Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಖ್ಯಾತ ಸಿನಿಮಾ ಪತ್ರಕರ್ತ ಮಂಗಳೂರು ಮೂಲದ...

ಖ್ಯಾತ ಸಿನಿಮಾ ಪತ್ರಕರ್ತ ಮಂಗಳೂರು ಮೂಲದ ರೌಫ್ ಅಹ್ಮದ್ ನಿಧನ

7 Feb 2023 11:12 AM IST
share
ಖ್ಯಾತ ಸಿನಿಮಾ ಪತ್ರಕರ್ತ ಮಂಗಳೂರು ಮೂಲದ ರೌಫ್ ಅಹ್ಮದ್ ನಿಧನ

ಮುಂಬೈ: ಚಲನಚಿತ್ರ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿ ಆ ಕ್ಷೇತ್ರದಲ್ಲಿ  ಹಲವು ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿ ಜಾರಿಗೆ ತಂದ  ಮಂಗಳೂರು ಮೂಲದ ಖ್ಯಾತ ಪತ್ರಕರ್ತ, ಲೇಖಕ  ರೌಫ್ ಅಹ್ಮದ್ ಮುಂಬೈನಲ್ಲಿ ಇತ್ತೀಚಿಗೆ ನಿಧನರಾಗಿದ್ದಾರೆ. 70ರ ದಶಕದ ಮಧ್ಯಭಾಗದಿಂದ ಅವರು ಸಂಪಾದಕರಾಗಿದ್ದ  ನಿಯತಕಾಲಿಕೆಗಳ ಮೂಲಕ ಚಲನಚಿತ್ರ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ ಕೀರ್ತಿ  ರೌಫ್ ಅಹ್ಮದ್ ಅವರದ್ದು. ಅವರು  ರವಿವಾರ ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ಅವರ ವರ್ಸೋವಾ ನಿವಾಸದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮಂಗಳೂರಿನ ಬಂದರ್ ನಿವಾಸಿ ನಿವೃತ್ತ ನ್ಯಾಯಾಧೀಶ ಅಬ್ದುಲ್ ರಹೀಮ್ ಅವರ ಸುಪುತ್ರ ರೌಫ್ ಅಹ್ಮದ್ ನಗರದ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಮುಂಬೈಗೆ ತೆರಳಿದ್ದರು.  ಅಲ್ಲಿ ಸಮಕಾಲೀನರಾದ ಎಂ ಜೆ ಅಕ್ಬರ್‌ ಅವರಂತಹವರೊಂದಿಗೆ 1975 ರಲ್ಲಿ ಅಹ್ಮದ್‌ ಅವರು ಟೈಮ್ಸ್‌ ಆಫ್‌ ಇಂಡಿಯಾ ತರಬೇತಿ ಕೋರ್ಸ್‌ನ ಭಾಗವಾಗಿದ್ದರು.  ನಂತರ ಅವರು ಸಿನೆಮಾ ಪತ್ರಿಕೋದ್ಯಮದತ್ತ ಚಿತ್ತ ಹರಿಸಿ ʼಸೂಪರ್‌ʼ ಎಂಬ ಮ್ಯಾಗಝಿನ್‌ ಹೊರತಂದಿದ್ದರು. ಮುಂದೆ ʻಮೂವೀʼ ಮ್ಯಾಗಝಿನ್‌ ಹೊರತಂದ ಅವರು ಟೈಮ್ಸ್‌ ಆಫ್‌ ಇಂಡಿಯಾದ ಸಿನಿಮಾ  ಮ್ಯಾಗಝಿನ್‌ ʻಫಿಲ್ಮ್‌ಫೇರ್‌ʼ ಇದರ ಸಂಪಾದಕರಾದರು.  ಆ ಕಾಲದಲ್ಲಿ ಜನಪ್ರಿಯವಾಗಿದ್ದ ಫಿಲ್ಮ್‌ ಗಾಸಿಪ್‌ ಸುದ್ದಿಗಳನ್ನು ಹೆಚ್ಚು ನೆಚ್ಚಿಕೊಳ್ಳದೆ ಹೊಸ ಒಳನೋಟಗಳುಳ್ಳ ಸಿನಿಮಾ ಬರಹಗಳನ್ನು ಓದುಗರಿಗೆ ನೀಡುವ ಮೂಲಕ  ರೌಫ್ ಅಹ್ಮದ್ ಸಿನಿಮಾ ಪತ್ರಿಕೋದ್ಯಮಕ್ಕೆ ಹೊಸ ರೂಪ ನೀಡಿದರು. 

ಅಹ್ಮದ್‌ ಅವರು ತಮ್ಮ ಅದ್ಭುತ ಬರಹ ಶೈಲಿ ಹಾಗೂ ಆಕರ್ಷಕ ವಿನ್ಯಾಸದಿಂದ ಗಮನ ಸೆಳೆದಿದ್ದರು. ಅವರ ಮೂಲಕ ಮೊದಲ ಬಾರಿಗೆ ವಿಂಟೇಜ್‌ ಸಂಗೀತ, ಪರ್ಯಾಯ ಸಿನೆಮಾ ಮತ್ತು ಪೂರ್ಣ-ಪ್ರಮಾಣದ ನೊಸ್ಟಾಲ್ಜಿಯಾ ವಿಭಾಗಗಳು ಮುಖ್ಯವಾಹಿನಿ ಫಿಲ್ಮ್‌ ಮ್ಯಾಗಜೀನ್‌ಗಳಲ್ಲಿ ಪ್ರವೇಶ ಪಡೆದವು.  ಆ ಮೂಲಕ ಸಿನೆಮಾ ಪತ್ರಿಕೋದ್ಯಮಕ್ಕೆ ಮನರಂಜನೆ ಜೊತೆ ಗಾಂಭೀರ್ಯ ಹಾಗು ಅಧ್ಯಯನಶೀಲತೆಯನ್ನು ತಂದವರು ರೌಫ್ ಅಹ್ಮದ್.

ಫಿಲ್ಮ್‌ಫೇರ್‌ ಸಂಪಾದಕರಾಗಿದ್ದ ಆರು ವರ್ಷಗಳ ಕಾಲ  ಅಹ್ಮದ್‌ ಅವರು  ಫಿಲ್ಮ್‌ಫೇರ್‌ ಪ್ರಶಸ್ತಿ ಪ್ರದಾನ ಸಮಾರಂಭದ ಸ್ವರೂಪವನ್ನೇ ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.  ಫಿಲ್ಮ್‌ಫೇರ್‌ ಪ್ರಶಸ್ತಿ ಪ್ರದಾನ ಸಮಾರಂಭದ ಸ್ಥಳ, ಶೈಲಿ ಹಾಗು ಪ್ರಶಸ್ತಿ ಪ್ರದಾನದ ಸ್ವರೂಪವನ್ನು ಆಸ್ಕರ್‌ ಪ್ರಶಸ್ತಿ ಸಮಾರಂಭದ ಮಾದರಿಯಲ್ಲಿ ರೂಪುಗೊಂಡಿದ್ದು ಅದೇ ಕಾಲದಲ್ಲಿ. ಬಾಲಿವುಡ್ ನ ಅತಿರಥ ಮಹಾರಥರ ಜೊತೆ ಆತ್ಮೀಯರಾಗಿದ್ದ ಅವರು ಕೆಲಸಮಯ ಅಮಿತಾಭ್ ಬಚ್ಚನ್ ಜೊತೆಗೂ ಕೆಲಸ ಮಾಡಿದ್ದರು. 

ಸಿನಿಮಾ  ಪತ್ರಿಕೋದ್ಯಮದ ಜೊತೆ ಏಷ್ಯನ್ ಏಜ್ ಪತ್ರಿಕೆಯಲ್ಲಿ ಇತರ ವಿಭಾಗಗಳಲ್ಲೂ ಸೇವೆ ಸಲ್ಲಿಸಿದ್ದರೂ ಸಿನೆಮಾ ಪತ್ರಿಕೋದ್ಯಮ ಅವರಿಗೆ ಅಚ್ಚುಮೆಚ್ಚಿನದ್ದಾಗಿತ್ತು. 2016  ರಲ್ಲಿ  ಅವರು ಬಾಲಿವುಡ್‌ನ ಯಾಹೂ ತಾರೆ ಶಮ್ಮಿ ಕಪೂರ್‌  ಅವರ ಕುರಿತು "ಶಮ್ಮಿ ಕಪೂರ್-ದಿ ಗೇಮ್‌ ಚೇಂಜರ್"‌ ಎಂಬ ಕೃತಿಯನ್ನು ರಚಿಸಿ ಹಿಂದಿ ಚಿತ್ರದ ಹೀರೋ ಚಿತ್ರಣವನ್ನೇ ಶಮ್ಮಿ ಕಪೂರ್‌ ಹೇಗೆ ಬದಲಾಯಿಸಿದ್ದರೆಂಬುದನ್ನು ಅದ್ಭುತವಾಗಿ ವಿವರಿಸಿದ್ದರು. 

ಸಿನಿಮಾ ಪತ್ರಿಕೋದ್ಯಮದ ಪಾಲಿಗೆ ಭಾರತದಲ್ಲಿ ಸ್ವತಃ ರೌಫ್ ಅಹ್ಮದ್‌ ಅವರೇ ಒಂದು ರೀತಿಯಲ್ಲಿ ʻಗೇಮ್-ಚೇಂಜರ್ʼ ಆಗಿದ್ದರು.

share
Next Story
X