ಟರ್ಕಿ, ಸಿರಿಯಾದಲ್ಲಿ ಭೂಕಂಪ: ಅವಶೇಷಗಳಡಿ ಸಿಲುಕಿರುವ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯನ್ ಅಟ್ಸು

ಇಸ್ತಾಂಬುಲ್: ಟರ್ಕಿ ಹಾಗೂ ಸಿರಿಯಾದಲ್ಲಿ 3,000 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಭಾರೀ ಭೂಕಂಪದ ಅವಶೇಷಗಳಡಿ ಘಾನಾ ವಿಂಗರ್ ಕ್ರಿಶ್ಚಿಯನ್ ಅಟ್ಸು ಸಿಲುಕಿಕೊಂಡಿದ್ದಾರೆ ಎಂದು ಕ್ರಿಶ್ಚಿಯನ್ ಅಟ್ಸು ಅವರು ಪ್ರತಿನಿಧಿಸುತ್ತಿರುವ ಟರ್ಕಿಶ್ ಕ್ಲಬ್ ಹಯಾಟ್ಸ್‌ಪೋರ್‌ನ ಉಪಾಧ್ಯಕ್ಷರು ಸೋಮವಾರ ಹೇಳಿದ್ದಾರೆ.
ಮಾಜಿ ನ್ಯೂ ಕ್ಯಾಸಲ್ ಹಾಗೂ ಚೆಲ್ಸಿಯಾ ಮಿಡ್‌ಫೀಲ್ಡರ್ ಅಟ್ಸು( 31 ವರ್ಷ) ಸೆಪ್ಟೆಂಬರ್‌ನಲ್ಲಿ ಸೂಪರ್ ಲಿಗ್ ತಂಡವನ್ನು ಸೇರಿಕೊಂಡಿದ್ದರು.
" ಅಟ್ಸು ಅವರ ಕ್ರೀಡಾ ನಿರ್ದೇಶಕರಾದ ಟಾನರ್ ಸಾವುತ್ ಹಾಗೂ ಕ್ರಿಶ್ಚಿಯನ್ ಅಟ್ಸು ಕುಸಿದುಬಿದ್ದಿರುವ ಕಟ್ಟಡದ ಅವಶೇಷಗಳಡಿ ಇದ್ದಾರೆಂದು ನಂಬಲಾಗಿದ್ದು, ಅವರು ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಭೂಕಂಪ ನಡೆದ ಕೆಲವೇ ಗಂಟೆಗಳ ನಂತರ ಈ ಇಬ್ಬರು ನಾಪತ್ತೆಯಾಗಿದ್ದಾರೆ. ಕ್ಲಬ್ ಅಧಿಕಾರಿಗಳಿಗೆ ಈ ಇಬ್ಬರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ'' ಎಂದು ಕ್ಲಬ್ ಡೈರೆಕ್ಟರ್ ತಿಳಿಸಿದ್ದಾರೆ.
ಅಟ್ಸು 2021 ರಲ್ಲಿ ಸೌದಿ ಅರೇಬಿಯಾಕ್ಕೆ ಹೊರಡುವ ಮೊದಲು ನ್ಯೂಕ್ಯಾಸಲ್‌ನಲ್ಲಿ ಐದು ವರ್ಷಗಳನ್ನು ಕಳೆದಿದ್ದರು.
"ಕೆಲವು ಸಕಾರಾತ್ಮಕ ಸುದ್ದಿಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ @ChristianAtsu20" ಎಂದು ಇಂಗ್ಲಿಷ್ ಕ್ಲಬ್ ಟ್ವಿಟರ್‌ನಲ್ಲಿ ತಿಳಿಸಿದೆ.
"ನಾವು ಘಾನಾ ಇಂಟರ್ನ್ಯಾಷನಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಮತ್ತು ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ಬಲಿಪಶುಗಳಿಗಾಗಿ ಪ್ರಾರ್ಥಿಸುತ್ತೇವೆ. ಸಕಾರಾತ್ಮಕ ಸುದ್ದಿಯ ವಿಶ್ವಾಸದಲ್ಲಿದ್ದೇವೆ" ಎಂದು ಘಾನಾ ಫುಟ್ಬಾಲ್ ಅಸೋಸಿಯೇಶನ್ ಟ್ವಿಟರ್ ನಲ್ಲಿ ತಿಳಿಸಿದೆ.
2019ರಲ್ಲಿ ಘಾನಾ ಪರ ಕೊನೆಯ ಪಂದ್ಯ ಆಡಿದ್ದ ಅಟ್ಸು ಅಧಿಕೃತವಾಗಿ ಫುಟ್ಬಾಲ್ ನಿಂದ ನಿವೃತ್ತಿಯಾಗಿಲ್ಲ.
"ಕಠಿಣ ಪರಿಸ್ಥಿತಿಯನ್ನು ಪರಿಗಣಿಸಿ ಹಯಾಟ್ಸ್‌ಪೋರ್ ಹಾಗೂ ಟರ್ಕಿಶ್ ಫುಟ್ಬಾಲ್ ಫೆಡರೇಶನ್ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸುವ ನಮ್ಮ ಪ್ರಯತ್ನಗಳನ್ನು ನಾವು ಮುಂದುವರಿಸುತ್ತೇವೆ" ಎಂದು ಅದು ತಿಳಿಸಿದೆ.
ಸೋಮವಾರ ಮುಂಜಾನೆ ಸಂಭವಿಸಿದ 7.8 ತೀವ್ರತೆಯ ಭೂಕಂಪದ ನಂತರ ಡಝನ್ ಗಟ್ಟಲೆ ರಾಷ್ಟ್ರಗಳು ಸಹಾಯ ನೀಡುವ ವಾಗ್ದಾನ ಮಾಡಿವೆ,