟ್ ನಲ್ಲಿ ಗರಿಷ್ಟ ಸ್ಕೋರ್ ಗಳಿಸಿದ್ದಾರೆ.
36 ವರ್ಷ ವಯಸ್ಸಿನ, ಆರಂಭಿಕ ಬ್ಯಾಟ್ಸ್ಮನ್ ಹಾಗೂ ಚಾಣಾಕ್ಷ ನಾಯಕ ಫಿಂಚ್ ಆಸ್ಟ್ರೇಲಿಯದ ಶ್ರೇಷ್ಠ ಸೀಮಿತ-ಓವರ್ಗಳ ಆಟಗಾರರಲ್ಲಿ ಪೈಕಿ ಒಬ್ಬರಾಗಿದ್ದಾರೆ. 2021 ರಲ್ಲಿ ಯುಎಇನಲ್ಲಿ ಆಸ್ಟ್ರೇಲಿಯ ತನ್ನ ಮೊದಲ ಜಾಗತಿಕ ಟಿ-20 ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತನ್ನ ತವರು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಉತ್ತರಾಧಿಕಾರಿ ಗುರುತಿಸಲು ಇದು ಸಮಯ ಎಂದು ಫಿಂಚ್ ಹೇಳಿದರು.
JUST IN: Australia's T20I captain has announced his retirement from international cricket.
— ICC (@ICC) February 6, 2023
Details https://t.co/gfsgnSLosW