ಮಣಿಪಾಲ ಫ್ಲ್ಯಾಟ್‌ನಲ್ಲಿ ಕಳವು ಪ್ರಕರಣ: ಆರೋಪಿ ಬಂಧನ

ಮಣಿಪಾಲ: ಕೆಲವು ದಿನಗಳ ಹಿಂದೆ ಮಣಿಪಾಲದ ವಿದ್ಯಾರತ್ನ ನಗರದ ಫ್ಲ್ಯಾಟ್‌ವೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತರ್‌ಜಿಲ್ಲಾ ಕಳವು ಆರೋಪಿಯನ್ನು ಮಣಿಪಾಲ ಪೊಲೀಸರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಡ್ಡೇರಿ ಎಂಬಲ್ಲಿ ಫೆ.5ರಂದು ಬಂಧಿಸಿದ್ದಾರೆ.
ಮುರುಳಿ ಎನ್.ಡಿ. ಬಂಧಿತ ಆರೋಪಿ. ಈತ ವಿದ್ಯಾರತ್ನ ನಗರದಲ್ಲಿರುವ ಕೀರ್ತಿ ಸಾಮ್ರಾಟ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ ನುಗ್ಗಿ 3.23ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್, ಕ್ಯಾಮೆರಾ, ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್, ಪರ್ಸ್, ಮೊಬೈಲ್ ಕಳವು ಮಾಡಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈತನಿಂದ ಕಳವು ಮಾಡಿದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈತ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಕಳವು ಪ್ರಕರಣದ ಹಳೆ ಆರೋಪಿಯಾಗಿದ್ದಾನೆ. ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ. ನೇತೃತ್ವದಲ್ಲಿ ಎಸ್ಸೈ ಗಳಾದ ನವೀನ್ ನಾಯ್ಕ್, ರುಕ್ಮ ನಾಯ್ಕ್, ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಥಾಮ್ಸನ್, ಅಬ್ದುಲ್ ರಝಾಕ್, ಅರುಣ್ ಕುಮಾರ್ ಈ ಕಾರ್ಯಾ ಚರಣೆ ನಡೆಸಿದ್ದಾರೆ.